More

    ಈ ಹೆಣ್ಣು ಶಾರ್ಕ್​ನ ವಯಸ್ಸು ಕೇವಲ 392 ವರ್ಷ !

    ಗ್ರೀನ್​ಲ್ಯಾಂಡ್ : ಗ್ಯಾಲಪಗೋಸ್ ಜೈಂಟ್ ಆಮೆಯ ಸರಾಸರಿ ಜೀವಿತಾವಧಿ 150-160 ವರ್ಷಗಳು, ಕೆಂಪು ಸಮುದ್ರದ ಅರ್ಚಿನ್ 100 ರಿಂದ 200 ವರ್ಷಗಳು ಬದುಕಬಲ್ಲವು. ಬೋಹೆಡ್ ತಿಮಿಂಗಿಲಗಳು 200 ವರ್ಷಗಳ ಕಾಲ ಬದುಕುತ್ತವೆ. ಇದೀಗ ಈ ಎಲ್ಲ ಜೀವಿಗಳನ್ನು ವಯಸ್ಸಿನಲ್ಲಿ ಮೀರಿಸಿರುವ ಗ್ರೀನ್​ಲ್ಯಾಂಡ್ ಶಾರ್ಕ್​ಗಳನ್ನು ಜಲವಿಜ್ನಾನಿಗಳು ಗುರುತಿಸಿದ್ದಾರೆ.

    2016 ರಲ್ಲಿ ಆರಂಭವಾದ ಅಧ್ಯಯನದಲ್ಲಿ, 28 ಗ್ರೀನ್‌ಲ್ಯಾಂಡ್ ಶಾರ್ಕ್​​ಗಳ ಗುಂಪಿನ ಹೆಣ್ಣು ಶಾರ್ಕ್​ಗಳ ಅಂದಾಜು ವಯಸ್ಸನ್ನು ಕಂಡುಹಿಡಿಯಲು ಸಂಶೋಧಕರು ರೇಡಿಯೊಕಾರ್ಬನ್ ಡೇಟಿಂಗ್ಅನ್ನು ಬಳಸಿದರು. ಆ ಪ್ರಕಾರ ಒಂದು ಹೆಣ್ಣು ಶಾರ್ಕ್​ ಸುಮಾರು 392 ವರ್ಷ ಬದುಕಿರುವುದು ಸಾಬೀತಾಗಿದೆ!

    ಇದನ್ನೂ ಓದಿ: ಆಮೆಗಳನ್ನೇ ತಿನ್ನುತ್ತವೆ ಏಡಿಗಳು! ಏಡಿ ಹುಟ್ಟಿದ್ದು ಜೇಡದಿಂದ..! ಏಡಿ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳಿವು..

    ಅಧ್ಯಯನದ ಪ್ರಕಾರ ಹೆಣ್ಣು ಶಾರ್ಕ್​ಗಳು ಒಂದು ವರ್ಷಕ್ಕೆ ಒಂದು ಸೆಂಟಿಮೀಟರ್ ದರದಲ್ಲಿ ಬೆಳೆಯುತ್ತವೆ ಮತ್ತು 150ನೇ ವರ್ಷ ವಯಸ್ಸಿಗೆ ಲೈಂಗಿಕ ಸಾಮರ್ಥ್ಯ ಗಳಿಸುತ್ತವೆ. ಈ ಶಾರ್ಕ್​ಗಳ ವಯಸ್ಸಿನ ಶ್ರೇಣಿಯು 272 ರಿಂದ 512 ವರ್ಷಗಳವರೆಗೆ ವಿಸ್ತರಿಸಿದೆ.

    “ನಾವು ಒಂದು ಅಸಾಮಾನ್ಯ ಪ್ರಾಣಿಯ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ ಎಂದು ನಮಗೆ ಗೊತ್ತಿತ್ತು. ಆದರೆ ನಾವೆಲ್ಲರೂ ಅವುಗಳ ನಿಜವಾದ ವಯಸ್ಸು ತಿಳಿದಾಗ ತುಂಬಾ ಆಶ್ಚರ್ಯಗೊಂಡೆವು” ಎಂದು ಅಧ್ಯಯನದ ವರದಿ ಸಿದ್ಧಪಡಿಸಿದ ಜೂಲಿಯಸ್ ನೀಲ್​ಸೆನ್​ ಹೇಳಿದ್ದಾರೆ.

    ಇದನ್ನೂ ಓದಿ: ಕುದುರೆ ಏರಿ ನಿಂತ… ಚೆಂದನೇ ಪೋಸ್​ ಕೊಟ್ಟ…. ಹೆಣ್ಮಕ್ಕಳು ಫಿದಾ… ಗಂಡುಮಕ್ಕಳು ಗರಂ!

    ಈವರೆಗೆ ಹನಾಕೋ ಎಂಬ ಹೆಸರಿನ ಜಪಾನೀಯ ಕೋಯ್​ ಮೀನು ಅತಿಹೆಚ್ಚು ವರ್ಷಗಳು ಬದುಕಿದ ಜಲಪ್ರಾಣಿಯ ದಾಖಲೆ ಹೊಂದಿತ್ತು. ಕೋಯಿ ಮೀನುಗಳ ಸರಾಸರಿ ಜೀವಿತಾವಧಿ 40 ವರ್ಷಗಳಾದರೂ, 1751 ರಲ್ಲಿ ಹುಟ್ಟಿ 1977 ರಲ್ಲಿ ಸತ್ತಿದ್ದ ಹನಾಕೋ ವಯಸ್ಸು 226 ವರ್ಷಗಳೆಂದು ಹೇಳಲಾಗಿತ್ತು. (ಏಜೆನ್ಸೀಸ್)

    ‘ಎಲೆಕ್ಷನ್ ಡ್ಯೂಟಿಗೆ ಯುಪಿ ಪೊಲೀಸ್ ಬೇಡ’ : ಟಿಎಂಸಿ ತಕರಾರು

    ಆಮೆಯಲ್ಲೂ ಇದೆ ಏಕಪತ್ನಿವ್ರತಸ್ಥ ಸಂಪ್ರದಾಯ! ಆಮೆಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳಿವು…

    ನಿಕಿತಾ ತೋಮರ್ ಹತ್ಯೆ : ಇಬ್ಬರು ಯುವಕರನ್ನು ಅಪರಾಧಿಗಳೆಂದು ಘೋಷಿಸಿದ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts