More

    VIDEO | ಹಾವಿನ ತುಟಿಗೆ ಬಾಯಿಟ್ಟು ಸಿಪಿಆರ್ ಚಿಕಿತ್ಸೆ ನೀಡಿದ ಪೊಲೀಸ್‌!

    ಮಧ್ಯಪ್ರದೇಶ: ಪೈಪ್‌ನಲ್ಲಿ ಸಿಲುಕಿದ್ದ ಹಾವಿನ ಜೀವ ಉಳಿಸಲು ನರ್ಮದಾಪುರಂನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಿಪಿಆರ್ ಚಿಕಿತ್ಸೆ ನೀಡಿ ಹಾವಿ ಪ್ರಾಣ ರಕ್ಷಣೆ ಮಾಡಿದ್ದಾರೆ. ಸೆಮರಿ ಹರಿಚಂದ್ ನಗರದಲ್ಲಿ ವರದಿಯಾಗಿರುವ ಈ ಘಟನೆಯು ದೇಶದಲ್ಲೇ ಪ್ರಥಮ ಎನ್ನಬಹುದಾದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸೆಮರಿ ಹರಿಚಂದ್ ನಗರದಲ್ಲಿ ವರದಿಯಾಗಿರುವ ಈ ಘಟನೆಯು ದೇಶದಲ್ಲೇ ಪ್ರಥಮ ಎನ್ನಬಹುದಾದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬೆಚ್ಚಿ ಬೀಳುವಂತೆ ಮಾಡಿದೆ.

    ಮಧ್ಯಪ್ರದೇಶ ರಾಜ್ಯದ ಚಿಂದ್ವಾರ ಜಿಲ್ಲೆಯ ಪೊಲೀಸ್ ಪೇದೆ ಅತುಲ್ ಶರ್ಮಾ ಅವರು ಪಚ್ಮರ್ಹಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ದಸರಾ ಪ್ರಯುಕ್ತ ಕರ್ತವ್ಯದಲ್ಲಿದ್ದ ನರ್ಮದಾಪುರಂನ ತವಾ ಕಾಲೋನಿಯ ನಿವಾಸಿಗಳು ಮನೆಗೆ ಹಾವು ನುಗ್ಗಿದೆ ಎಂದು ಕರೆ ಮಾಡಿದ್ದಾರೆ. ಹೀಗಾಗಿ ಹಾವು ಇದ್ದ ಮನೆಗೆ ಹೋಗಿ ರಕ್ಷಣೆ ಕಾರ್ಯ ಮಾಡಿದ್ದಾರೆ.

    ಹಾವು ಪೈಪ್ ನಲ್ಲಿ ಅಡಗಿಕೊಂಡಿತ್ತು. ಆದರೆ, ಕುಟುಂಬಸ್ಥರು ಭಯದಿಂದ ಅದಾಗಲೇ ಕ್ರಿಮಿನಾಶಕದ ಬಕೆಟ್ ನೀರನ್ನು ಹಾವಿನ ಮೇಲೆ ಸುರಿದಿದ್ದು, ವಿಷಯುಕ್ತ ನೀರಿನಲ್ಲಿ ಹಾವು ಪ್ರಜ್ಞೆ ತಪ್ಪಿ ಬಿದ್ದಿದೆ. ಅತುಲ್ ಶರ್ಮಾ ಹಾವಿನ ರಕ್ಷಕ. ಕೂಡಲೇ ಹಾವನ್ನು ಹೊರತೆಗೆದು ಬಾಯಿ ತೊಳೆದು ಸಿಪಿಆರ್ ಕೊಡಿಸಿದರು. ಹಾವಿನ ಬಾಯಿಗೆ ಬಾಯಿ ಹಾಕಿ ಗಾಳಿ ಕೊಟ್ಟ. ಸ್ವಲ್ಪ ಹೊತ್ತು ಹಾಗೆ ಮಾಡಿದ ನಂತರ ಹಾವಿಗೆ ಪ್ರಜ್ಞೆ ಬಂದಿತು. ಹಾವಿಗೆ ಪ್ರಜ್ಞೆ ಬರಲು ಸುಮಾರು ಒಂದು ಗಂಟೆ ಬೇಕಾಯಿತು. ಆ ನಂತರ ಶರ್ಮ ಅದನ್ನು ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಅತುಲ್ ಶರ್ಮಾ ನೆಟಿಜನ್‌ಗಳಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

    ಸ್ಥಳೀಯ ಪಶುವೈದ್ಯರೊಬ್ಬರು ಮಾತನಾಡಿ, ಹಾವಿಗೆ ಸಾಂಪ್ರದಾಯಿಕ ಸಿಪಿಆರ್ ನೀಡುವುದು ನಿಜವಾಗಿಯೂ ಕೆಲಸ ಮಾಡುವುದಿಲ್ಲ. ತಾತ್ಕಾಲಿಕವಾಗಿ ಪ್ರಜ್ಞೆ ತಪ್ಪಿದ ನಂತರ ಹಾವು ಮತ್ತೆ ಚೇತರಿಸಕೊಳ್ಳುತ್ತದೆ ಎಂದು ಸ್ಥಳೀಯ ಪಶುವೈದ್ಯರು ಹೇಳಿದ್ದಾರೆ. ಹಾವನ್ನು ರಕ್ಷಿಸಲು ಕಾನ್ಸ್‌ಟೇಬಲ್‌ ಮಾಡಿದ ಪ್ರಯತ್ನಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    Tiger Claw Case: ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್​​ ಮೊರೆಹೋದ ನಟ ಜಗ್ಗೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts