More

    ಸ್ಯಾನಿಟೈಸರ್ ಹಾಕೊಳಿ ಅಂದ್ರು ಅಷ್ಟೇ.., ಎರಡು ಚಿನ್ನದ ಬಳೆ ಮಾಯ!

    ಲಕ್ನೋ: ಕರೊನಾ ವೈರಸ್​ ನಿವಾರಣೆ ಅಥವಾ ನಿಯಂತ್ರಣ ಆಗಲಿ ಎಂದು ಸ್ಯಾನಿಟೈಸರ್ ಬಳಸುತ್ತಾರೆ. ಹಾಗಂತ ಯಾರಾದರೂ ಅಪರಿಚಿತರು ಬಂದು ಸ್ಯಾನಿಟೈಸರ್ ಕೊಟ್ಟರೂ ಯೋಚಿಸಿಯೇ ಬಳಸಬೇಕು. ಏಕೆಂದರೆ ಇಲ್ಲಿ ಯಾರೋ ಆಗಂತುಕರು ಕೊಟ್ಟ ಸ್ಯಾನಿಟೈಸರ್ ಬಳಸಿದ ಮಾತ್ರಕ್ಕೆ ಮಹಿಳೆಯೊಬ್ಬರು ತನ್ನ ಎರಡು ಚಿನ್ನದ ಬಳೆಗಳನ್ನು ಕಳೆದುಕೊಳ್ಳುವಂತಾಗಿದೆ.

    39 ವರ್ಷದ ವೈಶಾಲಿ ಕಪೂರ್ ಚಿನ್ನದ ಬಳೆಗಳನ್ನು ಕಳೆದುಕೊಂಡವರು. ಭಾನುವಾರ ಸಂಜೆ ಅವರು ಮನೆಯಲ್ಲಿದ್ದಾಗ ಯಾರೋ ಅಪರಿಚಿತರು ಬಂದು ಡೋರ್ ಬೆಲ್​ ಮಾಡಿದ್ದಾರೆ. ಜತೆಗೆ, ನಿಮ್ಮ ಪತಿ ಅಮಿತ್​ಗೆ ಪಾರ್ಸೆಲ್ ಬಂದಿದೆ ಎಂದಿದ್ದಾರೆ. ಮನೆಯಲ್ಲಿ ಏಕಾಂಗಿಯಾಗಿದ್ದ ವೈಶಾಲಿ ಪಾರ್ಸೆಲ್ ತೆಗೆದುಕೊಳ್ಳಲು ಎಂದು ಬಾಗಿಲು ತೆರೆದು ಹೊರ ಹೋಗಿದ್ದರು. ಆಗ ಆ ಅಪರಿಚಿತರು ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪಾಲಿಸಬೇಕು ಎಂದು ಹೇಳಿ ಕೈಗೆ ಸ್ಯಾನಿಟೈಸರ್ ಹಾಕಿಕೊಳ್ಳಿ ಎಂದು ಬಾಟಲೊಂದನ್ನು ತೆಗೆದರು. ಕೈಗೆ ಸ್ಯಾನಿಟೈಸರ್ ಹಾಕಿದ ಹಾಗೆ ಮಾಡಿದ ಅವರು ವೈಶಾಲಿ ಮುಖಕ್ಕೂ ಅದನ್ನು ಸ್ಪ್ರೇ ಮಾಡಿದ್ದರು. ಆಗ ಕೆಲವೇ ಕ್ಷಣಗಳಲ್ಲಿ ಆಕೆ ಎಚ್ಚರ ತಪ್ಪಿ, ಬಿದ್ದಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಎಚ್ಚರವಾಗಿ ನೋಡಿದಾಗ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳು ಇರಲಿಲ್ಲ. ತಾನು ಎದ್ದು ಓಡಿಹೋಗಿ ಕೂಗುವಷ್ಟರಲ್ಲಿ ಅವರು ದೂರಕ್ಕೆ ಹೋಗಿದ್ದರು ಎಂದು ದೂರಿನಲ್ಲಿ ವೈಶಾಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಹೆರಿಗೆ ಬಳಿಕ ಮಾಸುಚೀಲವನ್ನೂ ಬೇಯಿಸಿ ತಿಂದ ತಾಯಿ!; ಎರಡನೇ ಹೆರಿಗೆ ನಂತರವೂ ಮತ್ತದೇ ಪುನರಾವರ್ತನೆ…

    ಉತ್ತರಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ವೈಶಾಲಿ ಆ ಟೈಮಲ್ಲಿ ಮನೆಯಲ್ಲಿ ಒಂಟಿಯಾಗಿದ್ದಾರೆ ಎಂದು ಗೊತ್ತಿರುವವರೇ ಈ ಕೃತ್ಯ ಎಸಗಿರುವಂತಿದೆ ಎಂದು ಶಂಕಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಹೀಗೆಲ್ಲ ಟ್ವೀಟ್​ ಮಾಡಿದ್ರೆ ನಿಮ್​ ಅಕೌಂಟೇ ಬ್ಲಾಕ್​ ಆಗುತ್ತೆ ಹುಷಾರು!

    ಪ್ರೇಮಿಗಳ ದಿನದ ಮೊದಲು- ಈ ದಿನದ ನಂತರ… ಜಾಲತಾಣದಲ್ಲಿ ರಾಹುಲ್​ ಗಾಂಧಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts