More

    ಕಿಬ್ಬೊಟ್ಟೆಗೆ ವ್ಯಾಯಾಮ, ಬೆನ್ನೆಲುಬಿಗೆ ಶಕ್ತಿ ನೀಡುವ ‘ಏಕಪಾದ ಕೌಂಡಿನ್ಯಾಸನ’

    ಹೊಟ್ಟೆ, ಕಿಬ್ಬೊಟ್ಟೆಯ ಭಾಗಗಳಿಗೆ ಉತ್ತಮ ವ್ಯಾಯಾಮ ನೀಡುವ ಮತ್ತು ಬೆನ್ನಿಗೆ ಶಕ್ತಿ ನೀಡುವ ಯೋಗಾಸನವೆಂದರೆ ಏಕಪಾದ ಕೌಂಡಿನ್ಯಾಸನ. ಏಕಪಾದವೆಂದರೆ ಒಂದು ಹೆಜ್ಜೆ. ಕೌಂಡಿನ್ಯ ಎಂಬುದು ಒಬ್ಬ ಮಹರ್ಷಿಯ ಹೆಸರು. ಇದು ತೋಳಿನ ಆಧಾರದ ಮೇಲೆ ಕಾಲುಗಳ ಸಮತೋಲನ ಸಾಧಿಸುವ, ಸವಾಲಿನಂತಿರುವ ವಿಶಿಷ್ಟ ಆಸನವಾಗಿದೆ. ಇದಕ್ಕೆ ಕಡಿಮೆ ಹಾರುವ ತೋಳಿನ ಭಂಗಿ ಎಂಬ ಹೆಸರಿದೆ.

    ಪ್ರಯೋಜನಗಳು: ಈ ಆಸನ ಮಾಡಿದಾಗ, ಕಿಬ್ಬೊಟ್ಟೆಯ ಮೇಲಿನ ಒತ್ತಡದಿಂದ ಅದರ ಭಾಗಗಳು ಬಲಗೊಳ್ಳುತ್ತವೆ. ಹೊಟ್ಟೆಯ ಅಂಗಗಳಿಗೆ ಅಂಗಮರ್ದನ ಒದಗಿಬರುತ್ತದೆ. ಅಲ್ಲದೆ, ಈ ಭಂಗಿಯಲ್ಲಿನ ಬೆನ್ನೆಲುಬಿನ ತಿರುಚು ಬೆನ್ನೆಲುಬಿಗೆ ತಾರುಣ್ಯವನ್ನು ಕಲ್ಪಿಸಿ, ಹೆಚ್ಚು ಶಕ್ತಿ ನೀಡುತ್ತದೆ. ತೋಳುಗಳು ಮತ್ತು ಕುತ್ತಿಗೆಯ ಬಲ ಕೂಡ ವರ್ಧಿಸುತ್ತದೆ.

    ಇದನ್ನೂ ಓದಿ: ಡೆಂಘೆ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಕೈಗಳನ್ನು ಊರಿ, ಉಸಿರನ್ನು ತೆಗೆದುಕೊಳ್ಳುತ್ತಾ, ಮುಂದಕ್ಕೆ ಬಾಗುವುದು. ಒಂದು ತೋಳಿನ ಆಧಾರದ ಮೇಲೆ ಒಂದು ಕಾಲನ್ನು ಪಕ್ಕಕ್ಕೆ ಚಾಚಿ, ಇನ್ನೊಂದು ಕಾಲನ್ನು ಹಿಂದಕ್ಕೆ ನೇರವಾಗಿ ಚಾಚುವುದು. ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಮರಳಬೇಕು. ಈ ಆಸನವನ್ನು ಗುರು ಮುಖೇನ ಕಲಿತು ಮಾಡುವುದು ಉತ್ತಮ.

    ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ

    VIDEO| ಸ್ಕೂಟರಲ್ಲಿ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ ಬುರ್ಖಾ ತೆಗೆಸಿದರು! ವೈರಲ್​ ಆಯ್ತು ವಿಡಿಯೋ

    ಚಿಕ್ಕ ವಯಸ್ಸಲ್ಲಿ ರೈತನ ವೇಷ ಧರಿಸಿದ್ದ ಈ ಹುಡುಗ ಯಾರು, ಹೇಳಬಲ್ಲಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts