More

    ಹೊಟ್ಟೆಯ ಕೊಬ್ಬು ಕರಗಿಸಲು ಈ ಯೋಗಾಸನ ಉಪಯುಕ್ತ!

    ಹೊಟ್ಟೆಯ ಕೊಬ್ಬು ಕರಗಿಸಲು ಮತ್ತು ಬೆನ್ನು ನೋವು ನಿವಾರಿಸಲು ಉಪಯುಕ್ತವಾದ ಯೋಗಾಸನವೆಂದರೆ ಧನುರಾಸನ. ಧನುಸ್ ಎಂದರೆ ಬಿಲ್ಲು. ಈ ಆಸನದಲ್ಲಿ ಬೆನ್ನು ಬಿಲ್ಲಿನಂತೆ ಬಾಗಿರುತ್ತದೆ.

    ಉಪಯೋಗಗಳು: ಬೆನ್ನು ನೋವು ಪರಿಹಾರಕ್ಕೆ ಧನುರಾಸನ ಉಪಕಾರಿಯಾಗಿದೆ. ಎದೆ, ಹೃದಯ, ಹೊಟ್ಟೆ, ಶ್ವಾಸಕೋಶಗಳು ಬಲಿಷ್ಠವಾಗುತ್ತವೆ. ಹೊಟ್ಟೆಯ ಕೊಬ್ಬು ಬೇಗ ಕರಗುತ್ತದೆ.

    ಇದನ್ನೂ ಓದಿ: ರಾಜ್ಯದಲ್ಲಿ ನಾಲ್ಕು ದಿನ ಭಾರಿ ಮಳೆ; ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

    ಅಭ್ಯಾಸ ಕ್ರಮ: ಮೊದಲು ಮಕರಾಸನದಲ್ಲಿ, ಕೆಳಮುಖ ಮಾಡಿ, ಹೊಟ್ಟೆಯನ್ನು ನೆಲಕ್ಕೆ ತಾಗಿಸಿ ಉದ್ದಕ್ಕೂ ಮಲಗಬೇಕು. ಆಮೇಲೆ ಕಾಲನ್ನು ಜೋಡಿಸಿ, ಕೈಗಳನ್ನು ಚಾಚಿ ಹಿಂದಕ್ಕೆ ತರಬೇಕು. ಉಸಿರನ್ನು ಹೊರಕ್ಕೆ ಬಿಟ್ಟು ಮೊಣಕಾಲುಗಳನ್ನು ಬಗ್ಗಿಸಿ ಕೈಗಳಿಂದ ಆಯಾ ಕಾಲಿನ ಮಣಿಗಂಟನ್ನು ಹಿಡಿದುಕೊಂಡು, ಉಸಿರನ್ನು ತೆಗೆದುಕೊಳ್ಳುತ್ತಾ ಕಾಲುಗಳನ್ನು ಎಳೆದುಕೊಂಡು ಬೆನ್ನನ್ನು ಬಿಲ್ಲಿನಂತೆ ಬಾಗಿಸಬೇಕು. ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸುತ್ತಾ ಹೊಟ್ಟೆಯ ಆಧಾರದಲ್ಲಿ ವಿರಮಿಸಬೇಕು. ಶಿರಸನ್ನು ಮೇಲಕ್ಕೆತ್ತಿರಬೇಕು. ಅನಂತರ ಉಸಿರನ್ನು ಬಿಡುತ್ತಾ ಕಾಲುಗಳನ್ನು ಕೆಳಗೆ ಬಿಟ್ಟು, ವಿಶ್ರಾಂತಿ ಪಡೆಯಬೇಕು.

    ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಮಾಡಬೇಕು. ಹೆಚ್ಚಿನ ರಕ್ತದೊತ್ತಡ, ಹೃದಯದ ಸಮಸ್ಯೆ ಇದ್ದವರು ಧನುರಾಸನ ಮಾಡಬಾರದು.

    ಚಿಕ್ಕಚೊಕ್ಕ ಗಣೇಶೋತ್ಸವ! ಆಯೋಜಕರು ಲಸಿಕೆ ಪಡೆದಿರಬೇಕು, ಜನಜಂಗುಳಿ ಸಲ್ಲ… ಇಲ್ಲಿವೆ, ಮಾರ್ಗಸೂಚಿಗಳು!

    ಜಾವೆದ್​ ಅಕ್ತರ್​ ಹೇಳಿಕೆ ಬಗ್ಗೆ ಆಕ್ರೋಶ; ಸಂಘ ಪರಿವಾರದ ಕ್ಷಮೆ ಕೇಳಿ ಎಂದ ಬಿಜೆಪಿ ವಕ್ತಾರ

    VIDEO| ಕೆಸರುಗದ್ದೆಯಾಗಿರುವ ರಸ್ತೆ! ಮೋದಿಗೆ ಟ್ವೀಟ್​ ಮಾಡಿದ ಹಳ್ಳಿಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts