More

    Video | ಕಲ್ಯಾಣಮಂಟಪದಲ್ಲೇ ಕೈ ಎತ್ತಿದ ಮದುಮಗ, ಬಿದ್ದುಬಿದ್ದು ನಕ್ಕಳು ಮದುಮಗಳು; ಎಲ್ಲದಕ್ಕೂ ಕಾರಣನು ಅವನು…

    ಬೆಂಗಳೂರು: ಇತ್ತೀಚೆಗೆ ನಿಶ್ಚಿತಾರ್ಥ-ಮದುವೆಗಳ ಫೋಟೋಶೂಟ್​ ಎಂಬುದೇ ದೊಡ್ಡ ಟ್ರೆಂಡ್​ ಆಗಿರುವಂಥದ್ದು. ಅದರಲ್ಲೂ ವಿಭಿನ್ನತೆಗಾಗಿ ಫೋಟೋಗ್ರಾಫರ್ಸ್​ ಕೈಗೊಳ್ಳುವ ಕಾನ್ಸೆಪ್ಟ್​ಗಳು ಎಷ್ಟೋ ಸಲ ಭಾರಿ ಮೆಚ್ಚುಗೆಗೆ, ಕೆಲವೊಮ್ಮೆ ಭಾರಿ ನಗೆಪಾಟಲಿಗೆ ಒಳಗಾದ ಉದಾಹರಣೆಗಳೂ ಇವೆ. ಅಂಥದ್ದರಲ್ಲಿ ಇಲ್ಲೊಂದು ಫೋಟೋಶೂಟ್​ ಸಹಜವೆಂಬಂತೆ ನಗೆಯುಕ್ಕಿಸಿದ್ದು, ಸೀರಿಯಸ್​ ಆಗಿ ಪರಿಣಮಿಸಬಹುದಾದ ಸನ್ನಿವೇಶವೊಂದು ನಗೆಗಡಲಲ್ಲೇ ಅಲೆಯಂತೆ ಮಾಯವಾಗುವಂತೆ ಮಾಡಿದೆ.

    ಈ ಮದುವೆ ಎಲ್ಲಿ ನಡೆದಿದ್ದು, ಯಾವತ್ತು ನಡೆದಿದ್ದು ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ಇಲ್ಲವಾದರೂ, ಇದು ವೈರಲ್ ಆಗಿರುವುದಷ್ಟೇ ಅಲ್ಲ, ಇದನ್ನು ನೋಡಿದ ಹಲವರು ಕೂಡ ಬಿದ್ದುಬಿದ್ದು ನಕ್ಕಿದ್ದಾರೆ. ಮಾತ್ರವಲ್ಲ ವರನ ಮನಗೆದ್ದ ಈ ವಧು, ತನ್ನ ನಗುವಿನಿಂದಲೇ ಈಗ ಹಲವರ ಮನಗೆದ್ದಿದ್ದಾಳೆ. ಒಂದು ಗಂಭೀರ ಸನ್ನಿವೇಶ ಅತ್ಯಂತ ಹಾಸ್ಯಮಯ ಪ್ರಸಂಗವಾಗಿ ಪರಿಣಮಿಸುವಂತೆ ಮಾಡಿದ ವಧುವಿನ ಬಗ್ಗೆ ಅದೆಷ್ಟೋ ಮಂದಿ ಮೆಚ್ಚುವೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ‘ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನಕ್ಕಾಗಿ ಬೇಡ ಒತ್ತಾಯ..’; ರತ್ನದಂಥ ಮಾತಾಡಿದ ರತನ್ ಟಾಟಾ

    ವಧು-ವರ ಇಬ್ಬರೂ ಕಲ್ಯಾಣ ಮಂಟಪದಲ್ಲಿ ಇರುವಾಗ ಫೋಟೋಗ್ರಾಫರ್ ವಧುವಿನ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ. ಒಳ್ಳೇ ಆ್ಯಂಗಲ್​ನ ಉತ್ತಮ ಫೋಟೋಗಳಿಗಾಗಿ ಬೇರೆ ಬೇರೆ ಭಂಗಿಗಳಲ್ಲಿ ಕಾಣಿಸುವಂತೆ ಸೂಚನೆ ನೀಡುತ್ತಿದ್ದ ಫೋಟೋಗ್ರಾಫರ್ ಬಗ್ಗೆ ವರ ಅದಾಗಲೇ ಅಸಹನೆಗೊಂಡಿದ್ದ. ಕೆಲವೇ ಕ್ಷಣದಲ್ಲಿ ಫೋಟೋಗ್ರಾಫರ್ ಒಮ್ಮೆ ವಧುವಿನ ಹತ್ತಿರಕ್ಕೆ ತೆರಳಿ ‘ಹೀಗೆ ನಿಲ್ಲಿ’ ಎನ್ನುತ್ತಿದ್ದಂತೆ ತಾಳ್ಮೆಯನ್ನು ಕಳೆದುಕೊಂಡು ವರ ಕೈ ಎತ್ತಿ ಫೋಟೋಗ್ರಾಫರ್​ಗೆ ಬಾರಿಸಿಯೇ ಬಿಟ್ಟಿದ್ದಾನೆ. ವಧು ಇದರಿಂದ ವಿಚಲಿತಳಾಗುವ ಬದಲಿಗೆ ಬಿದ್ದು ಬಿದ್ದು ನಕ್ಕುಬಿಟ್ಟಳು. ಮಾತ್ರವಲ್ಲ ಪೆಟ್ಟುತಿಂದ ಫೋಟೋಗ್ರಾಫರ್ ಮುಖದಲ್ಲಿ ಕೂಡ ನಗುಮೂಡಿದ್ದು ವಿಡಿಯೋದಲ್ಲಿ ಕಾಣಿಸಿತ್ತು. ಇದು ನೈಜ ಸನ್ನಿವೇಶವೋ ಅಥವಾ ಫೋಟೋಶೂಟ್​​ಗಾಗಿ ತಮಾಷೆಯಾಗಿ ಚಿತ್ರೀಕರಿಸಿದ ದೃಶ್ಯವೋ ಎಂಬ ಅನುಮಾನ ಮೂಡುವಂತಿದ್ದರೂ, ಈ ವಿಡಿಯೋ ನೋಡಿದ ಬಹುತೇಕ ಎಲ್ಲರೂ ನಗಲಾರಂಭಿಸುವುದಂತೂ ನಿಜ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts