More

    24ರಂದು ಅಂಬೇಡ್ಕರ್ ಪುತ್ಥಳಿ ಅನಾವರಣ

    ಹೊಸಪೇಟೆ: ಹೊಸಪೇಟೆಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್‌ನಲ್ಲಿ ಸ್ಥಾಪಿಸಿರುವ ರಾಜ್ಯದ ಅತಿ ಎತ್ತರದ ಬಾಬಾ ಸಾಹೇಬರ ಕಂಚಿನ ಪುತ್ಥಳಿ ಮತ್ತು ಸರ್ಕಲ್ ಉದ್ಘಾಟನಾ ಸಮಾರಂಭವನ್ನು ಮಾ.24ರಂದು ಹಮ್ಮಿಕೊಳ್ಳಲಾಗಿದೆ ಎಂದು ವಿಜಯನಗರ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಕೆ.ಪಿ.ಉಮಾಪತಿ ತಿಳಿಸಿದರು.

    ಅಂದು ಸಂಜೆ 6ಕ್ಕೆ ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಕೋಡಿಹಳ್ಳಿ ದೇಶಿಕೇಂದ್ರ ಆದಿಜಾಂಬವ ಮಠ ಬೃಹನ್ಮಠದ ಷರಕ್ಷರಮುನಿ, ಹಂಪಿ ಮಾತಂಗ ಪರ್ವತದ ಪೂರ್ಣಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅಂಬೇಡ್ಕರ್ ವೃತ್ತವನ್ನು ಲೋಕಾರ್ಪಣೆ ಮಾಡುವರು. ನಂತರ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಬಾಬಾ ಸಾಹೇಬರ ಕಂಚಿನ ಪ್ರತಿಮೆ ಅನಾವರಣಗೊಳಿಸಲಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಚಿವ ಎಚ್.ಆಂಜನೇಯ, ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್.ಆನಂದ, ಹುಡಾ ಅಧ್ಯಕ್ಷ ಅಶೋಕ ಜೀರೆ ಹಾಗೂ ಸಮಾಜದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

    12.6 ಅಡಿ ಉದ್ದದ ಸ್ಟಾೃಚು: ಸಂಸತ್ತಿನ ಮೇಲೆ ಅಂಬೇಡ್ಕರ್ ಅವರು ನಿಂತಿರುವ ಶೈಲಿಯ ಕಂಚಿನ ಪ್ರತಿಮೆಯನ್ನು ಹೊಸಪೇಟೆಯಲ್ಲಿ ಸ್ಥಾಪಿಸಲಾಗಿದೆ. ಪಾರ್ಲಿಮೆಂಟ್ ಹಾಗೂ ಬಾಬಾ ಸಾಹೇಬರ ಪುತ್ಥಳಿ ಸಹಿತ ಒಟ್ಟು 12.6 ಅಡಿ ಎತ್ತರವಿವೆ. ರಾಜ್ಯದಲ್ಲಿ ಅತೀ ಎತ್ತರದ ಪುತ್ಥಳಿ ಹಾಗೂ ದೇಶದ ಎರಡನೇ ಅತಿ ಎತ್ತರ ಪ್ರತಿಮೆ ಹೊಂದಿರುವ ಹೆಗ್ಗಳಿಕೆ ಹೊಸಪೇಟೆಗೆ ಸಲ್ಲುತ್ತದೆ ಎಂದು ಹೇಳಿದರು.

    ಸಂಘದ ಗೌರವಾಧ್ಯಕ್ಷ ಎಂ.ಸಿ.ವೀರಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್ವರಲು, ಪ್ರಮುಖರಾದ ಚನ್ನವೀರಪ್ಪ, ವಿಜಯಕುಮಾರ, ಜಗನ್, ಮಾರಣ್ಣ, ಶೇಷು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts