More

    ಮುಳುಗಡೆ ಸಂತ್ರಸ್ತರ ಸಮಸ್ಯೆಗಿಲ್ಲ ಪರಿಹಾರ

    ಸಾಗರ: ಮಲೆನಾಡಿನಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿವೆ. ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಕುರಿತು ತೊಡಕುಗಳಿವೆ. ಇವುಗಳನ್ನು ಪರಿಹರಿಸುವಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ವಿಫಲರಾಗಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಟೀಕಿಸಿದರು.

    ಸಾಗರ: ಮಲೆನಾಡಿನಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿವೆ. ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಕುರಿತು ತೊಡಕುಗಳಿವೆ. ಇವುಗಳನ್ನು ಪರಿಹರಿಸುವಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ವಿಫಲರಾಗಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಟೀಕಿಸಿದರು.
    ಸಾಗರದ ಈಡಿಗರ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅರಣ್ಯಭೂಮಿ ಸಾಗುವಳಿದಾರರು, ವಾಸ ಮಾಡುತ್ತಿರುವವರು ಸಂಕಷ್ಟದಲ್ಲಿದ್ದಾರೆ. ಇವರಿಗೆ ಹಕ್ಕುಪತ್ರ ಕೊಡಿಸಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕನಸಾಗಿತ್ತು. ಇವುಗಳನ್ನು ಗೀತಾ ಶಿವರಾಜ ಕುಮಾರ್ ನಿಮ್ಮ ಧ್ವನಿಯಾಗಿ ಈಡೇರಿಸುತ್ತಾರೆ ಎಂದರು.
    ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಗೀತಾ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿಕೊಡಿ. ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಸರ್ಕಾರ ಅವರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಹೇಳಿದರು.
    ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಾಧನೆ ರಾಜ್ಯದ ಮನೆಮನೆಯಲ್ಲಿ ಚರ್ಚೆಯಾಗುತ್ತಿದೆ. ಹಿಂದಿನ ಸರ್ಕಾರದಲ್ಲಿ ದುಷ್ಟಕೂಟವೊಂದು ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಮತದಾರರನ್ನು ವಂಚಿಸಿದೆ. ಉದ್ಯೋಗ ಖಾತ್ರಿ ಯಶಸ್ವಿಯಾಗಿಲ್ಲ, ಆಶ್ರಯ, ಅಕ್ರಮ-ಸಕ್ರಮ ಯಾವುದೂ ಜನರಿಗೆ ಪರಿಣಾಮಕಾರಿಯಾಗಿ ತಲುಪಿಲ್ಲ. ಚುನಾವಣೆ ಹತ್ತಿರ ಬಂದಾಗ ಈಡಿಗರ ಸಮಾವೇಶ ಮಾಡಿ ಕಾಗೋಡು ತಿಮ್ಮಪ್ಪ ಅವರನ್ನು ಬಿಟ್ಟು ಯಡಿಯೂರಪ್ಪ ಅವರನ್ನು ಮಾಜಿ ಶಾಸಕ ಹಾಲಪ್ಪ ಸನ್ಮಾನಿಸಿದ್ದಾರೆ ಎಂದು ಟೀಕಿಸಿದರು.
    ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಲೋಕಸಭೆಯಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವ ಆಸೆ ಇದೆ. ಮತದಾರರು ಅದಕ್ಕೆ ಅವಕಾಶ ಮಾಡಿಕೊಡಬೇಕು. ನಮ್ಮ ತಂದೆ ಬಂಗಾರಪ್ಪ ಮಾಡಿರುವ ಸಾಧನೆ ಇಡೀ ರಾಜ್ಯದ ಜನರ ಮೆಚ್ಚುಗೆ ಗಳಿಸಿವೆ. ತಂದೆಯಂತೆ ನಾನೂ ಚುನಾವಣೆಯಲ್ಲಿ ಜಯಗಳಿಸಿ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದರು.
    ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ಬಿ.ವೈ.ರಾಘವೇಂದ್ರ ಅಭಿವೃದ್ಧಿ ಮಾಡಿರುವುದಾಗಿ ಹೇಳುತ್ತಾರೆ. ಅವರು ಅಭಿವೃದ್ಧಿ ಮಾಡಿದ್ದು ಅವರ ಆಸ್ತಿ ಇರುವ ಕಡೆ ಮಾತ್ರ. ಇದರಿಂದ ಅವರ ಆಸ್ತಿಯ ದರ ಹೆಚ್ಚಾಗಿದೆ. ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಫ್ಲೈಓವರ್ ಮತ್ತು ರಿಂಗ್ ರೋಡ್‌ಗಳು ಇವೆಯೋ ಅಲ್ಲೆಲ್ಲ ರಾಘವೇಂದ್ರ ಅವರ ಆಸ್ತಿಗಳಿವೆ ಎಂದು ದೂರಿದರು.
    ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಎಲ್ಲರಿಗೂ ಕೈಮುಗಿದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
    ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಪ್ರಮಖರಾದ ಕಲಸೆ ಚಂದ್ರಪ್ಪ, ಇಂದೂಧರ ಗೌಡ, ಬಿ.ಆರ್.ಜಯಂತ್, ಅನಿತಾಕುಮಾರಿ, ಎಲ್.ಚಂದ್ರಪ್ಪ, ಅಶೋಕ ಬೇಳೂರು, ಕೆ.ಹೊಳೆಯಪ್ಪ, ರವಿಕುಮಾರ್, ತಸ್ರ್ೀ, ಮಕ್ಬೂಲ್ ಅಹ್ಮದ್, ಸುಮಂಗಲಾ ರಾಮಕೃಷ್ಣ , ಉಷಾ, ಮೈಕಲ್ ಡಿಸೋಜ, ಕಲಗೋಡು ರತ್ನಾಕರ, ರಮೆಶ್ ಶಿವಮೊಗ್ಗ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts