More

    ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡುವುದಾಗಿ ನಂಬಿಸಿ ಚಿನ್ನಾಭರಣ ಕದ್ದು ಖದೀಮ ಎಸ್ಕೇಪ್

    ರಾಮನಗರ: ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.

    ಇದನ್ನೂ ಓದಿ: ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ಘೋಷಿಸಿದ ಸಿಕ್ಕಿಂ ಸರ್ಕಾರ

    ಸಾವಿತ್ರಮ್ಮ (62) ವಂಚನೆಗೊಳಗಾದ ವೃದ್ಧ ಮಹಿಳೆ. ಚನ್ನಪಟ್ಟಣ ತಾಲೂಕಿನ ಹಾರೋಕೊಪ್ಪ ನಿವಾಸಿಯಾಗಿದ್ದಾರೆ.ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡುವುದಾಗಿ ನಂಬಿಸಿ ಖದೀಮ ಚಿನ್ನಾಭರಣ ಕಸಿದು ಮೋಸ ಮಾಡಿದ್ದಾನೆ.

    ಇದನ್ನೂ ಓದಿ: VIDEO | ಬಾಲ್ಯದಿಂದ ಕಷ್ಟ ಉಂಡ ಮಗನನ್ನು ಪತ್ರಕರ್ತನಾಗಿ ಟಿವಿಯಲ್ಲಿ ಕಂಡ ತಾಯಿ ಕಣ್ಣಲ್ಲಿ ಜಿನುಗಿತು ಆನಂದಭಾಷ್ಪ!

    ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಮಗನನ್ನು ನೋಡಲು ವೃದ್ಧೆ ಬಂದಿದ್ದರು. ವೃದ್ಧೆ ಒಂಟಿಯಾಗಿರುವುದನ್ನು ಗಮನಿಸಿದ ಖದೀಮ, ಗೃಹಲಕ್ಷ್ಮಿ ನೊಂದಣಿ ಮಾಡಿಸಿದ್ದೀರಾ? ಎಂದು ಪ್ರಶ್ನಿಸಿದ್ದಾನೆ. ಇಲ್ಲ ಎಂದು ವೃದ್ಧೆ ಉತ್ತರಿಸಿದ್ದಾಳೆ. ಇದನ್ನೇ ಅಸ್ತ್ರವಾಗಿ ಮಾಡಿಕೊಂಡ ಕಳ್ಳ ವೃದ್ಧೆಗೆ ನಂಬಿಕೆ ಬರುವಂತೆ ಮಾತನಾಡಿದ್ದಾನೆ.

    ಇದನ್ನೂ ಓದಿ: ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ  ಹೇಗೆ ಎನ್ನುವ ಚಿಂತೆ ಇದ್ಯಾ? ಇಂತಿವೆ ಕೆಲವು ಸಲಹೆ, ಮುನ್ನೆಚ್ಚರಿಕೆಗಳು…

    ಪೋಸ್ಟ್ ಆಫಿಸ್​​ನಿಂದ ಹಣ ಬರುವ ಹಾಗೆ ಮಾಡಿಸುತ್ತೇನೆಂದು ನಂಬಿಸಿ ಸರ್ಕಾರಿ ಆಸ್ಪತ್ರೆ ಕರೆದುಕೊಂಡು ಹೋಗಿದ್ದಾನೆ. ಕಣ್ಣು ಪರೀಕ್ಷೆ ಮಾಡಿಸಬೇಕು, ಚಿನ್ನಾಭರಣ ತೆಗೆದು ಕೋಡಿ ಎಂದು ಹೇಳಿದ್ದಾನೆ. ಆತನ ಮಾತು ನಂಬಿದ ವೃದ್ಧೆ, ಎರಡೂವರೆ ಲಕ್ಷ ಬೆಲೆಬಾಳುವ 40 ಗ್ರಾಂ ಚಿನ್ನಾಭರಣವನ್ನು ಆತನ ಕೈಗೆ ಇಟ್ಟಿದ್ದಾಳೆ. ನಂತರ ಆಕೆಯನ್ನು ಯಾಮಾರಿಸಿ ಚಿನ್ನಾಭರಣ ದೋಚಿದ ಖದೀಮ ಎಸ್ಕೇಪ್​​​ ಆಗಿದ್ದಾನೆ. ಚನ್ನಟ್ಟಣ ಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಧಾರಾಕಾರ ಮಳೆ ನಡುವೆಯೇ ಕಾಣಿಸಿಕೊಂಡ ಹೆರಿಗೆ ನೋವು! JCB ಸಹಾಯದಿಂದ ಹೊಳೆ ದಾಟಿಸಿದ ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts