More

    ರಾಮಮಂದಿರದಲ್ಲಿ ಎಲ್ಲಿಯೂ ಒಂದೇ ಒಂದು ಕಬ್ಬಿಣದ ತುಂಡು, ಸಿಮೆಂಟ್​​​​ ಬಳಸಿಲ್ಲ…ಈ ವಿಶೇಷ ತಂತ್ರಜ್ಞಾನದಿಂದ ನಿರ್ಮಾಣ!

    ಅಯೋಧ್ಯೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಸಿದ್ಧತೆಗಳು ಭರದಿಂದ ಸಾಗಿವೆ. ಇದೇ ಜ.22ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಎಲ್ಲಾ ಗಣ್ಯರು ರಾಮಮಂದಿರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸುಸಂದರ್ಭವನ್ನು ಕಣ್ತುಂಬಿಕೊಳ್ಳಲು ಭಕ್ತರಿಗೂ ಅವಕಾಶ ದೊರೆಯಲಿದೆ. ಅಯೋಧ್ಯೆಯಲ್ಲಿ ಅತ್ಯಂತ ಅದ್ಧೂರಿಯಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಅಂದಹಾಗೆ ಇಡೀ ದೇವಾಲಯದ ನಿರ್ಮಾಣಕ್ಕೆ ಒಂದೇ ಒಂದು ಕಬ್ಬಿಣದ ತುಂಡು ಕೂಡ ಬಳಸಲಾಗಿಲ್ಲ. ವಿಶೇಷ ತಂತ್ರಜ್ಞಾನವನ್ನು ಬಳಸಿ ದೇವಾಲಯವನ್ನು ನಿರ್ಮಿಸಲಾಗುತ್ತಿದೆ.

    ಕಬ್ಬಿಣ ಬಳಸುತ್ತಿಲ್ಲ
    ರಾಮಮಂದಿರ ನಿರ್ಮಾಣದಲ್ಲಿ ಪ್ರತಿಯೊಂದು ಕೆಲಸವನ್ನೂ ಬಹಳ ಸೂಕ್ಷ್ಮವಾಗಿ ಮಾಡಲಾಗುತ್ತಿದೆ. ದೇವಾಲಯದಲ್ಲಿ ಕಬ್ಬಿಣವನ್ನು ಬಳಸಲಾಗಿಲ್ಲ. ಅಲ್ಲದೇ ದೇವಸ್ಥಾನದಲ್ಲಿ ಎಲ್ಲಿಯೂ ಸಿಮೆಂಟ್ ಬಳಸಿಲ್ಲ. ಶ್ರೀರಾಮನ ಈ ದೇವಾಲಯವನ್ನು ಸಂಪೂರ್ಣವಾಗಿ ಕಲ್ಲುಗಳಿಂದ ನಿರ್ಮಿಸಲಾಗಿದೆ. ಕಲ್ಲುಗಳನ್ನು ಸೇರಲು ತಾಮ್ರವನ್ನು ಬಳಸಲಾಗಿದೆ. ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಎಲ್ಲಾ ಕಲ್ಲುಗಳನ್ನು ಮೊದಲು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಕಲ್ಲಿನ ಶಕ್ತಿಯನ್ನು ನೀವು ಅಂದಾಜು ಮಾಡಬಹುದು.

    ವಿಶೇಷ ತಂತ್ರಗಳ ಬಳಕೆ 
    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮ ಮಂದಿರ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಅದರಲ್ಲಿ ಕಬ್ಬಿಣವನ್ನೇ ಬಳಸುತ್ತಿಲ್ಲ. ಇದಲ್ಲದೇ ಕಾಂಕ್ರಿಟ್ ಕೂಡ ಹಾಕುತ್ತಿಲ್ಲ. ದೇವಸ್ಥಾನದಲ್ಲಿ ಹೊಸ ತಂತ್ರಜ್ಞಾನ ಬಳಸಲಾಗಿದೆ. ದೇವಾಲಯದ ಸ್ತಂಭವು ತೇವಾಂಶವನ್ನು ತಪ್ಪಿಸಲು ಗ್ರಾನೈಟ್‌ನಿಂದ ಮಾಡಲ್ಪಟ್ಟಿದೆ. ದೇವಾಲಯದ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದನ್ನು ಸಾಂಪ್ರದಾಯಿಕ ಮತ್ತು ನಗರ ಶೈಲಿಯಲ್ಲಿ ನಿರ್ಮಿಸಲಾಗುತ್ತಿದೆ.

    ರಾಮಲಲ್ಲಾಗೆ ಕಾಶಿಯಲ್ಲಿ ತಯಾರಾದ ಸಹಸ್ರ ಕಲಶದಲ್ಲಿ ನಡೆಯಲಿದೆ ಜಲಾಭಿಷೇಕ ; 24 ಗಂಟೆ ಕೆಲಸದಲ್ಲಿ ನಿರತವಾದ ಕಸೆರಾ ಕುಟುಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts