More

    ಜನರಿಂದಲೇ 34 ಕೋಟಿ ರೂ. ಸಂಗ್ರಹಿಸಿ ಅಬ್ದುಲ್ ರಹೀಮ್​ಗೆ ಮರಣ ದಂಡನೆ ತಪ್ಪಿಸಿದ ಕೇರಳಿಗರು! ಸಿಎಂ ಟ್ವೀಟ್

    ಕೋಝಿಕ್ಕೋಡ್: ಕಳೆದ 18 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಜೈಲುವಾಸದಲ್ಲಿದ್ದ ಕೇರಳ ಕೋಝಿಕ್ಕೋಡ್ ಮೂಲದ ಅಬ್ದುಲ್ ರಹೀಮ್​ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ಆತನ ಬಿಡುಗಡೆಗಾಗಿ ಮಲಯಾಳಿಗಳ ಗುಂಪು ಜನರಲ್ಲಿ ಮನವಿ ಮಾಡಿದ್ದು, ಕೇರಳದ ಅತಿದೊಡ್ಡ ಮಾನವೀಯ ಅಭಿಯಾನದಲ್ಲಿ ಬರೋಬ್ಬರಿ 34 ಕೋಟಿ ರೂ. ಹಣ ಸಂಗ್ರಹಿಸಿ ಇದೀಗ ರಹೀಮ್​ನನ್ನು ಮರಣದಂಡನೆ ಶಿಕ್ಷೆಯಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಕ್ಯಾಂಡಿಡೇಟ್ಸ್ ಚೆಸ್​ ಟೂರ್ನಿಯ 7ನೇ ಸುತ್ತಿನಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ, ವಿದಿತ್​

    ಕಳೆದ 18 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ರಮೀಮ್​ ಮರಣದಂಡನೆಗೆ ಮೂರು ದಿನಗಳ ಮುಂಚಿತವಾಗಿಯೇ ಇದೀಗ ಆತನನ್ನು ಬಿಡುಗಡೆಗೊಳಿಸಿದೆ. ರಿಲೀಸ್​ಗಾಗಿ ಬೇಕಿದ್ದ 34 ಕೋಟಿ ರೂ. ಮೊತ್ತವನ್ನು ಸಂಗ್ರಹಿಸಿದ ಸಮಿತಿಯ ಪ್ರತಿನಿಧಿಗಳು, ಶುಕ್ರವಾರ (ಏ.12) ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಹೋರಾಟದ ಬಗ್ಗೆ ಬಹಿರಂಗಪಡಿಸಿದರು.

    “ಇದು ಕೇರಳದ ರಿಯಲ್ ಕಥೆ” ಎಂದು ಸಮಿತಿಯ ಸದಸ್ಯರೊಬ್ಬರು ಕ್ರೌಡ್‌ಫಂಡಿಂಗ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಕೇರಳೀಯರನ್ನು ಹೊರತುಪಡಿಸಿ, ರಿಯಾದ್‌ನಲ್ಲಿರುವ ಮಲಯಾಳಿಗಳು ರಹೀಮ್‌ನ ಬಿಡುಗಡೆಗಾಗಿ ಹೆಚ್ಚುವರಿ ಹಣವನ್ನು ಪಾವತಿಸುವ ಮೂಲಕ ನಮ್ಮ ಸಂಗ್ರಹಕ್ಕೆ ದೊಡ್ಡ ಸಹಾಯ ಮಾಡಿದರು. ಕ್ರಿಯಾ ಸಮಿತಿಯು ಕ್ರೌಡ್‌ಫಂಡಿಂಗ್‌ಗಾಗಿ ಮೊಬೈಲ್ ಅಪ್ಲಿಕೇಶನ್ SAVEABDULRAHIM ಅನ್ನು ಸಹ ಪ್ರಾರಂಭಿಸಿತ್ತು.

    ಇದನ್ನೂ ಓದಿ: ಕ್ಯಾಂಡಿಡೇಟ್ಸ್ ಚೆಸ್​ ಟೂರ್ನಿಯ 7ನೇ ಸುತ್ತಿನಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ, ವಿದಿತ್​

    ಆ್ಯಪ್​ ಹೊರತಾಗಿಯೂ ಅಪಾರ ಸಂಖ್ಯೆಯ ಜನರು ಕ್ರೌಂಡ್​ ಫಡಿಂಗ್​ಗೆ ಹಣ ಸಂಗ್ರಹಕ್ಕೆ ನೇರವಾಗಿ ಸಂಪರ್ಕಿಸಿ ಸಹಾಯ ಮಾಡಿದ್ದಾರೆ. ವರದಿಗಳ ಪ್ರಕಾರ ನಾಲ್ಕು ದಿನಗಳಲ್ಲಿ 34 ಕೋಟಿ ರೂ. ಹಣ ಕ್ರೌಡ್‌ಫಂಡಿಂಗ್‌ನಲ್ಲಿ ಸಂಗ್ರಹವಾದ ತಕ್ಷಣ ಸಮಿತಿಯು ಅಗತ್ಯವಿರುವ ಮೊತ್ತ ಯಶಸ್ವಿಯಾಗಿ ಸಂಗ್ರಹವಾಗಿದೆ. ಇನ್ನು ಜನರು ದೇಣಿಗೆ ನೀಡಬೇಡಿ ಎಂದು ಮನವಿ ಮಾಡಿತು.

    ಅಬ್ದುಲ್ ರಹೀಂ ಕಥೆ: ಕೋಝಿಕ್ಕೋಡ್‌ನ ಫೆರೋಕ್‌ನ ಮಾಜಿ ಆಟೋ ಚಾಲಕ ರಹೀಂ, ಉಜ್ವಲ ಭವಿಷ್ಯಕ್ಕಾಗಿ 2006ರಲ್ಲಿ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ಅಲ್ಲಿ, ರಿಯಾದ್‌ನಲ್ಲಿನ ಕುಟುಂಬವೊಂದಕ್ಕೆ ಕಾರು ಚಾಲಕನ ಉದ್ಯೋಗದಲ್ಲಿದ್ದರು. ತನ್ನ ಕರ್ತವ್ಯಗಳ ಭಾಗವಾಗಿ ಮನೆಯಲ್ಲಿದ್ದ 15 ವರ್ಷ ವಯಸ್ಸಿನ ವಿಕಲಚೇತನ ಹುಡುಗನನ್ನು ನೋಡಿಕೊಳ್ಳುವುದು ಕೂಡ ಇವರ ಕೆಲಸವಾಗಿತ್ತು.

    ಇದನ್ನೂ ಓದಿ: ಮಾನ್​ಸ್ಟರ್​ನ ಮಾಸ್ಟರ್​ ಮೈಂಡ್​! “ರಾಮಾಯಣ’ ಚಿತ್ರದ ನಿರ್ಮಾಣದಲ್ಲಿ ಪಾಲುದಾರರಾದ ಯಶ್​

    ಒಂದು ದಿನ ರಹೀಮ್ ಹುಡುಗನೊಂದಿಗೆ ಕಾರಿನಲ್ಲಿ ಹೋಗುವಾಗ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಬೇಕಿತ್ತು. ಆದರೆ ಹಿಂಬದಿ ಕುಳಿತ್ತಿದ್ದ ಬಾಲಕ, ಸಿಗ್ನಲ್ ಜಂಪ್ ಮಾಡಿ ಕಾರನ್ನು ಮುಂದಕ್ಕೆ ಚಲಿಸುವಂತೆ ಒತ್ತಾಯಿಸಿದ್ದನು. ಇದನ್ನು ರಹೀಮ್​ ನಿರಾಕರಿಸಿದ್ದಕ್ಕೆ, ಹುಡುಗ ಉಗುಳಿ, ಹೊಡೆಯಲು ಪ್ರಾರಂಭಿಸಿದ್ದರಿಂದ ಪರಿಸ್ಥಿತಿ ಹದಗೆಟ್ಟಿತ್ತು. ವಾಗ್ವಾದದ ಸಂದರ್ಭದಲ್ಲಿ ರಹೀಮ್ ತಿಳಿಯದೆ ಬಾಲಕನ ಭುಜಕ್ಕೆ ಜೋಡಿಸಲಾದ ವೈದ್ಯಕೀಯ ಸಾಧನವನ್ನು ಸ್ಪರ್ಶಿಸಿದ್ದಾರೆ. ಇದರಿಂದ ಉಸಿರಾಡಲು ತೊಂದೆಯಾಗಿ ಬಾಲಕ ಪ್ರಜ್ಞೆ ತಪ್ಪಿ, ಸಾವನ್ನಪಿದ್ದಾನೆ.

    ಬಾಲಕನ ಕುಟುಂಬವು ಕ್ಷಮಾದಾನ ನೀಡಲು ನಿರಾಕರಿಸಿದ ನಂತರ ಹತ್ಯೆಗಾಗಿ ಸೌದಿ ಕಾನೂನಿನಡಿ 2018ರಲ್ಲಿ ರಹೀಮ್​ಗೆ ಮರಣದಂಡನೆ ವಿಧಿಸಲಾಯಿತು. ಮೇಲ್ಮನವಿ ನ್ಯಾಯಾಲಯವು 2022ರಲ್ಲಿ ಈ ತೀರ್ಪನ್ನು ಎತ್ತಿಹಿಡಿದಿದೆ. ಈ ನಿರ್ಧಾರವನ್ನು ನಂತರ ದೇಶದ ಸುಪ್ರೀಂ ಕೋರ್ಟ್ ದೃಢಪಡಿಸಿತು.

    ಇದನ್ನೂ ಓದಿ: ಇಷ್ಟು ದೊಡ್ಡ ಗಾತ್ರದ ಚಪ್ಪಲಿ ಧರಿಸುತ್ತಾರೆ ‘ದಿ ಗ್ರೇಟ್ ಖಲಿ’! ಅಸಲಿ ಸಂಗತಿ ಕೇಳಿ ದಂಗಾದ ನೆಟ್ಟಿಗರು!

    ಪ್ರಸ್ತುತ, ರಹೀಮ್‌ನ ಶಿಕ್ಷೆಯ ಮರಣದಂಡನೆಯನ್ನು ನ್ಯಾಯಾಲಯವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಕಾರಣ ಮೃತ ಬಾಲಕನ ಕುಟುಂಬದವರು ತಾವು ಕೇಳಿದ 34.34 ಕೋಟಿ ರೂ. ಹಣ ಕೊಟ್ಟರೆ ರಹೀಮ್​ ರಿಲೀಸ್​ಗೆ ಒಪ್ಪಿಗೆ ನೀಡ್ತೀವಿ ಎಂದು ಒಪ್ಪಂದ ಮಾಡಿಕೊಂಡರು. ಒಪ್ಪಿದ ಮೊತ್ತವು 15 ಮಿಲಿಯನ್ ಸೌದಿ ರಿಯಾಲ್‌ಗಳು ಅಂದರೆ ಸರಿಸುಮಾರು 33.24 ಕೋಟಿ ರೂಪಾಯಿಗಳು. ಇದೀಗ ಒಪ್ಪಂದದಂತೆ ಕೇರಳ ಜನರಿಂದಲೇ ಸಂಗ್ರಹಿಸಿದ ಹಣದಿಂದ ರಹೀಮ್​ಗೆ ಮರಣದಂಡನೆ ಶಿಕ್ಷೆ ತಪ್ಪಿದೆ,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಬಾಲ್ಯವಿವಾಹ ಧಿಕ್ಕರಿಸಿ, ಧೈರ್ಯದಿಂದ ಪರೀಕ್ಷೆ ಬರೆದ ಬಾಲಕಿ ಬೋರ್ಡ್ ಎಕ್ಸಾಂನಲ್ಲಿ ಟಾಪರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts