More

    ಕರೊನಾ ಸಂಕಷ್ಟದಲ್ಲೂ ಈ ಕಂಪನಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ…!

    ನವದೆಹಲಿ: ಕರೊನಾ ಸಂಕಷ್ಟದಿಂದ ಆದಾಯ, ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಂಪನಿಗಳು ಉದ್ಯೋಗಿಗಳ ವಜಾ, ಸಂಬಳ ಕಡಿತ, ಬಡ್ತಿ ತಡೆ ಮೊದಲಾದ ಕ್ರಮಗಳಿಗೆ ಮುಂದಾಗುತ್ತಿವೆ. ಕೆಲ ಕಂಪನಿಗಳು ಉದ್ಯೋಗಿಗಳನ್ನು ವೇತನರಹಿತ ರಜೆ ಮೇಲೆ ಕಳುಹಿಸುತ್ತಿವೆ.

    ಆದರೆ, ಕೆಲ ಕಂಪನಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಇವು ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುತ್ತಿವೆ, ಬಡ್ತಿ ನೀಡುತ್ತಿವೆ. ಬೋನಸ್​ ಕೂಡ ಕೊಡುತ್ತಿವೆ. ಎಚ್​ಸಿಎಎಲ್​ ಈಗಾಗಲೇ ಇದನ್ನು ಘೋಷಿಸಿದೆ. ಇದೀಗ ಹಿಂದುಸ್ಥಾನ್​ ಯುನಿಲೀವರ್​ ಲಿಮಿಟೆಡ್​, ಏಷಿಯನ್​ ಪೇಂಟ್ಸ್​, ವಾಲ್​ಮಾರ್ಟ್​ ಒಡೆತನದ ಫ್ಲಿಫ್​ ಕಾರ್ಟ್​, ಮಿಂತ್ರಾ, ಜಾನ್​ಸನ್​ ಆ್ಯಂಡ್​ ಜಾನ್​ಸನ್​, ಸಿಎಸ್​ಎಸ್​ ಕಾರ್ಪ್​, ಕ್ಯಾಪ್​ ಜೆಮಿನಿ ಇಂಡಿಯಾ, ಬಿಎಸ್​ಎಚ್​ ಹೋಮ್​ ಅಪ್ಲೈಯನ್ಸ್​, ಎಚ್​ಸಿಸಿಬಿ ಹಾಗೂ ಭಾರತ್​ ಪೇ ಮೊದಲಾದ ಕಂಪನಿಗಳು ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿವೆ.

    ಇದನ್ನೂ ಓದಿ; ನಾಲ್ವರ ಪ್ರಯಾಣಕ್ಕೆ ಇಡೀ ವಿಮಾನವನ್ನೇ ಬುಕ್​ ಮಾಡಿದ…! 

    ಸಂಕಷ್ಟದ ಸಮಯದಲ್ಲಿ ಸಂಸ್ಥೆಯ ವಾಸ್ತವ ವಹಿವಾಟು, ಆದಾಯ ಹಾಗೂ ಉದ್ಯೋಗಿಗಳ ಹಿತ ಕಾಪಾಡಲು ಕಂಪನಿಗಳು ಇಂಥ ನಿರ್ಧಾರ ಕೈಗೊಳ್ಳುತ್ತಿವೆ. ಸಿಬ್ಬಂದಿ ಮೇಲೆ ಗುಣಾತ್ಮಕ ಪರಿಣಾಮವನ್ನು ಇದು ಬೀರಲಿದೆ ಎಂದು ವಿಶ್ಲೇಷಿಸಲಾಗಿದೆ.

    ಸಿಎಸ್​ಎಸ್​ ಕಾರ್ಪ್​ ಸಂಸ್ಥೆ ಸಿಇಒ ಮನೀಷ್​ ಟಂಡನ್​ ಹೇಳುವ ಪ್ರಕಾರ, ಈ ಸಮಯದಲ್ಲಿ ವೇತನ ಹೆಚ್ಚಳ ಸಂಸ್ಥೆಯ ಉದ್ಯೋಗಿಗಳ ಮನೋಸ್ಥೈರ್ಯ ಹೆಚ್ಚಿಸಲಿದೆ.
    ಕಾಗ್ನಿಜೆಂಟ್​ ಕಂಪನಿ ಭಾರತ ಹಾಗೂ ಫಿಲಿಪ್ಪೈನ್ಸ್​ನ ಉದ್ಯೋಗಿಗಳಿಗೆ ಮೂಲ ವೇತನವನ್ನು ಶೇ.25ರಷ್ಟು ಹೆಚ್ಚಿಸಿದೆ. ಹಿಂದುಸ್ಥಾನ್​ ಯುನಿಲೀವರ್​ ಕಂಪನಿ ಹಿಂದಿನ ವರ್ಷದ ವೇರಿಯೇಬಲ್​ ಪೇ ಹಾಗೂ ಈ ವರ್ಷ ವೇತನ ಬಡ್ತಿಯನ್ನು ಈಗಾಗಲೇ ಪಾವತಿ ಮಾಡಲಾಗಿದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

    ಇದನ್ನೂ ಓದಿ; ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳ ಚಿಕಿತ್ಸೆಗೆ ಖರ್ಚಾಗೋದೆಷ್ಟು?

    ಇನ್ನೊಂದೆಡೆ, ವ್ಇಪ್ರೋ, ಇನ್ಫೋಸಿಸ್​, ಟಿಸಿಎಸ್​ ಕಂಪನಿಗಳು ಬಡ್ತಿ ಮುಂದೂಡಿವೆ. ರಿಲಯನ್ಸ್​ ಇಂಡಸ್ಟ್ರೀಸ್​, ಟಿವಿಎಸ್​ ಮೋಟರ್ಸ್​, ಒಯೋ ರೂಮ್ಸ್​ ಸಣಬಳ ಕಡಿತ ಮಾಡಿವೆ. ಓಲಾ, ಉಬರ್​, ಝೋಮಾಟೋ, ಸ್ವಿಗ್ಗಿ ಹಾಗೂ ಐಬಿಎಂ ಕಂಪನಿಗಳಲ್ಲಿ ಸಿಬ್ಬಂದಿ ವಜಾ ಮಾಡಲಾಗಿದೆ.

    ಗುಡ್​ ಟಚ್​.. ಬ್ಯಾಡ್​ ಟಚ್​ ಮುಗೀತು…, ಶಾಲೆಗಳಲ್ಲಿನ್ನು ‘ನೋ ಟಚ್​’ ಮಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts