More

    ಮಧ್ಯರಾತ್ರಿ ಬಾಯಾರಿಕೆಯಾಗುತ್ತದೆಯೇ? ಕಾರಣ ಏನಿರಬಹುದು? ಇಲ್ಲಿದೆ ಉಪಯುಕ್ತ ಮಾಹಿತಿ…

    ಮಲಗುವ ಮುನ್ನ ಸಾಕಷ್ಟು ನೀರು ಕುಡಿದರೂ ಹಲವರಿಗೆ ಮಧ್ಯರಾತ್ರಿಯಲ್ಲಿ ಗಂಟಲು ಒಣಗುವ ತೊಂದರೆ ಕಾಣಿಸಿಕೊಳ್ಳತ್ತದೆ. ಬಾಯಾರಿಕೆಯಿಂದ ಎಚ್ಚರಗೊಂಡಾಗ ನಿದ್ರೆಗೆ ಭಂಗವು ಉಂಟಾಗುತ್ತದೆ. ಇದು ಕೆಲವರಿಗೆ ನಿತ್ಯವು ಸಂಭವಿಸುತ್ತದೆ. ಇದರಿಂದ ನಿದ್ರೆಯ ಕೊರತೆ ಉಂಟಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅಂಥವರು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

    ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಹೆಚ್ಚಿನ ಜನರು ಎಣ್ಣೆ ಮತ್ತು ಮಸಾಲೆ ಪದಾರ್ಥಗಳ ಸೇವೆನೆ ಮಾಡುವುದು ತುಂಬಾ ವಿರಳ. ಆದರೆ, ಅಡುಗೆಯಲ್ಲಿ ಸಾಕಷ್ಟು ಎಣ್ಣೆ ಮತ್ತು ಮಸಾಲೆ ಇಲ್ಲದಿದ್ದರೆ ಹೆಚ್ಚಿನ ಜನರು ತಿನ್ನುವುದೇ ಇಲ್ಲ. ಏಕೆಂದರೆ, ಬಹುತೇಕರಿಗೆ ರುಚಿಯೇ ಪ್ರಮುಖ. ಆದರೆ ಹೆಚ್ಚುವರಿ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ತಿನ್ನುವುದು ಒಣ ಗಂಟಲಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ರಾತ್ರಿ ಬಾಯಾರಿಕೆ ಉಂಟಾಗುತ್ತದೆ. ನೀವು ಹೆಚ್ಚು ಎಣ್ಣೆ ಮತ್ತು ಮಸಾಲೆಗಳನ್ನು ಸೇವಿಸಿದರೆ, ನೀವು ಇತರ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ.

    ಅನೇಕ ಜನರು ಮಲಗಿರುವಾಗ ತಮ್ಮ ಬಾಯಿಯ ಮೂಲಕವೇ ಉಸಿರಾಡುತ್ತಾರೆ. ಅದರಲ್ಲೂ ಶೀತ ಅಥವಾ ಮೂಗು ಕಟ್ಟಿಕೊಂಡ ಸಂದರ್ಭದಲ್ಲಿ ಬಾಯಿಯ ಮೂಲಕ ಉಸಿರಾಡುವುದು ಸಾಮಾನ್ಯ. ಅಸ್ತಮಾ ಇರುವವರು ಕೂಡ ಮೂಗಿಗಿಂತ ಬಾಯಿಯಲ್ಲಿ ಉಸಿರಾಡುತ್ತಾರೆ. ಇದರ ಪರಿಣಾಮ ಬಾಯಿ ಸುಲಭವಾಗಿ ಒಣಗುತ್ತದೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ಆಗಾಗ ಎಚ್ಚರವಾಗುತ್ತದೆ.

    ರಾತ್ರಿ ನಿದ್ರೆಯ ಸಮಯದಲ್ಲಿ ಗಂಟಲು ಒಣಗಲು ಒಂದು ಪ್ರಮುಖ ಕಾರಣವೆಂದರೆ ನಿರ್ಜಲೀಕರಣ ಅಥವಾ ಅಜೀರ್ಣ. ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಗಂಟಲು ಒಣಗುತ್ತದೆ. ನಿರ್ಜಲೀಕರಣವು ತೀವ್ರವಾಗಿದ್ದರೆ, ಅದು ಸಾವಿಗೂ ಕಾರಣವಾಗಬಹುದು. ಬಾಯಿ ಒಣಗುವುದನ್ನು ಜೆರೊಸ್ಟೊಮಿಯಾ ಎಂತಲೂ ಕರೆಯುತ್ತಾರೆ. ಇದರಿಂದ ಬಾಯಿಯಲ್ಲಿ ಜೊಲ್ಲು ಸುರಿಸುವುದು ಕಡಿಮೆಯಾಗುತ್ತದೆ. ಇದು ಸೆಪ್ಸಿಸ್​ನಂತಹ ಗಂಭೀರ ಕಾಯಿಲೆಗಳ ಲಕ್ಷಣವಾಗಿದ್ದು, ಇದರಿಂದಾಗಿ ನೀವು ಮಧ್ಯರಾತ್ರಿಯಲ್ಲಿ ಬಾಯಾರಿಕೆಯನ್ನು ಅನುಭವಿಸುತ್ತೀರಿ.

    ಯಾರೆಲ್ಲ ಹೆಚ್ಚಾಗಿ ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾರೋ ಅವರು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಪ್ರತಿದಿನ ಧೂಮಪಾನ ಮತ್ತು ಮದ್ಯಪಾನ ಮಾಡುವ ಶೇ. 39 ರಷ್ಟು ಮಂದಿಯಲ್ಲಿ ಲಾಲಾರಸದ ಉತ್ಪಾದನೆ ಕಡಿಮೆಯಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ. ಆಲ್ಕೋಹಾಲ್ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ನೀರಿನ ಅಗತ್ಯವನ್ನು ಸೃಷ್ಟಿಸುತ್ತದೆ. ಅಧಿಕ ರಕ್ತದೊತ್ತಡ ಇರುವವರು ಅತಿಯಾದ ಬೆವರುವಿಕೆಯಿಂದ ದೇಹದಲ್ಲಿ ನೀರಿನ ಮಟ್ಟ ಸರಿಯಾಗಿರುವುದಿಲ್ಲ. ಇದು ಒಣ ಗಂಟಲಿಗೆ ಕಾರಣವಾಗುತ್ತದೆ. ಅಲ್ಲದೆ, ಯಕೃತ್ತು, ಹೃದಯ ಮತ್ತು ಮೂತ್ರಪಿಂಡಗಳು ತಮ್ಮ ಕಾರ್ಯವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಈ ಸಮಸ್ಯೆಯು ಮಧ್ಯರಾತ್ರಿಯಲ್ಲಿ ಬಾಯಾರಿಕೆಗೆ ಕಾರಣವಾಗುತ್ತದೆ. (ಏಜೆನ್ಸೀಸ್​)

    BBKS10: ಮುಂದೆ ಇದು ನಿನ್ನ ಬಾಳಿನ ಕಣ್ಣೀರಿನ ಕಥೆಯಾಗುತ್ತದೆ ಕಣೋ; ಭವಿಷ್ಯ ನುಡಿದ ತುಕಾಲಿ ಸಂತು

    VIDEO | ಹಾವಿನ ತುಟಿಗೆ ಬಾಯಿಟ್ಟು ಸಿಪಿಆರ್ ಚಿಕಿತ್ಸೆ ನೀಡಿದ ಪೊಲೀಸ್‌!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts