More

    ಅಚ್ಚರಿಯಾಗುವಂತೆ ಹೊಟ್ಟೆಯ ಬೊಜ್ಜು ಕರಗಿಸುತ್ತದೆ, ಈ ಯೋಗಾಸನ!

    ಹೊಟ್ಟೆಯ ಬೊಜ್ಜನ್ನು ಕರಗಿಸಲು ಉಪಯುಕ್ತವಾಗುವ ಯೋಗಾಸನವೆಂದರೆ, ಜಠರ ಪರಿವೃತ್ತಾಸನ ಅಥವಾ ಜಠರ ಪರಿವರ್ತನಾಸನ. ಜಠರ ಎಂದರೆ ಹೊಟ್ಟೆ ಎಂದರ್ಥ. ಪರಿವೃತ್ತಿ ಅಥವಾ ಪರಿವರ್ತನೆ ಎಂದರೆ ಬದಲಾವಣೆ ಅಥವಾ ಸುತ್ತುವುದು ಎಂದು. ಈ ಆಸನದ ಅಭ್ಯಾಸದಿಂದ ಹೊಟ್ಟೆಯ ಭಾಗವು ಎಳೆತಕ್ಕೆ ಒಳಗಾಗಿ ಉತ್ತಮ ವ್ಯಾಯಾಮವಾಗುತ್ತದೆ.

    ಪ್ರಯೋಜನಗಳು: ವಿಶೇಷವಾಗಿ, ಹೊಟ್ಟೆಯ ಬೊಜ್ಜು ಕರಗುತ್ತದೆ. ಹೊಟ್ಟೆಯ ಗ್ಯಾಸ್ ಮತ್ತು ಗ್ಯಾಸ್ಟ್ರಿಕ್​ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸೊಂಟ ನೋವು, ಹೊಟ್ಟೆ ನೋವು, ಅಸ್ತಮಾ, ಡಯಾಬಿಟೀಸ್ ಹತೋಟಿಗೆ ಕೂಡ ಇದು ಉಪಯುಕ್ತವಾದುದು. ಜೀರ್ಣಶಕ್ತಿ ಹೆಚ್ಚುತ್ತದೆ. ಮಲಬದ್ಧತೆ ನಿವಾರಣೆಯಾಗುತ್ತದೆ.

    ಇದನ್ನೂ ಓದಿ: ಮಲ್ಪೆಯಲ್ಲಿ ಸಮುದ್ರಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಬೆನ್ನಿನ ಮೇಲೆ ಮಲಗಿ, ಕಾಲುಗಳನ್ನು ಜೋಡಿಸಬೇಕು. ಎರಡೂ ಕೈಗಳನ್ನು ಭುಜದ ಮಟ್ಟಕ್ಕೆ ತಂದು ನೇರವಾಗಿಸಿ, ಚಾಚಬೇಕು. ಎರಡೂ ಕಾಲುಗಳನ್ನು, ಉಸಿರನ್ನು ತೆಗೆದುಕೊಳ್ಳುತ್ತಾ, 90 ಡಿಗ್ರಿ ಕೋನದವರೆಗೆ ಮೇಲಕ್ಕೆತ್ತಿ ನಿಲ್ಲಿಸಬೇಕು. ಹಾಯಾಗಿರಬೇಕು. ಈಗ ಮತ್ತೆ ಉಸಿರನ್ನು ತೆಗೆದುಕೊಂಡು ಉಸಿರನ್ನು ಬಿಡುತ್ತಾ, ಎರಡೂ ಕಾಲುಗಳನ್ನು ಬಲಗೈಯ ಮೇಲಕ್ಕೆ ತಂದು ನೆಲಕ್ಕೆ ತಾಗಿಸಬೇಕು. ಈ ಸಮಯದಲ್ಲಿ ಬೆನ್ನು ನೆಲಕ್ಕೆ ಒತ್ತಿದ್ದು, ಬಲಭುಜ ನೆಲದಿಂದ ಏಳದಂತೆ ನೋಡಿಕೊಳ್ಳಬೇಕು. ಈ ಸ್ಥಿತಿಯಲ್ಲಿ ಹೊಟ್ಟೆಯ ಸ್ನಾಯುಗಳು ತಿರುಚಿದಂತಾಗುತ್ತದೆ. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಮತ್ತೆ ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ಕಾಲುಗಳನ್ನು ಮೇಲಕ್ಕೆ ತರಬೇಕು. ಮತ್ತೆ ಉಸಿರನ್ನು ಬಿಡುತ್ತಾ ಎಡಪಾರ್ಶ್ವಕ್ಕೆ ಕಾಲುಗಳನ್ನು ಇಳಿಸಿ, ಎಡಗೈಯ ಮೇಲಿರಿಸಿಬೇಕು. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ತೆಗೆದುಕೊಂಡು ಕಾಲುಗಳನ್ನು ಮೇಲಕ್ಕೆ ತರಬೇಕು. ನಂತರ ಕೆಳಗಿಳಿಸಿ ವಿಶ್ರಮಿಸಬೇಕು.

    ಒಮ್ಮೆ ಅಭ್ಯಾಸವಾದರೆ ಎರಡು-ಮೂರು ಬಾರಿ ಮಾಡಬಹುದು. ತೀರಾ ಸೊಂಟ ನೋವು ಅಥವಾ ಬೆನ್ನು ನೋವು ಇರುವವರು ಈ ಆಸನವನ್ನು ಮಾಡುವುದು ಬೇಡ. ಈ ಜಠರ ಪರಿವರ್ತನಾಸನವನ್ನು ಶಿಸ್ತುಬದ್ಧವಾಗಿ ಕ್ರಮವತ್ತಾಗಿ ಉಸಿರಿನ ಗತಿಯೊಂದಿಗೆ ಅಭ್ಯಸಿಸುವುದರಿಂದ ಅಚ್ಚರಿಯ ರೀತಿಯಲ್ಲಿ ಹೊಟ್ಟೆಯ ಬೊಜ್ಜು ಕರಗುತ್ತದೆ.

    ಶಾಲೆ ವೇಳೆಯೇ ರಿಪೇರಿ ಕೆಲಸ: ಛಾವಣಿ ಕುಸಿದು 25 ಮಕ್ಕಳಿಗೆ ಗಾಯ

    ತಾವು ಧರಿಸಿದ್ದ ಮಾಸ್ಕನ್ನೇ ತೆಗೆದು ಸಂಸದರಿಗೆ ತೊಡಿಸಿದ ಸಚಿವ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts