More

    ಬಿಡುಗಡೆಗಿದು ಸಕಾಲ.. ಕನ್ನಡ ಚಿತ್ರರಂಗದಲ್ಲೀಗ 50:50

    ಸರ್ಕಾರದ ಹೊಸ ಮಾರ್ಗಸೂಚಿಯಂತೆ ಚಿತ್ರಮಂದಿರಗಳಲ್ಲಿ ಏಪ್ರಿಲ್ 07ರಿಂದ ಶೇ. 50ರಷ್ಟು ಹಾಜರಾತಿ ಮಧ್ಯೆ ಚಿತ್ರಗಳ ಪ್ರದರ್ಶನವಾಗಲಿದೆ. ಇದರಿಂದ ಹಲವು ಚಿತ್ರತಂಡಗಳು ಅಡಕತ್ತರಿಗೆ ಸಿಲುಕಿವೆ. ಕಡಿಮೆ ಹಾಜರಾತಿಯ ಮಧ್ಯೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದೋ ಅಥವಾ ಬೇಡವೋ ಎಂಬ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿವೆ. ಇದರ ಮಧ್ಯೆಯೇ, ಹಲವರು ಈ ಬೆಳವಣಿಗೆಯಿಂದ ಬಹಳ ಖುಷಿಯಲ್ಲಿದ್ದಾರೆ. ತಮ್ಮ ಚಿತ್ರಗಳ ಬಿಡುಗಡೆಗೆ ಇದು ಸಕಾಲ ಎಂದು ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ದೊಡ್ಡ ಚಿತ್ರಗಳು ಬಿಡುಗಡೆಯಾದರೆ, ಅವುಗಳಿಂದ ಪೈಪೋಟಿ ಎದುರಿಸುವುದರ ಜತೆಗೆ, ಚಿತ್ರಮಂದಿರಗಳ ಸಮಸ್ಯೆಯೂ ಎದುರಿಸಬೇಕಾಗುತ್ತದೆ. ಶೇ. 50ರಷ್ಟು ಹಾಜರಾತಿ ಎಂಬ ಕಾರಣಕ್ಕೆ ಬಿಗ್ ಚಿತ್ರಗಳೆಲ್ಲ ಮುಂದಕ್ಕೆ ಹೋಗುತ್ತಿರುವುದರಿಂದ ಮಧ್ಯಮ ಮತ್ತು ಸಣ್ಣ ಬಜೆಟ್ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುತ್ತಿವೆ. ಹಾಗಾಗಿ ಪರಿಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಬರುವಷ್ಟರಲ್ಲಿ ಹಲವು ಸಣ್ಣ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿವೆ.

    ಅಜೇಯ್ ರಾವ್ ಅಭಿನಯದ ‘ಕೃಷ್ಣ ಟಾಕೀಸ್’ ಚಿತ್ರವು ಏ.16ಕ್ಕೆ ಬಿಡುಗಡೆ ಆಗಲಿದೆ. ‘ನಮ್ಮದು ಸಣ್ಣ ಬಜೆಟ್​ನ ಸಿನಿಮಾ. ಶೇ. 50 ಆಸನ ಭರ್ತಿ ಇದ್ದರೆ ಸಾಕು. ಇದರಿಂದ ನಮಗೆ ಅನುಕೂಲವೇ ಹೆಚ್ಚು. ಶೇ. 100 ಇದ್ದಿದ್ದರೆ, ‘ಸಲಗ’, ‘ಕೋಟಿಗೊಬ್ಬ 3’ ಸಿನಿಮಾಗಳ ಜತೆಗೆ ಪೈಪೋಟಿ ನಡೆಸಬೇಕಿತ್ತು. ಆಗ ಥಿಯೇಟರ್ ಸಮಸ್ಯೆಯೂ ಆಗುತ್ತಿತ್ತು. ಆದರೆ, ಇದೀಗ ಅದ್ಯಾವುದೇ ಸಮಸ್ಯೆ ಇಲ್ಲದೆ, ಸಿನಿಮಾ ಬಿಡುಗಡೆ ಮಾಡಬಹುದು. ರಾಜ್ಯಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ’ ಎನ್ನುತ್ತಾರೆ ನಿರ್ದೇಶಕ ವಿಜಯಾನಂದ್. ಈ ವಿಷಯವನ್ನು ‘ಕೊಡೆ ಮುರುಗ’ ಚಿತ್ರದ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಸಹ ಅನುಮೋದಿಸುತ್ತಾರೆ. ಏಪ್ರಿಲ್ 9ರಂದು ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿರುವ ಅವರು, ‘ನಮಗೆ ಚಿತ್ರಮಂದಿರಗಳು ಬಹಳ ಸುಲಭವಾಗಿ ಸಿಗುತ್ತಿವೆ. ನಮ್ಮ ಚಿತ್ರ ಪಿಕಪ್ ಆಗುವುದಕ್ಕೆ ಸ್ವಲ್ಪ ಸಮಯ ಬೇಕು. ದೊಡ್ಡ ಚಿತ್ರಗಳು ಬಿಡುಗಡೆಯಾಗಿದ್ದರೆ, ನಮ್ಮ ಚಿತ್ರ ಎತ್ತಂಗಡಿಯಾಗುತ್ತಿತ್ತು. ಈಗ ಒಂದಿಷ್ಟು ವಾರಗಳು ಉಸಿರಾಡಬಹುದು’ ಎನ್ನುತ್ತಾರೆ ಪ್ರಸಾದ್.

    ಕೆಲವರಿಗೆ 100 ಪರ್ಸೆಂಟ್ ಬೇಕಂತೆ

    ಹಾಗಂತ ಎಲ್ಲರೂ ಇದೇ ಸ್ಥಿತಿಯಲ್ಲೇನೂ ಇಲ್ಲ. ಕೆಲವರು ತಮ್ಮ ಚಿತ್ರವನ್ನು ಮುಂದೂಡಿದ್ದಾರೆ. ಸೂರಜ್ ಗೌಡ ನಾಯಕನಾಗಿ ನಟಿಸಿ-ನಿರ್ದೇಶಿಸಿರುವ ‘ನಿನ್ನ ಸನಿಹಕೆ’ ಚಿತ್ರವು ಏಪ್ರಿಲ್ 16ಕ್ಕೆ ಬಿಡುಗಡೆಯಾಗಬೇಕಿತ್ತು. ಈಗಾಗಲೇ ಪ್ರಚಾರ ಶುರು ಮಾಡಿದ್ದ ಚಿತ್ರತಂಡ, ಈಗ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ. ‘ಪ್ರತಿಯೊಬ್ಬ ಕಲಾವಿದ ಮತ್ತು ನಿರ್ದೇಶಕ ಹೌಸ್​ಫುಲ್ ಬೋರ್ಡ್ ನೋಡಲು ಬಯಸುತ್ತಾನೆ. ನಾವೂ ಸಹ ಅದೇ ಉದ್ದೇಶಕ್ಕೆ ಸಿನಿಮಾ ಮಾಡಿದ್ದೇವೆ. ಶೇ. 100 ಆದ ಮೇಲಷ್ಟೇ ಸಿನಿಮಾ ತೆರೆಗೆ ತರಲಿದ್ದೇವೆ. ಸದ್ಯಕ್ಕೆ ಬಿಡುಗಡೆ ಯಾವಾಗ ಎಂಬುದು ನಮಗೂ ಗೊತ್ತಿಲ್ಲ’ ಎನ್ನುತ್ತಾರೆ ಸೂರಜ್. ಸುಮಂತ್ ಶೈಲೇಂದ್ರ ನಟಿಸಿರುವ ‘ಗೋವಿಂದ ಗೋವಿಂದ’ ಚಿತ್ರದ ಬಿಡುಗಡೆ ಸಹ ಮುಂದೂಡಲಾಗಿದೆ. ಈ ಬಗ್ಗೆ ಸ್ವತಃ ಸುಮಂತ್ ಪ್ರತಿಕ್ರಿಯೆ ನೀಡಿದ್ದಾರೆ. ‘ಏ. 16ಕ್ಕೆ ಬಿಡುಗಡೆ ಮಾಡುವ ಸಲುವಾಗಿ ಶೇ. 60 ರಷ್ಟು ಮೊತ್ತವನ್ನು ಪ್ರಚಾರಕ್ಕೆ ಖರ್ಚು ಮಾಡಿದ್ದೇವೆ. ಇದೀಗ ಮತ್ತೆ ಕೋವಿಡ್ ಎರಡನೇ ಅಲೆ ಶುರುವಾಗಿದೆ. ಹಾಗಾಗಿ ಶೇ. 100 ಅನುಮತಿಯೇ ನಮಗೆ ಬೇಕಾಗಿರುವುದರಿಂದ ಬಿಡುಗಡೆಯನ್ನು ಪೋಸ್ಟ್​ಪೋನ್ ಮಾಡಿದ್ದೇವೆ. ಸದ್ಯಕ್ಕೆ ಯಾವಾಗ ಬಿಡುಗಡೆ ಎಂಬುದು ನಮಗೂ ಗೊತ್ತಿಲ್ಲ’ ಎನ್ನುತ್ತಾರೆ.

    ಜಾರಕಿಹೊಳಿ ಹಾಸಿಗೆ ಮೇಲಿರುವ ವಿಡಿಯೋ ಬಿಡುಗಡೆ; ‘ಯಾವ ಮಂಚದ ಮೇಲೂ ಇಲ್ಲ..’ ಎಂದಿದ್ದಕ್ಕೆ ಉತ್ತರವೇ ಈ ವಿಡಿಯೋ?

    ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts