More

    ಈ ವ್ಯಕ್ತಿಗೆ ಬಿಲ್ ನೋಡಿ ಕರೆಂಟ್ ಹೊಡೆದಂಗಾಯ್ತು!

    ಧಾರವಾಡ: ಮಹಾಮಾರಿ ಕರೊನಾ, ಅದನ್ನು ತಡೆಯುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್‌ನಿಂದ ಆಗಿರುವ ನಷ್ಟಕ್ಕಿಂತ ಮಿಗಿಲಾದ ಆಘಾತವನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನೀಡುತ್ತಿದೆ.

    ಲಾಕ್‌ಡೌನ್ ಇದ್ದ ಕಾರಣಕ್ಕಾಗಿ ಮೂರು ತಿಂಗಳ ಸರಾಸರಿ ಬಳಕೆ ಆಧಾರದ ಮೇಲೆ ಮಾರ್ಚ್, ಏಪ್ರಿಲ್ ವಿದ್ಯುತ್ ಬಿಲ್ ನೀಡುವುದಾಗಿ ಹೇಳಲಾಗಿತ್ತು. ನಗರದ ಹೊಸ ಯಲ್ಲಾಪುರದ ಆರೇರ್ ಓಣಿಯ ರಾಜು ಬಿರ್ಜೆಣ್ಣವರ ಎಂಬುವವರ ಒಂದು ಕನೆಕ್ಷನ್‌ಗೆ ಬರೋಬ್ಬರಿ 7,64,581 ರೂ. ಹಾಗೂ ಇನ್ನೊಂದಕ್ಕೆ 10,590 ರೂ. ಬಿಲ್ ನೀಡಲಾಗಿದೆ.

    ಇದನ್ನೂ ಓದಿ ಹೇಗಿದೆ ನೋಡಿ ಈ ಚನ್ನಿಗರಾಯನ ಮದ್ಯದ ಚಪಲ…!

    ನಗರದ ವಿವಿಧ ಕಡೆಗಳಲ್ಲಿ ಸರಾಸರಿ ಬಿಲ್ 500 ರೂ.ಗಳಿಂದ 1000 ರೂ. ಬರುತ್ತಿತ್ತು; ಈಗ 2000, 3000 ರೂ. ಬಿಲ್ ನೀಡಲಾಗಿದೆ.

    ಹೆಚ್ಚಿನ ಪ್ರಮಾಣದ ಬಿಲ್ ಕುರಿತು ಕೇಳಿದರೆ ಹೆಸ್ಕಾಂ ಸಿಬ್ಬಂದಿ, ಕಚೇರಿ ಕೌಂಟರ್‌ಗೆ ಬಂದು ಸರಿಪಡಿಸಿಕೊಳ್ಳಿ ಎಂದು ಸಲೀಸಾಗಿ ಹೇಳಿ ಹೋಗುತ್ತಾರೆ!

    ಈ ಕುರಿತು ವಿವರ ನೀಡಿದ ಹೊಸಯಲ್ಲಾಪುರ ನಿವಾಸಿ ಲಕ್ಷ್ಮಣ ಬಿರ್ಜೆಣ್ಣವರ, ‘‘ಲಕ್ಷಗಟ್ಟಲೆ ರೂ. ವಿದ್ಯುತ್ ಬಿಲ್ ಬಂದಿದ್ದು ನೋಡಿ ಶಾಕ್ ಆಗಿದೆ. ಪ್ರತಿ ತಿಂಗಳು ಅಂದಾಜು 1000 ರೂ.ವರೆಗೆ ಬರುತ್ತಿತ್ತು. ಆದರೆ ಈಗ 2 ತಿಂಗಳ ಬಿಲ್ 7 ಲಕ್ಷ ರೂ. ಬಂದಿದೆ. ಇದನ್ನು ಪ್ರಶ್ನಿಸಿದಾಗ ಹೆಸ್ಕಾಂ ಸಿಬ್ಬಂದಿಯೇ ಬಿಲ್ ಒಯ್ದಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದು, ಇನ್ನೊಂದು ದಿನ ಬಂದು ಬೇರೆ ಬಿಲ್ ನೀಡುವುದಾಗಿ ತಿಳಿಸಿದ್ದಾರೆ’’ ಎಂದು ಹೇಳಿದರು.

    ಹತ್ತನೇ ತರಗತಿ ಪಬ್ಲಿಕ್ ಪರೀಕ್ಷೆ ಜೂನ್ 1ರಿಂದ; ಯಾವ ರಾಜ್ಯದಲ್ಲಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts