More

    ಸಿಕ್ಕಿದ್ದಕ್ಕಿಂತ ಹೆಚ್ಚು ಡೋಸ್ ಲಸಿಕೆ ನೀಡಿತು ಈ ರಾಜ್ಯ! ನರ್ಸ್​ಗಳ ಕಾರ್ಯಕ್ಷಮತೆಯನ್ನು ಹೊಗಳಿದ ಸಿಎಂ

    ತಿರುವನಂತಪುರಂ : ಕರೊನಾ ಲಸಿಕೆಯ ಕೊರತೆಯ ಬಗ್ಗೆ ರಾಜ್ಯ ಸರ್ಕಾರಗಳು ತಲೆಕೆಡಿಸಿಕೊಂಡಿದ್ದರೆ, ಲಸಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ತಾಕೀತು ಮಾಡುತ್ತಿದೆ. ಈ ನಡುವೆ ಕೇರಳ ರಾಜ್ಯದಲ್ಲಿ ಲಭ್ಯ ಲಸಿಕೆಗಳಲ್ಲಿ ನಿಗದಿತ ಡೋಸ್​​ಗಳಿಗಿಂತ ಹೆಚ್ಚು ಡೋಸ್​ಗಳನ್ನು ನೀಡಲಾಗಿದೆ !

    ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ 73,38,806 ಡೋಸ್​ಗಳಷ್ಟು ಕರೊನಾ ಲಸಿಕೆಗಳನ್ನು ನೀಡಿತ್ತು. ಆದರೆ, ಪ್ರತಿಯೊಂದು ಲಸಿಕೆ ವಯಲ್​ಗಳಲ್ಲಿ ವೇಸ್ಟೇಜ್​ ಫ್ಯಾಕ್ಟರ್​ ಆಗಿ ಲಭ್ಯವಿರುವ ಲಸಿಕೆ ಪ್ರಮಾಣವನ್ನು ಬಿಸಾಡುವ ಬದಲು ಇನ್ನಷ್ಟು ಜನರಿಗೆ ಲಸಿಕೆ ನೀಡುವ ಕೆಲಸವನ್ನು ಕೇರಳದ ಆರೋಗ್ಯ ಕಾರ್ಯಕರ್ತರು ಮಾಡಿದ್ದಾರೆ. ಈ ಕಾರಣದಿಂದಾಗಿ ಒಟ್ಟು 74,26,164 ಡೋಸ್​ಗಳನ್ನು ಸಾಧಿಸಲಾಗಿದೆ ಎಂದು ರಾಜ್ಯದ ಸಿಎಂ ಪಿಣರಾಯಿ ವಿಜಯನ್ ಇಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

    ಇದನ್ನೂ ಓದಿ: ಖಾಸಗಿ ಸಹಭಾಗಿತ್ವದಿಂದ ಕರೊನಾ ವಿರುದ್ಧ ಪರಿಣಾಮಕಾರಿ ಸಮರ ಸಾಧ್ಯ : ಜಗದೀಶ ಶೆಟ್ಟರ್

    “ನಮ್ಮ ಆರೋಗ್ಯ ಕಾರ್ಯಕರ್ತರು, ವಿಶೇಷವಾಗಿ ನರ್ಸ್​ಗಳು ಸೂಪರ್​ ಎಫಿಷಿಯೆಂಟ್​ ಆಗಿದ್ದಾರೆ. ನಮ್ಮ ಹೃದಯಪೂರ್ವಕ ಪ್ರಶಂಸೆಗೆ ಅವರು ಅರ್ಹರಾಗಿದ್ದಾರೆ” ಎಂದು ವಿಜಯನ್ ಹೇಳಿದ್ದಾರೆ. ಕೇರಳ ಸಿಎಂರ ಈ ಟ್ವೀಟ್​ಅನ್ನು ರೀಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ನಮ್ಮ ಆರೋಗ್ಯ ಕಾರ್ಯಕರ್ತರು ಲಸಿಕೆ ವೇಸ್ಟೇಜ್​ಅನ್ನು ಕಡಿಮೆ ಮಾಡುವಲ್ಲಿ ಮಾದರಿಯನ್ನು ಸೃಷ್ಟಿಸಿರುವುದು ಸಂತೋಷ. ಇಂತಹ ಕಾರ್ಯ ಕರೊನಾ ವಿರುದ್ಧದ ಹೋರಾಟವನ್ನು ಸಶಕ್ತಗೊಳಿಸಲು ಬಹುಮುಖ್ಯವಾದುದು” ಎಂದಿದ್ದಾರೆ.

    ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇಂದು ಮೇಘಾಲಯ, ನಾಗಾಲ್ಯಾಂಡ್​, ಬಿಹಾರ, ಪಂಜಾಬ್, ದಾದ್ರ ಮತ್ತು ನಗರ್​ಹವೇಲಿ, ಹರಿಯಾಣ, ಮಣಿಪುರ, ಅಸ್ಸಾಂ, ತಮಿಳುನಾಡು, ಲಕ್ಷದ್ವೀಪಗಳು ಶೇ. 4.01 ರಿಂದ ಶೇ. 9.76 ರಷ್ಟು ಲಸಿಕೆ ವೇಸ್ಟೇಜ್ ವರದಿ ಮಾಡಿವೆ. (ಏಜೆನ್ಸೀಸ್)

    ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್​ ಹಿಡಿದು ಬೆದರಿಸಿದರು

    ಭಾರತಕ್ಕೆ 1 ಮಿಲಿಯನ್ ಕರೊನಾ ಲಸಿಕೆ ನೀಡಲಿದೆ ಸ್ವೀಡನ್

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts