More

    ಕಲಬುರಗಿ ಮಹಾನಗರ ಪಾಲಿಕೆ BJP ತೆಕ್ಕೆಗೆ: ಮೇಯರ್ ಆಗಿ ವಿಶಾಲ್ ದರ್ಗಿ, ಉಪಮೇಯರ್ ಆಗಿ ಶಿವಾನಂದ ಆಯ್ಕೆ

    ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಪಾಲಿಕೆ ನೂತನ ಮೇಯರ್ ಅಗಿ ವಿಶಾಲ್ ದರ್ಗಿ ಹಾಗೂ ಉಪಮೇಯರ್ ಆಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.

    ಚುನಾವಣೆಗೆ ಹಾಜರಾದ 65 ಸದಸ್ಯರಲ್ಲಿ 33 ಮತ ಬಿಜೆಪಿ ಪಾಲಾಗಿದ್ದು, ಇದೇ ಮೊದಲ ಬಾರಿಗೆ ಯಾರ ಬೆಂಬಲವೂ ಇಲ್ಲದೆ, ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಪಡೆದಿದೆ. ಜೆಡಿಎಸ್ ಬೆಂಬಲ ಸಿಕ್ಕರೂ 32 ಮತ ಗಳಿಸುವ ಮೂಲಕ ಕೇವಲ ಒಂದು ಮತದಿಂದ ಕಾಂಗ್ರೆಸ್​ ಸೋಲ ಅನುಭವಿಸಿದೆ.

    ಇದನ್ನೂ ಓದಿ: ಬಿಯರ್ ಮೇಲೆ 10 ರೂ. ಹೆಚ್ಚುವರಿ ವಸೂಲಿ ಮಾಡಿದ್ದವನಿಗೆ ಜೈಲು; ಬಾರ್ ಲೈಸೆನ್ಸ್ ಹೊಂದಿದ್ದ ಮಾಲೀಕನಿಗೆ 75,000 ರೂ. ದಂಡ

    2010ರಲ್ಲಿ ಅಂದಿನ ಶಾಸಕ ಚಂದ್ರಶೇಖರ ಪಾಟೀಲ್ ರೇವೂರ ನೇತೃತ್ವದಲ್ಲಿ ಮೊದಲ ಬಾರಿಗೆ ಬಿಜೆಪಿ ಮೇಯರ್ ಗಾದಿ ಏರಿತ್ತು. ಚಹಾ ಮಾರುವ ಮಹಿಳೆ ಸುನಂದಾ ಮೊದಲ ಬಾರಿಗೆ ಕೇಸರಿ ಪಕ್ಷದಿಂದ ಅಧಿಕಾರಕ್ಕೆರಿದ್ದರು. ಆಗ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದರು. 12 ವರ್ಷಗಳ ನಂತರ ಮತ್ತೆ ಸ್ವಂತ ಶಕ್ತಿಯ ಮೇಲೆ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ. (ದಿಗ್ವಿಜಯ ನ್ಯೂಸ್​)

    ಕೆ.ಎಚ್.ಮುನಿಯಪ್ಪಗೆ ಟಿಕೆಟ್ ಘೋಷಣೆ ಸಾಧ್ಯತೆ ಹಿನ್ನೆಲೆ; ಕಾಂಗ್ರೆಸ್​ನಿಂದ ಸಾಮೂಹಿಕ ರಾಜೀನಾಮೆ ಪರ್ವ

    ಇದು ವಿಶ್ವದ ಅತಿದೊಡ್ಡ ಬಾಳೆಹಣ್ಣು! ಇದರ ಒಟ್ಟು ತೂಕ ಎಷ್ಟು ಅಂತ ಗೊತ್ತಾದ್ರೆ ಹುಬ್ಬೇರೋದು ಖಚಿತ

    ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಬಿಗ್ ರಿಲೀಫ್; ಪಂಚಮಸಾಲಿ ಮೀಸಲಾತಿಗಿಲ್ಲ ಅಡ್ಡಿ.. ಮಧ್ಯಂತರ ಆದೇಶ ತೆರವುಗೊಳಿಸಿದ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts