More

    ಜೀರ್ಣಕ್ರಿಯೆ ಸುಧಾರಿಸಿಕೊಳ್ಳಲು ಈ 5 ಪದಾರ್ಥಗಳನ್ನು ಪ್ರತಿದಿನ ಸೇವಿಸಿ

    ಬೆಂಗಳೂರು: ಫೈಬರ್​ ಅನ್ನು ಜೀರ್ಣವಾಗದೆ ಇರುವ ಸಸ್ಯಗಳಿಂದ ಮಾಡಲಾಗುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್​ ಅಂಶವು ಹೆಚ್ಚಾಗಿರುತ್ತದೆ. ಮುಖ್ಯವಾಗಿ ಹೆಚ್ಚು ನಾರಿನಂಶವಿರುವ ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕರುಳಿನ ಆರೋಗ್ಯಕ್ಕೆ ಬಹಳ ಪ್ರಯೊಜನಕಾರಿ. ಅದರೊಂದಿಗೆ ತೂಕ ಕಡಿಮೆ ಮಾಡಿಕೊಳ್ಳಲು ಕೂಡ ಸಹಾಯ ಮಾಡುತ್ತದೆ. ದಿನಕ್ಕೆ 30ಗ್ರಾಂ ಫೈಬರ್​ ಅನ್ನು ದೇಹಕ್ಕೆ ನೀಡಬೇಕೆಂದು ತಜ್ಷರು ಶಿಫಾರಸ್ಸು ಮಾಡುತ್ತಾರೆ. ಕೆಳಗೆ ತಿಳಿಸುವ ಹೆಚ್ಚಾಗಿ ನಾರಿನಂಶವಿರುವ ಈ 5 ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬಹುದು.

    1) ಸಬ್ಜಾ ಬೀಜಗಳು
    ಇದು ಆಹಾರಕ್ಕೆ ಒಳ್ಳೆಯ ಪರಿಮಳವನ್ನು ನಿಡುತ್ತದೆ ಮತ್ತು ಇದನ್ನು ಬಳಸುವುದು ಕೂಡ ಸುಲಭ. ಸ್ಮೂಥಿ, ಮೊಸರು ಮುಂತಾದ ಆಹಾರ ಪದಾರ್ಥಗಳಲ್ಲಿ ಇದನ್ನು ಉಪಯೋಗಿಸಬಹುದು. ಇದರಲ್ಲಿ ಹೆಚ್ಚಿನ ಫೈಬರ್​ ಅಂಶವಿದೆ ಮತ್ತು ರುಚಿಯಾಗಿ ಕೂಡ ಇರುತ್ತದೆ.

    2) ಪೇರಳೆ
    ಸೇಬು ಸುಲಭವಾಗಿ ಸಿಗುವ ಹಣ್ಣು. ಆದರೆ ಆಹಾರದಲ್ಲಿ ಪೇರಳೆ ಹಣ್ಣನ್ನು ಸೇರಿಸಲು ಪ್ರಾರಂಭಿಸಬೇಕು. ಏಕೆಂದರೆ ಇದರಲ್ಲಿ ಫೈಬರ್​ ಅಂಶ ಹೆಚ್ಚಾಗಿವೆ.

    ಇದನ್ನೂ ಓದಿ: ನಿದ್ದೆ ಮಾಡಲು ಕಷ್ಟ ಪಡುತ್ತಿದ್ದೀರಾ? ನಿದ್ರಾಹೀನತೆ ದೂರ ಮಾಡಲು ಇಲ್ಲಿವೆ 6 ಉಪಾಯಗಳು…!

    3) ಬಾರ್ಲಿ
    ಬಾರ್ಲಿಯಲ್ಲಿ ಫೈಬರ್ ಅಧಿಕವಾಗಿದೆ. ವಿಶೇಷವಾಗಿ ಬೀಟಾ-ಗ್ಲುಕನ್​​ನಲ್ಲಿ. ಇದು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅದರೊಂದಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬಾರ್ಲಿಯನ್ನು ಸೂಪ್, ಸಲಾಡ್‌ಗಳಿಗೆ ಸೇರಿಸಬಹುದು ಅಥವಾ ಅಕ್ಕಿ ಪರ್ಯಾಯವಾಗಿ ಬಳಸಬಹುದು.

    4) ಬೀಟ್ರೂಟ್
    ಆಹಾರದಲ್ಲಿ ಬೀಟ್ರೂಟ್​​ ಸೇರಿಸುವುದು ಫೈಬರ್ ಸೇವನೆಯನ್ನು ಹೆಚ್ಚಿಸಲು ಉತ್ತಮ ಮಾರ್ಗವಾಗಿದೆ. ಇದರಲ್ಲಿ ಫೋಲೇಟ್, ಕಬ್ಬಿಣ, ಮ್ಯಾಂಗನೀಸ್ ಮತ್ತು ಪೊಟ್ಯಾಸಿಯಮ್​​ ಹೆಚ್ಚಾಗಿದೆ. ಆದ್ದರಿಂದ ಇದನ್ನು ತಪ್ಪದೆ ಬಳಸಬೇಕು.

    5) ಓಟ್ಸ್
    ಓಟ್ಸ್​ ಲಭ್ಯವಿರುವ ಆರೋಗ್ಯಕರ ಧಾನ್ಯಗಳಲ್ಲಿ ಒಂದಾಗಿದೆ. ಓಟ್ಸ್ ಬೀಟಾ-ಗ್ಲುಕನ್ ಎಂಬ ನಿರ್ದಿಷ್ಟ ರೀತಿಯ ಫೈಬರ್‌ನಲ್ಲಿ ಸಮೃದ್ಧವಾಗಿ ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಗುಣಲಕ್ಷಣವನ್ನು ಹೊಂದಿರುವ ಫೈಬರ್ ಅಂಶವನ್ನು ಹೊಂದಿದೆ. (ಏಜೆನ್ಸೀಸ್​)

    ಫ್ಯಾಷನ್ ಡಿಸೈನರ್ ಜತೆ ಪ್ರೀತಿಯನ್ನು ಅಧಿಕೃತಗೊಳಿಸಿದ ನಟ ಜೆಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts