More

    ನೀವು ದೇಹದ ಈ 5 ಭಾಗಗಳನ್ನು ಯಾವತ್ತೂ ಸ್ವಚ್ಛವಾಗಿ ತೊಳೆಯುವುದಿಲ್ಲ! ಶಾಕಿಂಗ್​ ಸಂಗತಿ ಬಿಚ್ಚಿಟ್ಟ ವೈದ್ಯರು

    ನಮ್ಮ ದೇಹವನ್ನು ಸ್ವಚ್ಛವಾಗಿ, ಆರೋಗ್ಯವಾಗಿ ಇಡಲು ಆಗಾಗ ಸ್ನಾನ ಮಾಡುತ್ತೇವೆ. ಕೆಲವರೂ ನಿತ್ಯವೂ ನೀರಿನಲ್ಲಿ ಮಿಂದೇಳುತ್ತಾರೆ. ಸೋಪು, ಶಾಂಪೂ ಮತ್ತು ಸೀಗೆಕಾಯಿ ಅಂತಾ ಸಾಕಷ್ಟು ವಸ್ತುಗಳನ್ನು ಬಳಸಿ ದೇಹವನ್ನು ಸ್ವಚ್ಛಗೊಳಿಸುತ್ತೇವೆ. ಆದರೆ, ವೈದ್ಯರು ಆಘಾತಕಾರಿ ಸಂಗತಿ ಒಂದನ್ನು ಇದೀಗ ಬಹಿರಂಗಪಡಿಸಿದ್ದಾರೆ.

    ದೇಹದ 5 ಭಾಗಗಳನ್ನು ಜನರು ನಿಯಮಿತವಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಮಾತನಾಡುವ ಯುಎಸ್​ ಮೂಲದ ಕುಟುಂಬದ ವೈದ್ಯೆ ಡಾ. ಜೆನ್​ ಕೌಡ್ಲೆ ಪ್ರಕಾರ, ಆತುರದಲ್ಲಿ ಸ್ನಾನ ಮಾಡುವ ಸಮಯದಲ್ಲಿ ನೀವು ಮಿಸ್​ ಮಾಡುವ ಪ್ರತಿಯೊಂದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಮಾರಣಾಂತಿಕ ಕಾಯಿಲೆಗಳು ಸಹ ಬರಬಹುದು ಎಂದಿದ್ದಾರೆ.

    ಬಹುತೇಕ ಮಂದಿ ಸ್ನಾನ ಮಾಡುವಾಗ ಹೊಟ್ಟೆಯ ಗುಂಡಿ ಅಥವಾ ಹೊಕ್ಕುಳ ಮತ್ತು ಕಿವಿಯ ಹಿಂಭಾಗವನ್ನು ಸ್ವಚ್ಛಗೊಳಿಸಲು ಮರೆಯುತ್ತಾರೆ. ನಿಮ್ಮ ಕಿವಿಗಳು ಸ್ವಚ್ಛವಾಗಿದೆಯೇ ಎಂದು ಪರಿಶೀಲಿಸಲು ಇರುವ ಒಂದು ಮಾರ್ಗವೆಂದರೆ ಅವುಗಳ ಹಿಂದೆ ಉಜ್ಜುವುದು ಮತ್ತು ಬೆರಳನ್ನು ಕಿವಿಯ ಒಳಗೆ ಹಾಕಿ ನೋಡುವುದು. ಒಂದು ವೇಳೆ ಒರಟಾಗಿದ್ದರೆ ನೀವು ಇತ್ತೀಚೆಗೆ ಕಿವಿಗಳನ್ನು ತೊಳೆದಿಲ್ಲ ಎಂದು ಅರ್ಥ ಎಂದು ವೈದ್ಯರು ಹೇಳಿದ್ದಾರೆ.

    ಕೆಮಿಸ್ಟ್ ಕ್ಲಿಕ್‌ನಲ್ಲಿ ಫಾರ್ಮಸಿಸ್ಟ್ ಆಗಿರುವ ಮತ್ತೊಬ್ಬ ವೈದ್ಯೆ ಅಬ್ಬಾಸ್ ಕನಾನಿ ಸಹ ಮಾತನಾಡಿ, ಕಿವಿಯ ಮೇಲೆ ಗಮನ ಹರಿಸಬೇಕಾದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಸೆಬಾಸಿಯಸ್ ಗ್ರಂಥಿಗಳು ಬೆವರು ಮತ್ತು ಮೇದೋಗ್ರಂಥಿಗಳ ಸ್ರಾವವನ್ನು ಬಿಡುಗಡೆ ಮಾಡುತ್ತವೆ, ಇದು ಕೊಳಕು ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. ಅಲ್ಲದೆ, ಹೊಕ್ಕುಳ ಸ್ವಚ್ಛತೆ ಬಗ್ಗೆಯೂ ಒತ್ತಿ ಹೇಳಿದ್ದಾರೆ. ನಿಮ್ಮ ಹೊಟ್ಟೆಯ ಗುಂಡಿಯು ಸ್ವಲ್ಪ ಅಸ್ಪಷ್ಟ ಸ್ಥಳವಾಗಿದ್ದು, ತೇವಾಂಶವು ಬ್ಯಾಕ್ಟೀರಿಯಾವನ್ನು ನಿರ್ಮಿಸಲು ಕಾರಣವಾಗಬಹುದು ಎಂದಿದ್ದಾರೆ.

    ನೀವು ನಿರ್ಲಕ್ಷಿಸುವ ಮತ್ತೊಂದು ಭಾಗವೆಂದರೆ ಅದು ಉಗುರು. ಉಗುರಿನ ಕೆಳಗೆ ಸಾಕಷ್ಟು ಕೊಳಕು ತುಂಬಿರುತ್ತದೆ. ಇದರ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ಬೆರಳಿನ ಉಗುರುಗಳು ಬ್ಯಾಕ್ಟೀರಿಯಾವನ್ನು ಹಿಡಿದಿಟ್ಟುಕೊಳ್ಳಬಹುದು ಮತ್ತು ಅತಿಸಾರ ಅಥವಾ ವಾಂತಿಗೆ ಕಾರಣವಾಗಬಹುದು. ಆದ್ದರಿಂದ ಅವುಗಳು ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಕೌಡ್ಲೆ ಹೇಳಿದ್ದಾರೆ.

    ಮುಂದಿನ ಭಾಗ ಯಾವುದೆಂದರೆ ಕಾಲುಗಳು. ಸ್ನಾನ ಮಾಡುವಾಗ ಕಾಲುಗಳ ಕೆಳಗೆ ಸೋಪ್ ಹರಿಯುವ ಬಗ್ಗೆ ಹೇಳುತ್ತಿಲ್ಲ ಬದಲಾಗಿ ಕಾಲುಗಳನ್ನು ತೊಳೆಯುವುದರ ಬಗ್ಗೆ ಕೌಡ್ಲೆ ಒತ್ತಿ ಹೇಳಿದ್ದಾರೆ. ಕೊನೆಯ ಅಥವಾ ಐದನೇ ಭಾಗ ಯಾವುದೆಂದರೆ, ಕಾಲ್ಬೆರಳುಗಳಾಗಿವೆ. ವಿವಿಧ ಸೋಂಕುಗಳಿಂದ ಮುಕ್ತರಾಗಲು ಬಯಸಿದ್ದಲ್ಲಿ, ನಿಮ್ಮ ಕಾಲ್ಬೆರಳುಗಳನ್ನು ತೊಳೆಯುತ್ತಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಕೌಡ್ಲೆ ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)

    ಕತ್ರಿನಾಗಿಂತ ಹೆಚ್ಚು ಗಮನ ಸೆಳೆಯಿತು ವಿಜಯ್​ ಸೇತುಪತಿ ಚಪ್ಪಲಿ: ಎಂಥಾ ಸರಳತೆ ಅಂದ್ರು ನೆಟ್ಟಿಗರು!

    ರಾಮಮಂದಿರದಲ್ಲಿ ಎಲ್ಲಿಯೂ ಒಂದೇ ಒಂದು ಕಬ್ಬಿಣದ ತುಂಡು, ಸಿಮೆಂಟ್​​​​ ಬಳಸಿಲ್ಲ…ಈ ವಿಶೇಷ ತಂತ್ರಜ್ಞಾನದಿಂದ ನಿರ್ಮಾಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts