More

    ಅಬ್ಬಬ್ಬಾ.. ಎಂಥ ಕಿಲಾಡಿ ಮಗ!; ಅಪಹರಣದ ನಾಟಕವಾಡಿದ, ಮನೆಯವರಿಗೇ 5 ಲಕ್ಷ ರೂ. ಡಿಮ್ಯಾಂಡ್​ ಮಾಡಿದ!

    ರಾಮನಗರ: ಅಪ್ಪ-ಅಮ್ಮ ಓದು ಅಂತ ಒತ್ತಾಯ ಮಾಡಿದರೆ ಮಕ್ಕಳು ಅಮ್ಮಮ್ಮ ಎಂದರೆ ಓದದೇ ರಚ್ಚೆ ಹಿಡಿಯಬಹುದು, ಊಟ-ತಿಂಡಿ ತಿನ್ನದೆ ಸತಾಯಿಸಬಹುದು. ಆದರೆ ತಂದೆ-ತಾಯಿ ಓದು ಎಂದು ಒತ್ತಾಯಿಸಿದ್ದಕ್ಕೆ ಇಲ್ಲೊಬ್ಬ ಹದಿನಾರರ ಪೋರ ಎಂಥವರೂ ಒಮ್ಮೆ ಹುಬ್ಬೇರಿಸುವಂಥ ಖತರ್ನಾಕ್ ಕೆಲಸ ಮಾಡಿದ್ದಾನೆ.

    ಕಳೆದ ಶುಕ್ರವಾರ ಸೈಬರ್ ಸೆಂಟರ್​ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಈತ, ಮನೆಗೆ ಮರಳಲಿಲ್ಲ. ಬಳಿಕ ತನ್ನನ್ನು ಕಟ್ಟಿ ಹಾಕಿ ಕೂಡಿ ಹಾಕಿರುವ ಫೋಟೋವೊಂದನ್ನು ಪಕ್ಕದ ಮನೆಯವರ ಮೊಬೈಲ್​ಫೋನ್​ಗೆ ಕಳುಹಿಸಿದ್ದಾನೆ. ಮಾತ್ರವಲ್ಲ, ತನ್ನ ಅಪಹರಣವಾಗಿದೆ ಎಂದು ಹೇಳಿ ತಂದೆ-ತಾಯಿಯರಿಂದ 5 ಲಕ್ಷ ರೂ. ಬೇಡಿಕೆ ಇರಿಸಿದ್ದಾನೆ.

    ರಾಮನಗರ ಜಿಲ್ಲೆ ಕನಕಪುರದಲ್ಲಿ ನೆಲೆಸಿರುವ, ತಮಿಳುನಾಡು ಮೂಲದ ಬಟ್ಟೆ ಅಂಗಡಿ ಮಾಲೀಕ ಮನೋಹರ್ ಎಂಬವರ ಮಗ ಸರ್ವೇಶ್​ (16) ಇಂಥದ್ದೊಂದು ಕೆಲಸ ಮಾಡಿದ್ದಾನೆ. ಸರ್ವೇಶ್​ನನ್ನು ಕಟ್ಟಿ ಹಾಕಿದ್ದ ಫೋಟೋ ಪಕ್ಕದ ಮನೆಯವರ ಫೋನ್​ಗೆ ಬಂದ ಬಳಿಕ ಅದು ವೈರಲ್​ ಆಗಿದ್ದಲ್ಲದೆ, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿತ್ತು.

    ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಕನಕಪುರ ಠಾಣೆ ಪೊಲೀಸರು, ಬಾಲಕ ತಿರುಪತಿಯ ಲಾಡ್ಜ್​ವೊಂದರಲ್ಲಿ ಇರುವುದನ್ನು ಪತ್ತೆ ಹಚ್ಚಿದ್ದರು. ಬಾಲಕನನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ಓದು ಎಂದು ಒತ್ತಾಯಿಸುವ ಪಾಲಕರಿಂದ ತಪ್ಪಿಸಿಕೊಳ್ಳಲು ಹಾಗೂ ಅವರಿಂದ ಹಣ ಕೀಳಲು ಈ ರೀತಿಯ ನಾಟಕವಾಡಿರುವುದನ್ನು ಬಾಯಿಬಿಟ್ಟಿದ್ದಾನೆ. ಇದು ಪಾಲಕರನ್ನು ಬೆದರಿಸಲು ಬಾಲಕ ಆಡಿದ ನಾಟಕ, ಆತನ ಅಪಹರಣವಾಗಿಲ್ಲ ಎಂದು ಎಸ್​ಪಿ ಗಿರೀಶ್​ ಸ್ಪಷ್ಟಪಡಿಸಿದ್ದಾರೆ.

    ಮೂಟೆಗಟ್ಟಲೆ ಗೊಬ್ಬರ ಸಹಿತ ಬಾವಿಗೆ ಬಿದ್ದ ಲಾರಿ!!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts