More

    ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿ, ಈ ಸುಲಭ ಯೋಗಾಸನ!

    ತಪ್ಪಾಗಿ ನಿಲ್ಲುವುದರಿಂದ ದೇಹದ ತೂಕ ಕಾಲಿನ ಮೇಲೆ ಹೇಗೆಹೇಗೋ ಬಿದ್ದು, ಮಂಡಿನೋವು ಮುಂತಾದ ಸಮಸ್ಯೆಗಳು ಬರುತ್ತವೆ. ನಿಂತುಕೊಂಡು ಮಾಡುವ ಆಸನವಾದ ‘ತಾಡಾಸನ’ವು ನಿಲುವು ಸರಿಪಡಿಸುವ ಭಂಗಿಯಾಗಿದೆ.

    ತಾಡ ಎಂದರೆ ತಾಳೆಯ ಮರ. ತಾಡಾಸನವೆಂದರೆ ತಾಳೆಯ ಮರದಂತೆ ನೆಟ್ಟಗೆ ಅಲುಗಾಡದೆ ದೇಹವನ್ನು ನಿಲ್ಲಿಸುವ ಭಂಗಿ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಮಸ್ಥಿತಿಯಲ್ಲಿರಲು ತಾಡಾಸನ ಸಹಾಯ ಮಾಡುತ್ತದೆ. ಇದೊಂದು ಸರಳ ಆಸನವಾಗಿದ್ದು, ಅಭ್ಯಾಸ ಮಾಡುವುದು ಬಹು ಸುಲಭ.

    ಇದನ್ನೂ ಓದಿ: ಸಿಗದ ಮಾಸಾಶನ, ಸಂಕಷ್ಟದಲ್ಲಿ ಮಾಜಿ ಪೈಲ್ವಾನರ ಜೀವನ

    ಹೇಗೆ ಕಟ್ಟಡಕ್ಕೆ ಅಡಿಪಾಯ ಮುಖ್ಯವೋ, ಹಾಗೇ ನಮ್ಮ ದೇಹಕ್ಕೆ ಕೀಲುಗಳ ಆರೋಗ್ಯ ಮುಖ್ಯವಾಗಿರುತ್ತದೆ. ನಾವು ತಪ್ಪಾಗಿ ನಿಂತರೆ ಚಪ್ಪಲಿಯ ಸವೆತ ಸತ್ಯಾಂಶವನ್ನು ತಿಳಿಸುತ್ತದೆ. ತಾಡಾಸನದಲ್ಲಿ ಹೊಟ್ಟೆಯು ಹಿಂದೆ ಸರಿದು, ಎದೆಯು ಮುಂದಕ್ಕೆ ಬರುತ್ತದೆ. ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಈ ಆಸನ ಸಹಕಾರಿಯಾಗುತ್ತದೆ.

    ಪ್ರಯೋಜನ: ತಾಡಾಸನದ ಅಭ್ಯಾಸದಿಂದ ಸರಿಯಾಗಿ ನೆಟ್ಟಗೆ ನಿಲ್ಲುವ ಕ್ರಮ ಅಭ್ಯಾಸವಾಗುತ್ತದೆ. ದೇಹದ ಎಲ್ಲಾ ಭಾರವೂ ಎರಡೂ ಕಾಲುಗಳಿಗೆ ಸಮವಾಗಿ ಹಂಚಿಹೋಗುತ್ತದೆ. ಮೊಣಕಾಲು, ತೊಡೆಗಳು ಬಲಗೊಳ್ಳುತ್ತವೆ. ಚಪ್ಪಟೆ ಪಾದದ ಸಮಸ್ಯೆ ನಿವಾರಣೆಯಾಗುತ್ತದೆ. ಕೈಗಳನ್ನು ಶಿರಸ್ಸಿನ ಮೇಲೆ ತಂದಾಗ ಮನಸ್ಸಿನ ಒತ್ತಡ ನಿವಾರಣೆಯಾಗುತ್ತದೆ. ಉದರದ ಹಾಗೂ ಕರುಳಿನ ಸ್ನಾಯುಗಳು ಬಲಗೊಳ್ಳುತ್ತವೆ. ಬೆನ್ನಿನ ಹುರಿಯ ನರಗಳು ಪುನಶ್ಚೇತನಗೊಳ್ಳುತ್ತವೆ.

    ಇದನ್ನೂ ಓದಿ: ಮಾನಸಿಕ ಒತ್ತಡ ನಿಯಂತ್ರಣಕ್ಕೆ ಈ ಯೋಗಾಸನ ಮಾಡಿ

    ಅಭ್ಯಾಸ ಕ್ರಮ: ಜಮಖಾನದ ಮೇಲೆ ಎರಡೂ ಪಾದಗಳ ಹಿಮ್ಮಡಿ ಮತ್ತು ಹೆಬ್ಬೆರಳು ಪರಸ್ಪರ ತಾಗುವಂತೆ ಕಾಲುಜೋಡಿಸಿ ನೇರವಾಗಿ ನಿಲ್ಲಿ. ಮಂಡಿ ಚಿಪ್ಪು ಬಿಗಿ ಮಾಡಿಕೊಂಡು, ಹೊಟ್ಟೆ ಒಳಗೆಳೆದುಕೊಂಡು ಎದೆ ಉಬ್ಬಿಸಿ ನೆಟ್ಟಗೆ ಅಲುಗಾಡದೆ ನಿಲ್ಲಬೇಕು. ದೇಹದ ಭಾರ ಎರಡೂ ಕಾಲುಗಳಿಗೆ ಸಮವಾಗಿ ಹಂಚಿರಬೇಕು. ಕೈಗಳನ್ನು ತಿರುಗಿಸಿಕೊಂಡು ಉಸಿರನ್ನು ತೆಗೆದುಕೊಳ್ಳುತ್ತಾ ನಿಧಾನವಾಗಿ ತಲೆಯ ಮೇಲಕ್ಕೆ ಜೋಡಿಸಿ. ದೃಷ್ಟಿ ನೇರವಾಗಿರಲಿ. ಭುಜಗಳು ಸಡಿಲವಾಗಿರಲಿ. ಬೆನ್ನು ನೇರವಾಗಿರಲಿ. ಕಾಲುಗಳು ನೇರವಾಗಿರಲಿ. ಮಂಡಿ ಚಿಪ್ಪು ಬಿಗಿಯಾಗಿರಲಿ. ಸ್ವಲ್ಪ ಹೊತ್ತು ಸಹಜ ಉಸಿರಾಟ ನಡೆಸುತ್ತಾ ಹಾಯಾಗಿರಬೇಕು. ಆಮೇಲೆ ಕೈಗಳನ್ನು ತಿರುಗಿಸಿಕೊಂಡು ಉಸಿರನ್ನು ಬಿಡುತ್ತಾ ನಿಧಾನವಾಗಿ ಕೆಳಗಿಳಿಸಿ ವಿಶ್ರಮಿಸಬೇಕು.

    ಒಮ್ಮೆ ಅಭ್ಯಾಸವಾದ ಮೇಲೆ, 2-3 ಬಾರಿ ಮಾಡಬಹುದು. ಅಧಿಕ ತೂಕದ ವ್ಯಕ್ತಿಗಳು ಆರಂಭದಲ್ಲಿ ಗೋಡೆಗೆ ಒರಗಿ ಈ ಆಸನ ಅಭ್ಯಾಸ ಮಾಡಬಹುದು. ಗರ್ಭಿಣಿ ಸ್ತ್ರೀಯರು ಈ ಆಸನವನ್ನು ಹೆಚ್ಚು ಬಾರಿ ಮಾಡುವುದು ಬೇಡ. ವೆರಿಕೋಸ್ ಸಮಸ್ಯೆ ಇದ್ದವರು, ತುಂಬಾ ಮಂಡಿನೋವು, ತಲೆನೋವು, ಕಡಿಮೆ ರಕ್ತದೊತ್ತಡ ಇರುವವರು ಈ ಆಸನ ಮಾಡಬಾರದು.

    ಚಾಮುಂಡಿ ಬೆಟ್ಟದ ತಪ್ಪಲಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್​ ರೇಪ್​

    ಒಲಿಂಪಿಕ್ಸ್​ ಫೈನಲ್ಸ್​ ಮುನ್ನ ಕಾಣೆಯಾಗಿತ್ತು, ನೀರಜ್​ ಚೋಪ್ರಾರ ಜಾವೆಲಿನ್​!

    ಡ್ರಗ್ಸ್​​ ಸೇವನೆ ಖಚಿತವಾದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts