More

    ಶಿವರಾತ್ರಿ ಆಚರಣೆಯನ್ನೇ ಸ್ಥಳಾಂತರಿಸಿದ ಮೀಸಲಾತಿ ಹೋರಾಟ; ಇವರ ಜಾಗರಣೆ ಈ ಸಲ ಎಲ್ಲಿ ಗೊತ್ತೇ?

    ಬೆಂಗಳೂರು: ಶಿವರಾತ್ರಿ ಎಂದರೆ ಸಾಮಾನ್ಯವಾಗಿ ಶಿವನ ಸನ್ನಿಧಿಯಲ್ಲೇ ನಡೆಯುವಂಥದ್ದು. ಆದರೆ ಪ್ರತಿವರ್ಷ ನಿಗದಿತ ಜಾಗದಲ್ಲೇ ನಡೆಯುವಂಥ ಶಿವರಾತ್ರಿ ಆಚರಣೆಯೊಂದು ಈಗ ಸ್ಥಳಾಂತರಗೊಂಡಿದೆ. ಅಷ್ಟಕ್ಕೂ ಇವರ ಶಿವರಾತ್ರಿ ಆಚರಣೆಯ ಸ್ಥಳ ಬದಲಾಗಲು ಮುಖ್ಯ ಕಾರಣ ಮೀಸಲಾತಿ.

    ಮೀಸಲಾತಿಗೂ ಶಿವರಾತ್ರಿ ಆಚರಣೆಗೂ ಎತ್ತಣಿಂದೆತ್ತ ಸಂಬಂಧ ಎಂಬ ಯೋಚನೆ ಒಮ್ಮೆ ಮನಸಲ್ಲಿ ಸುಳಿದು ಹೋದರೂ, ಇಲ್ಲಿ ಶಿವರಾತ್ರಿ ಆಚರಣೆಯ ಸ್ಥಳ ಬದಲಾಗಲು ಮೀಸಲಾತಿ ಹೋರಾಟವೇ ಪ್ರಮುಖ ಕಾರಣವೆಂಬದಂತೂ ನಿಜ. ಅಂದರೆ ಕಳೆದ ಕೆಲವು ದಿನಗಳಿಂದ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ ಸಮುದಾಯದವರು ಈ ಬಾರಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲೇ ಶಿವರಾತ್ರಿ ಆಚರಣೆ ಮಾಡಲಿದ್ದಾರೆ.

    ಪ್ರತಿಭಟನೆಯ ನೇತೃತ್ವ ವಹಿಸಿರುವ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಈ ವಿಷಯನ್ನು ತಿಳಿಸಿದ್ದಾರೆ. ಪ್ರತಿ ವರ್ಷ ಕೂಡಲಸಂಗಮದಲ್ಲಿ ಭಕ್ತರೊಂದಿಗೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದೆವು. ಆದರೆ ಈ ಸಲ ನಾವು ಇಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲೇ ಪೂಜೆ ಮಾಡುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಹೀಗಾಗಿ ಇಂದು ರಾತ್ರಿ 9ರಿಂದ ಸ್ವಾತಂತ್ರ್ಯ ಉದ್ಯಾನದಲ್ಲೇ ಇಷ್ಟಲಿಂಗ ಪೂಜೆ ನಡೆಯಲಿದೆ. ಎಲ್ಲರೂ ಫ್ರೀಡಂ ಪಾರ್ಕ್​ಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ರಾಜ್ಯದ ಜನತೆಗೆ ಎಚ್ಚರಿಕೆಯ ಗಂಟೆ ಬಾರಿಸಿದ ಸಚಿವ ಡಾ.ಸುಧಾಕರ್​!

    ಭಗವದ್ಗೀತಾ ಸಾರಾಂಶದ ಕಿಂಡಲ್ ಆವೃತ್ತಿ ಬಿಡುಗಡೆ ಮಾಡಿದ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts