More

    ಒಂಬತ್ತು ಗಿನ್ನೆಸ್ ರೆಕಾರ್ಡ್ ಬರೆದ ಜೆಎನ್​ಯು ಕಂಪ್ಯೂಟರ್ ಆಪರೇಟರ್! ಹೇಗೆಲ್ಲಾ ಟೈಪಿಂಗ್ ಮಾಡ್ತಾರಂತೆ ಗೊತ್ತಾ?

    ನವದೆಹಲಿ: ಟೈಪಿಂಗ್​ ಅನ್ನು ಯಾವುದರಲ್ಲಿ ಮಾಡುತ್ತಾರೆ? ನಾವು ನೀವೆಲ್ಲರೂ ಯೋಚಿಸದೆ ಉತ್ತರಿಸುವುದು ಕೀಬೋರ್ಡ್ ಮತ್ತು ಕೈಗಳಿಂದ ಎಂದು. ಆದರೆ ಇಲ್ಲೊಬ್ಬ ವ್ಯಕ್ತಿ ಮೂಗಿನಲ್ಲೂ ಟೈಪ್​ ಮಾಡಿ ಗಿನ್ನೆಸ್ ರೆಕಾರ್ಡ್ ಮಾಡಿದ್ದಾರೆ. ಅವರಿಗೆ ಈವರೆಗೆ ಬಂದಿರುವ ಗಿನ್ನೆಸ್ ರೆಕಾರ್ಡ್​ಗಳ ಸಂಖ್ಯೆ ಬರೋಬ್ಬರಿ 9!

    ರಾಷ್ಟ್ರ ರಾಜಧಾನಿಯಲ್ಲಿರುವ ಜವಹರಲಾಲ್​ ನೆಹರು ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ ವಿನೋದ್ ಕುಮಾರ್ ಈ ರೀತಿ ದಾಖಲೆ ಬರೆದಿರುವ ವ್ಯಕ್ತಿ. ಅವರು 2014ರಲ್ಲಿ ನ್ಯೂಸ್ ಒಂದರಲ್ಲಿ ಮೂಗಿನ ಮೂಲಕ ಟೈಪಿಂಗ್ ಮಾಡುವ ವ್ಯಕ್ತಿಯನ್ನು ನೋಡಿದ್ದರಂತೆ. ಅದಾದ ನಂತರ ಹಗಲು ರಾತ್ರಿ ಪ್ರಯತ್ನ ಪಟ್ಟು ಮೂಗಿನಿಂದ ಟೈಪ್ ಮಾಡುವುದನ್ನು ಕಲಿತಿದ್ದಾರೆ. ಅದೇ ವರ್ಷ 46.3 ಸೆಕೆಂಡಿನಲ್ಲಿ 103 ಅಕ್ಷರಗಳನ್ನು ಮೂಗಿನ ಮೂಲಕ ಟೈಪ್ ಮಾಡಿ ಗಿನ್ನೆಸ್ ರೆಕಾರ್ಡ್ ಬರೆದಿದ್ದಾರೆ.

    ಅದಾದ ನಂತರ ಅವರು ಕಣ್ಣೀಗ ಬಟ್ಟೆ ಕಟ್ಟಿಕೊಂಡು, ಒಂಟಿ ಕೈನಲ್ಲಿ, ಮೌತ್​ ಸ್ಟಿಕ್​ ಬಳಸಿ ಹೀಗೆ ನಾನಾ ರೀತಿಯಲ್ಲಿ ಟೈಪಿಂಗ್ ಮಾಡಿ ರೆಕಾರ್ಡ್ ಬರೆದಿದ್ದಾರೆ. ಒಂದೇ ಕೈನಲ್ಲಿ 103 ಅಕ್ಷರ ಬರೆಯಲು 6 ಸೆಕೆಂಡ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು 103 ಅಕ್ಷರ ಟೈಪ್ ಮಾಡಲು 6 ಸೆಕೆಂಡ್ ತೆಗೆದುಕೊಂಡು ರೆಕಾರ್ಡ್​ ಸೃಷ್ಟಿಸಿದ್ದಾರೆ. ಮೌತ್​ಸ್ಟಿಕ್ ಬಳಸಿಕೊಂಡು 103 ಅಕ್ಷರ ಟೈಪ್ ಮಾಡಲು 18 ಸೆಕೆಂಡ್ ತೆಗೆದುಕೊಂಡಿದ್ದರಂತೆ. ಅದಾದ ನಂತರ ಅವರದ್ದೇ ರೆಕಾರ್ಡ್ ಬ್ರೇಕ್ ಮಾಡಿ 7.01 ಸೆಕೆಂಡ್​ನಲ್ಲಿ 103 ಅಕ್ಷರ ಬರೆದಿದ್ದು ಮತ್ತೊಂದು ರೆಕಾರ್ಡ್ ಬರೆದಿದ್ದಾರೆ. ಇತ್ತೀಚೆಗೆ ಟೆನ್ನಿಸ್ ಬಾಲ್​ ಅನ್ನು ಒಂದು ನಿಮಿಷದಲ್ಲಿ 205 ಬಾರಿ ಬೌನ್ಸ್ ಮಾಡಿ ರೆಕಾರ್ಡ್ ಬರೆದಿದ್ದಾರೆ. (ಏಜೆನ್ಸೀಸ್)

    ಕ್ಲಬ್​ಹೌಸ್​ನಲ್ಲಿ ಶೀಘ್ರವೇ ಶುರುವಾಗಲಿದೆ ಹೊಸ ಫೀಚರ್​! ಏನದು? ಹೇಗಿರುತ್ತೆ?

    ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts