More

    ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

    ಬೆಂಗಳೂರು: ಇತ್ತೀಚೆಗಷ್ಟೇ ವಾಟ್ಸ್ಆ್ಯಪ್​ ತನ್ನ ಪ್ರೈವೆಸಿ ಪಾಲಿಸಿ ಪರಿಷ್ಕರಿಸಿದ್ದ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆ ಬಗ್ಗೆ ಭಾರಿ ಆತಂಕ ಸೃಷ್ಟಿಯಾಗಿ ಬಹಳಷ್ಟು ಮಂದಿ ವಾಟ್ಸ್​ಆ್ಯಪ್​ ಅನ್​ಇನ್​ಸ್ಟಾಲ್​ ಮಾಡಿದ್ದರೆ, ಇನ್ನು ಹಲವರು ಅದರ ಬದಲು ಟೆಲಿಗ್ರಾಂ ಹಾಗೂ ಸಿಗ್ನಲ್​ ಆ್ಯಪ್​ಗಳನ್ನು ಇನ್​ಸ್ಟಾಲ್​ ಮಾಡಿಕೊಂಡು ಬಳಸಲಾರಂಭಿಸಿದ್ದಾರೆ. ಕೆಲವು ಆ್ಯಪ್​ಗಳಿಂದ ಹೀಗೆ ಖಾಸಗಿತನದ ಹರಣವಾಗುತ್ತಿರುವ ಆತಂಕ ಎದುರಾಗುತ್ತಿರುವ ಬೆನ್ನಿಗೇ ಈಗ ಆ್ಯಪ್​ವೊಂದರ ಡೇಟಾ ಹ್ಯಾಕ್​ ಆಗಿರುವ ಮಾಹಿತಿ ಹೊರಬಿದ್ದಿದೆ.

    ಫೋಟೋ ಎಡಿಟ್​ ಮಾಡಲು ಕೆಲವರು ಬೇರೆ ಬೇರೆ ಆ್ಯಪ್​ಗಳನ್ನು ಬಳಸುತ್ತಿರುವುದು ಹೊಸದೇನಲ್ಲ. ಇದೀಗ ಅಂಥ ಒಂದು ಫೋಟೋ ಎಡಿಟ್​ ಆ್ಯಪ್​ ಬಳಸುತ್ತಿರುವವರೆಲ್ಲ ಆತಂಕಕ್ಕೆ ಒಳಗಾಗುವಂತಾಗಿದೆ. ಏಕೆಂದರೆ ಈ ತಂತ್ರಾಂಶವನ್ನು ಶೈನಿ ಹಂಟರ್ಸ್ ಎಂಬಾತ ಹ್ಯಾಕ್​ ಮಾಡಿದ್ದು, 19 ಲಕ್ಷ ಬಳಕೆದಾರರ ಮಾಹಿತಿಗಳನ್ನು ಕದ್ದಿದ್ದಾನೆ. ಫೋಟೋ ಎಡಿಟ್ ಮಾಡಲು ಬಳಸುತ್ತಿರುವ ಉಚಿತ ಆ್ಯಪ್​ ಪಿಕ್ಸಲರ್ (Pixlr) ಶೈನಿ ಹಂಟರ್ಸ್​​ನಿಂದ ಹ್ಯಾಕ್​ಗೆ ಒಳಗಾಗಿದೆ ಎಂಬುದು ವರದಿಯಾಗಿದೆ.

    ಇದನ್ನೂ ಓದಿ: ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಳು, ಇವತ್ತು ಬೆಳಗ್ಗೆ ಮನೆ ಪಕ್ಕದಲ್ಲೇ ಶವವಾಗಿದ್ದಳು!

    ಈತ ಹ್ಯಾಕ್​ ಮಾಡಿರುವ ಮಾಹಿತಿಗಳಲ್ಲಿ ಬಳಕೆದಾರರ ಇ-ಮೇಲ್ ಅಡ್ರೆಸ್​, ಲಾಗಿನ್​ ನೇಮ್, ಎಸ್​ಎಚ್​ಎ-512 ಹ್ಯಾಷ್ಡ್​ ಪಾಸ್​ವರ್ಡ್​, ಬಳಕೆದಾರರ ಮೂಲ ಇತ್ಯಾದಿ ಅಂಶಗಳಿವೆ. 123ಆರ್​ಎಫ್​ ಎಂಬ ಫೋಟೋ ಸ್ಟಾಕ್​ ಸೈಟ್​ ಹ್ಯಾಕ್​ ಮಾಡುವ ಮೂಲಕ ತಾನು ಪಿಕ್ಸಲರ್​ನಿಂದ ಮಾಹಿತಿ ಕದ್ದಿರುವುದಾಗಿ ಶೈನಿ ಹೇಳಿಕೊಂಡಿದ್ದಾನೆ. 123ಆರ್​ಎಫ್​ ಸ್ಟಾಕ್​ ಫೋಟೋ ಸೈಟ್ ಹಾಗೂ ಪಿಕ್ಸಲರ್ ಫೋಟೋ ಎಡಿಟ್​ ಆ್ಯಪ್​ ಎರಡೂ ಇನ್​ಮ್ಯಾಜಿನ್ ಎಂಬ ಒಂದೇ ಕಂಪನಿಗೆ ಸೇರಿದ್ದಾಗಿವೆ. ಹ್ಯಾಕ್​ ಹಿನ್ನೆಲೆಯಲ್ಲಿ ಪಿಕ್ಸಲರ್ ಬಳಕೆದಾರರು ಪಾಸ್​ವರ್ಡ್​ ಬದಲಿಸುವಂತೆ ಸಲಹೆ ನೀಡಲಾಗಿದೆ. ಆದರೆ ಈ ಹ್ಯಾಕ್​ ಬಗ್ಗೆ ಪಿಕ್ಸಲರ್​ನಿಂದ ಯಾವುದೇ ಪ್ರತಿಕ್ರಿಯೆ ಅಧಿಕೃತವಾಗಿ ಇನ್ನೂ ವ್ಯಕ್ತವಾಗಿಲ್ಲ. (ಏಜೆನ್ಸೀಸ್​)

    ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಇದು ಮಹಿಳೆಯರ ಮುಖಭಾವನೆಯನ್ನೇ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತದೆಯಂತೆ!

    ಬಸ್​ನಲ್ಲಿ ಹಾಡಹಗಲೇ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟ ಕಾಮುಕ, ಸ್ಥಳದಲ್ಲೇ ಫೋಟೋ ಕ್ಲಿಕ್ಕಿಸಿದ ದಿಟ್ಟೆ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts