More

    ಡಯಾಬಿಟೀಸ್​ ನಿಯಂತ್ರಣಕ್ಕೆ ಸಹಕಾರಿ ಈ ಯೋಗಾಸನ

    ಮಧುಮೇಹ ಅರ್ಥಾತ್​ ಡಯಾಬಿಟೀಸ್​ ನಿಯಂತ್ರಿಸುವುದಕ್ಕೆ ಸಹಕಾರಿಯಾದ ಆಸನವೆಂದರೆ ‘ಅರ್ಧ ಮತ್ಸ್ಯೇಂದ್ರಿಯಾಸನ’. ಈ ಆಸನಕ್ಕೆ ಮತ್ಸ್ಯೇಂದ್ರಿಯ ಎಂಬ ಯೋಗಿಯ ಹೆಸರನ್ನು ಇಡಲಾಗಿದೆ. ಇದು ದೇಹವನ್ನು ತಿರುಚಿ ಮಾಡುವ ಭಂಗಿಯಾಗಿದ್ದು, ಕ್ರಮವತ್ತಾಗಿ ನಿಯಮಿತವಾಗಿ ಅಭ್ಯಾಸ ಮಾಡಿದರೆ, ಮಧುಮೇಹದ ಹತೋಟಿ ಸಾಧ್ಯ.

    ಪ್ರಯೋಜನಗಳು: ಬೆನ್ನುಮೂಳೆ ಬಲಗೊಳ್ಳುತ್ತದೆ. ಬೆನ್ನುಮೂಳೆಯ ಸ್ಥಿತಿಸ್ಥಾಪಕತ್ವ ಹೆಚ್ಚಿಸುತ್ತದೆ. ಬೆನ್ನುಹುರಿಯು ಬಲಗೊಳ್ಳುತ್ತದೆ. ಬೆನ್ನುಹುರಿಯ ನಡುವಿನ ನೋವು ನಿಯಂತ್ರಣವಾಗುತ್ತದೆ. ಪೃಷ್ಠದ ಕೀಲುಗಳ ಬಿಗಿತ ನಿವಾರಣೆಯಾಗುತ್ತದೆ. ಭುಜಗಳು ಮತ್ತು ಕುತ್ತಿಗೆಯ ಒತ್ತಡವನ್ನು ನಿವಾರಿಸುತ್ತದೆ. ಈ ಆಸನ ಮಾಡಿದಾಗ ಹೊಟ್ಟೆಯ ಅಂಗಗಳಿಗೆ ಮಸಾಜ್​ ದೊರಕುತ್ತದೆ. ಜೀರ್ಣಶಕ್ತಿ ಉತ್ತಮಗೊಂಡು ಮಲಬದ್ಧತೆ ನಿಯಂತ್ರಣವಾಗುತ್ತದೆ. ಮಧುಮೇಹದ ನಿಯಂತ್ರಣಕ್ಕೆ ಇದು ಬಹಳ ಸಹಕಾರಿ. ಪಿತ್ತಕೋಶದ ಕಾರ್ಯ ಚೆನ್ನಾಗಿ ಜರಗುತ್ತದೆ. ವಿಶೇಷವಾಗಿ, ಅನಾಹತ ಚಕ್ರ ಬಲಗೊಳ್ಳಲು ಈ ಆಸನ ಸಹಕಾರಿಯಾಗುತ್ತದೆ.

    ಇದನ್ನೂ ಓದಿ: ಏಕಾಗ್ರತೆ ಹೆಚ್ಚಿಸಲು ಬಲು ಉಪಯುಕ್ತ ಈ ಯೋಗಾಸನ!

    ಅಭ್ಯಾಸಕ್ರಮ: ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು. ಬಲಗಾಲನ್ನು ಮಡಿಚಿ ಎಡಪೃಷ್ಠದ ಕೆಳಗಿಡುವುದು. ಎಡಗಾಲನ್ನು ಮಡಿಸಿ ಬಲಗಾಲಿನ ಮೇಲಿನಿಂದ ತಂದು ಬಲಮಂಡಿಯ ಹೊರಕ್ಕೆ ಇಡುವುದು. ಬೆನ್ನು, ಕುತ್ತಿಗೆ ನೇರ ಮಾಡಿ ಎಡಗೈಯನ್ನು ನೇರವಾಗಿಸಿ, ಹಿಂದಕ್ಕೆ ತೆಗೆದುಕೊಂಡು ಸೀಟಿನ ಹಿಂದೆ ನೆಲಕ್ಕೆ ಊರಿಡುವುದು. ಇನ್ನೊಂದು ಕೈಯಿಂದ ಎಡಗಾಲಿನ ಮಂಡಿಯನ್ನು ಬಳಸಿ, ಎಡಗಾಲ ಪಾದ ಅಥವಾ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. ಬೆನ್ನು ಕುತ್ತಿಗೆ ನೇರವಾಗಿಟ್ಟುಕೊಂಡು, ಊರಿದ್ದ ಕೈಯನ್ನು ಬಲತೊಡೆಯ ಪಕ್ಕಕ್ಕೆ ಒತ್ತಿಡಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸಬೇಕು. ನಂತರ ಬಲಗೈಯನ್ನು ಸರಿಮಾಡಿಕೊಂಡು, ಎಡಗೈಯನ್ನು ವಾಪಸ್​ ತಂದು ನಿಧಾನಕ್ಕೆ ಉಸಿರು ಬಿಡುತ್ತಾ ಸಹಜ ಸ್ಥಿತಿಗೆ ಬರುವುದು. ಇನ್ನೊಂದು ಪಾರ್ಶ್ವದಲ್ಲಿ ಕೂಡ ಹೀಗೆಯೇ ಕ್ರಮಬದ್ಧವಾಗಿ ಮಾಡುವುದು. ನಂತರ ಕಾಲು ಚಾಚಿಕೊಂಡು ಸ್ವಲ್ಪ ಹೊತ್ತು ವಿಶ್ರಮಿಸಬೇಕು.

    ತುಂಬಾ ಸೊಂಟ ನೋವು ಅಥವಾ ಕುತ್ತಿಗೆ ನೋವು ಇರುವವರು ಮಾಡಬಾರದು.

    ಹೊಟ್ಟೆಯ ಗ್ಯಾಸ್​​ ಸಮಸ್ಯೆ ಪರಿಹರಿಸಲು ‘ಪರಿಪೂರ್ಣ ಪವನಮುಕ್ತಾಸನ’

    9, 10ನೇ ತರಗತಿ: ಅರ್ಧ ದಿನ ಶಾಲೆ ಶುರು! ಹಾಜರಾಗಲು ಅನುಮತಿ ಪತ್ರ ಕಡ್ಡಾಯ; ವೇಳಾಪಟ್ಟಿ, ವಿವರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts