More

    ಮೋದಿ ನಡೆಯನ್ನು ಮೆಚ್ಚಿದ ಪಾಕಿಸ್ತಾನಿ ಪತ್ರಕರ್ತ; ಪಾಕ್ ಸರ್ಕಾರದ ವಿರುದ್ಧ ಅಸಮಾಧಾನ..

    ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ಮೆಚ್ಚಿದ್ದಲ್ಲದೆ, ಆ ಮೂಲಕ ತಮ್ಮದೇ ದೇಶದ ಪ್ರಧಾನಿಯನ್ನು ಟೀಕಿಸಿದ ಪ್ರಸಂಗವೂ ನಡೆದಿದೆ.

    ಕಾಮನ್​ವೆಲ್ತ್​ ಗೇಮ್ಸ್​ನ ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್​ ರೆಸ್ಲಿಂಗ್​ನಲ್ಲಿ ಕಂಚಿನ ಪದಕ ಗಳಿಸಿದ ಪೂಜಾ ಗೆಹ್ಲೋಟ್ ಭಾವುಕರಾಗಿ ಮಾತನಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದ ಪ್ರಸಂಗವನ್ನು ಉಲ್ಲೇಖಿಸಿ, ಪಾಕಿಸ್ತಾನದ ಪತ್ರಕರ್ತ ಶಿರಾಜ್ ಹಸನ್​ ಪಾಕ್​ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ಮೋದಿ ಮಾಡಿದ್ದ ಟ್ವೀಟ್​ ಕೋಟ್​ ಮಾಡಿರುವ ಶಿರಾಜ್, ಭಾರತ ತನ್ನ ಕ್ರೀಡಾಳುಗಳನ್ನು ಹೀಗೆ ಬಿಂಬಿಸುತ್ತಿದೆ. ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್​ ಚಿನ್ನ ಗೆಲ್ಲಲಾಗದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರಧಾನಿ ಮೋದಿ ಸ್ಪಂದಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಅಥವಾ ಪ್ರೆಸಿಡೆಂಟ್​ನಿಂದ ನಾವು ಇಂಥ ಸಂದೇಶ ನೋಡಲು ಸಾಧ್ಯವೇ? ಅಷ್ಟಕ್ಕೂ ಅವರಿಗೆ ಪಾಕ್​ ಕ್ರೀಡಾಳುಗಳು ಪದಕ ಗೆಲ್ಲುತ್ತಿರುವುದು ಗೊತ್ತಿದೆಯೇ? ಎಂದು ಶಿರಾಜ್ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts