More

    ಒಂದೇ ದಿನ ನಾಲ್ಕು ಅಂಗಡಿಗಳಲ್ಲಿ ಕಳ್ಳರ ಕೈಚಳಕ

    ಕೆರೂರ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಾಲ್ಕು ಅಂಗಡಿ ಸೇರಿ ಕಳ್ಳರು ವಿವಿಧೆಡೆ ಸರಣಿಗಳ್ಳತನ ನಡೆಸಿದ್ದು, ಇದರಿಂದ ನಾಗರಿಕರಲ್ಲಿ ಆತಂಕ ಹೆಚ್ಚಿದೆ.
    ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಾಲ್ಕು ಅಂಗಡಿಗಳ ಬೀಗ ಮುರಿದು ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಅಂಗಡಿಗಳಿಗೆ ಹಾಕಿದ ಸಿಸಿ ವಿಡಿಯೋ ಕ್ಯಾಮೆರಾಗಳು, ಹಣ, ಸಿಸಿ ಟಿವಿಯ ಡಿವಿಆರ್ ಸೇರಿ ಕಳ್ಳತನ ಮಾಡಿದ್ದಾರೆ.

    ಹೆದ್ದಾರಿ ಪಕ್ಕದ ಹಿರೇಮಠ ಪ್ರೌಢಶಾಲೆ ಮುಂಭಾಗದ ಮುಗಳಿ ವಾಣಿಜ್ಯ ಮಳಿಗೆಗಳ * ಯಮನಪ್ಪ ಹುಲ್ಲಿಕೇರಿ ವಿನಾಯಕ ೆಟೊ ಸ್ಟುಡಿಯೋದ 35 ಸಾವಿರ ಬೆಲೆ ಬಾಳುವ ಕ್ಯಾಮೆರಾ, ಲೆನ್ಸ್ 15 ಸಾವಿರ ಹಣ ಕಳ್ಳತನ, ಲಕ್ಷ್ಮಣ ಮುಗಳಿ ಅಡತಿ ಅಂಗಡಿಯ ಸಿಸಿಟಿವಿ ಡಿವಿಆರ್, 5 ಸಾವಿರ ಹಣ, ಕೃಷ್ಣಾ ಪರದೇಶಿ ಅಂಗಡಿಯ 5 ಸಾವಿರ ಹಣ ಕಳವು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ನಿಲ್ದಾಣ ಬಳಿಯ ಶಿವಾ ಫೋಟೋ ಸ್ಟುಡಿಯೋದಲ್ಲಿ 1.20 ಲಕ್ಷ ರೂ. ಮೌಲ್ಯದ ಆರು ಕ್ಯಾಮರಾ, ಒಂದು ಲೆನ್ಸ್, ಸಿಸಿಟಿವಿ, ಡಿವಿಆರ್. ಹಾಗೂ 25 ಸಾವಿರ ನಗದು ಕಳವು ಮಾಡಲಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಶ್ವಾನ ದಳದೊಂದಿಗೆ ಪೊಲೀಸರು ಪರಿಶೀಲನೆ ನಡೆಸಿದರು. ಸಿಪಿಐ ಡಿಡಿ ಧೂಳಖೇಡ, ಪಿಎಸ್‌ಐ ಕುಮಾರ್ ಹಿತ್ತಲಮನಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
    ಪಟ್ಟಣದಲ್ಲಿ ಸಿಸಿ ಟಿವಿ ಕಣ್ಗಾವಲು ಮತ್ತು ಪೊಲೀಸರ ರಾತ್ರಿ ಗಸ್ತು ಹೆಚ್ಚಿಸಬೇಕೆಂದು ಆಗ್ರಹಿಸಿ ವರ್ತಕ ಮಹೇಶ ಮುಗಳಿ ಹೆಚ್ಚುವರಿ ಎಸ್‌ಪಿ ಅವರಿಗೆ ಮನವಿ ಮಾಡಿದರು.

    ಹೆಚ್ಚಿದ ಆತಂಕ: ಕಳೆದ ಕೆಲ ತಿಂಗಳಲ್ಲಿ ಕಳ್ಳತನ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುವುದಕ್ಕೆ ನಾಗರಿಕರಲ್ಲಿ ಆತಂಕ ಹೆಚ್ಚಿದೆ. ಪಟ್ಟಣದ ಹಲವಾರು ಬಡಾವಣೆಗಳಲ್ಲಿ ರಸ್ತೆ ಬದಿಯ ಬೀದಿ ದೀಪಗಳು ಇಲ್ಲದ್ದರಿಂದ ಕಳ್ಳರಿಗೆ ಅನುಕೂಲವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts