More

    ರಾಮಲಲ್ಲಾಗೆ ಕಾಶಿಯಲ್ಲಿ ತಯಾರಾದ ಸಹಸ್ರ ಕಲಶದಲ್ಲಿ ನಡೆಯಲಿದೆ ಜಲಾಭಿಷೇಕ ; 24 ಗಂಟೆ ಕೆಲಸದಲ್ಲಿ ನಿರತವಾದ ಕಸೆರಾ ಕುಟುಂಬ

    ಅಯೋಧ್ಯೆ: ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ನಿರ್ಮಿಸಲಾದ ಭವ್ಯವಾದ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಮೆಯನ್ನು ಪ್ರತಿಷ್ಠಾಪಿಸಲಿದ್ದಾರೆ. ಜನವರಿ 18 ರಂದು ರಾಮಜನ್ಮಭೂಮಿಯಲ್ಲಿ ಪ್ರಾಣ ಪ್ರತಿಷ್ಠೆಯ ಆಚರಣೆಗಳು ಮತ್ತು ಪೂಜೆಗಳು ಪ್ರಾರಂಭವಾಗುತ್ತವೆ. ದೇವಾಲಯದಲ್ಲಿ ಈ ಆಚರಣೆಗಾಗಿ ಕಾಶಿ ಕೂಡ ತನ್ನದೇ ಆದ ಪಾತ್ರವಹಿಸುತ್ತಿದೆ. ಇಷ್ಟೇ ಅಲ್ಲ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸುವ ಬ್ರಾಹ್ಮಣರು ಮತ್ತು ಆಚಾರ್ಯರು ಕಾಶಿಯವರೇ ಆಗಿದ್ದಾರೆ. ಯಜ್ಞಕುಂಡದ ಪೂಜಾ ಸಾಮಗ್ರಿಗಳನ್ನು ಸಹ ಕಾಶಿಯಿಂದ ಅಯೋಧ್ಯೆಗೆ ಕಳುಹಿಸಲಾಗುತ್ತಿದೆ.

    5 ಲಕ್ಷ ಕಲಶಕ್ಕೆ ಆರ್ಡರ್ ಪಡೆದ ಉದ್ಯಮಿಗಳು
    ಈಗ ಕಾಶಿಯ ಕೊಡುಗೆಗೆ ಮತ್ತೊಂದು ಕೊಂಡಿ ಸೇರ್ಪಡೆಯಾಗಲಿದೆ. ಜನವರಿ 22 ರಂದು ಶ್ರೀರಾಮನು ಗರ್ಭಗುಡಿಯಲ್ಲಿ ಆಸೀನರಾದಾಗ, ಶ್ರೀರಾಮನ ಅಭಿಷೇಕವನ್ನು ಸಹಸ್ತ್ರ ಕಲಶದಿಂದ ಮಾಡಲಾಗುತ್ತದೆ. ಈ ಐತಿಹಾಸಿಕ ಆಚರಣೆಯಲ್ಲಿ 121 ಬ್ರಾಹ್ಮಣರು, ಜರ್ಮನ್ ಬೆಳ್ಳಿ ಪಾತ್ರೆಗಳಲ್ಲಿ ನೀರು ಮತ್ತು ಅಭಿಷೇಕಕ್ಕೆ ಬಳಸುವ ಶೃಂಗಿಯೊಂದಿಗೆ ದೇವರನ್ನು ಪೂಜಿಸುತ್ತಾರೆ. ವಾರಣಾಸಿಯ ಕಿರಿದಾದ ಬೀದಿಗಳಲ್ಲಿ ಎಲ್ಲವನ್ನೂ ಸಿದ್ಧಪಡಿಸಲಾಗುತ್ತಿದೆ. ಕಾಶಿ ಉದ್ಯಮಿಗಳು ಅಯೋಧ್ಯೆಗೆ 5 ಲಕ್ಷ ಕಲಶದ ಆರ್ಡರ್ ಪಡೆದಿದ್ದಾರೆ. ಒಟ್ಟಾರೆ ವಹಿವಾಟು ಅಂದಾಜು 2 ಸಾವಿರ ಕೋಟಿ ರೂ.

    ತಯಾರಿಯಲ್ಲಿ ನಿರತವಾದ ಕಸೆರಾ ಕುಟುಂಬ
    ಕಸೆರಾ ಕುಟುಂಬ ತನ್ನ ತಂಡದೊಂದಿಗೆ 24 ಗಂಟೆಗಳ ಕಾಲ ಪರಿಶ್ರಮದಿಂದ ತಯಾರಿ ನಡೆಸುತ್ತಿದೆ. ವಾರಣಾಸಿಯ ಕಾಶಿಪುರದ ನಿವಾಸಿ ಲಾಲು ಕಸೆರಾ ಅವರ ಕುಟುಂಬದ ಐದನೇ ತಲೆಮಾರಿನವರಾಗಿದ್ದು, ದೇವಾಲಯದಲ್ಲಿ ವಿವಿಧ ಲೋಹಗಳಿಂದ ಬಳಸಲಾಗುವ ಪಾತ್ರೆಗಳು ಹಾಗೂ ದೇವಾಲಯದ ಗರ್ಭಗುಡಿಯಲ್ಲಿ ಬಳಸಲಾದ ಲೋಹಗಳ ಮೇಲೆ ತಮ್ಮ ಕೈಚಳಕವನ್ನು ತೋರಿಸಲಿದ್ದಾರೆ.

    ಶ್ರೀರಾಮನ ಜಲಾಭಿಷೇಕ
    ಕಳೆದ ಡಿಸೆಂಬರ್ 20 ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಲಿರುವ ರಾಮಲಲ್ಲಾ ಮಂದಿರದಲ್ಲಿ 125 ಕಮಂಡಲಗಳು, ಅಚ್ಮಣಿ ಪತ್ರಗಳು ಮತ್ತು ಬಟ್ಟಲು ತರಹದ ಪಾತ್ರೆಯನ್ನು ತಯಾರಿಸಬೇಕೆಂದು ಲಾಲು ಕಸೆರಾ ಆದೇಶವನ್ನು ಸ್ವೀಕರಿಸಿದ್ದರು. ಲಾಲು ಅವರು ತಯಾರಿಸಿದ ಕಲಶದಲ್ಲಿ 1008 ರಂಧ್ರಗಳಿವೆ. ಪವಿತ್ರೀಕರಣದ ನಂತರ, ಈ ಸಹಸ್ತ್ರ ಕಲಶದಿಂದ ಶ್ರೀರಾಮನನ್ನು ಪ್ರತಿಷ್ಠಾಪಿಸಲಾಗುವುದು. ಈ ಆದೇಶದ ನಂತರ, ಕಸೆರಾ ಕುಟುಂಬವು ದಿನದ 24 ಗಂಟೆಗಳ ಕಾಲ ಶ್ರಮವಹಿಸಿ ತಯಾರಿ ಪ್ರಾರಂಭಿಸಿತು. ಜರ್ಮನ್ ಬೆಳ್ಳಿಯಿಂದ ಮಾಡಿದ ಕೆಲವು ಪಾತ್ರೆಗಳು ಸಿದ್ಧವಾಗಿವೆ ಮತ್ತು ಕೆಲವು ಇನ್ನೂ ಕೆಲಸದಲ್ಲಿವೆ ಮತ್ತು ಜನವರಿ 10 ರಂದು ಅಯೋಧ್ಯೆಗೆ ಕಳುಹಿಸಲಾಗುತ್ತದೆ.

    ಈ ಎಲ್ಲಾ ಪಾತ್ರೆಗಳನ್ನು ತಯಾರಿಸಲು ತನಗೆ ಸುಮಾರು ಒಂದು ತಿಂಗಳು ಬೇಕಾಯಿತು ಎಂದು ಲಾಲು ಕಸೆರಾ ಹೇಳುತ್ತಾರೆ. ಆದರೆ, ಕಾಶಿಯ ಈ ಕುಟುಂಬ ರಾಮಲಲ್ಲಾನ ಈ ಮಹಾ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಹೆಮ್ಮೆ ಪಡುತ್ತಿದೆ. 

    ‘ರಾಮ್​​​ ಆಯೇಂಗೆ…’ ಸ್ವಾತಿ ಮಿಶ್ರಾ ಹಾಡಿದ ರಾಮ ಭಜನೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts