More

    ಶಾಲೆ ವೇಳೆಯೇ ರಿಪೇರಿ ಕೆಲಸ: ಛಾವಣಿ ಕುಸಿದು 25 ಮಕ್ಕಳಿಗೆ ಗಾಯ

    ಚಂಡೀಗಡ: ಶಾಲೆಯಲ್ಲಿ ಪಾಠ ಕೇಳುತ್ತಾ ಕೂತಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಮೇಲೆ ಛಾವಣಿ ಕುಸಿದುಬಿದ್ದು, 25 ಮಕ್ಕಳು ಗಾಯಗೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ತರಗತಿಯ ವೇಳೆಯಲ್ಲೇ ಕಟ್ಟಡ ರಿಪೇರಿ ಕೆಲಸ ನಡೆಸಿದ್ದ ವೇಳೆ ಈ ಅನಾಹುತ ಸಂಭವಿಸಿದೆ.

    ಹರಿಯಾಣದ ಸೋನಿಪತ್​ ಜಿಲ್ಲೆಯ ಗನ್ನೌರ್​ ತಹಸೀಲಿನ ಬಾಯಿ ಗ್ರಾಮದಲ್ಲಿ ಶಾಲೆಯೊಂದರ ಛಾವಣಿ ಮಳೆಯಿಂದಾಗಿ ಸೋರುವಂತಾಗಿತ್ತು. ಛಾವಣಿ ಸರಿಪಡಿಸಲು ರಿಪೇರಿ ಕಾರ್ಯ ಕೈಗೊಳ್ಳಲಾಗಿತ್ತು. ಒಂದು ಕೊಠಡಿಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗಳು ಪಾಠ ಕೇಳುತ್ತಾ ಇದ್ದರು. ಆ ಸಂದರ್ಭಕ್ಕೆ ಛಾವಣಿಯು ದಿಢೀರನೇ ಕುಸಿದು ಬಿತ್ತು. ತರಗತಿಯಲ್ಲಿದ್ದ 25 ಮಕ್ಕಳಿಗೆ ಮತ್ತು ರಿಪೇರಿ ಕೆಲಸ ಮಾಡುತ್ತಿದ್ದ ಮೂರು ಜನ ನಿರ್ಮಾಣ ಕಾರ್ಮಿಕರಿಗೆ ಗಾಯಗಳಾದವು. ಅವರಲ್ಲಿ 5 ಮಕ್ಕಳಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎನ್ನಲಾಗಿದೆ. (ಏಜೆನ್ಸೀಸ್)

    ತಾವು ಧರಿಸಿದ್ದ ಮಾಸ್ಕನ್ನೇ ತೆಗೆದು ಸಂಸದರಿಗೆ ತೊಡಿಸಿದ ಸಚಿವ!

    ಸಿಧು ‘ಸೂಪರ್​ ಸಿಎಂ’ ಆಗಲು ಪ್ರಯತ್ನಿಸಿದರೆ ಕಾಂಗ್ರೆಸ್​ಗೆ ಕುತ್ತು ಎಂದ ಕ್ಯಾಪ್ಟನ್!

    ಬಿಜೆಪಿ ನಾಯಕರ ಕಛೇರಿಯಲ್ಲಿ ಕಾರ್ಯಕರ್ತೆ ಮೇಲೆ ಲೈಂಗಿಕ ಶೋಷಣೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts