More

    ಯೋಗಿ ಸರ್ಕಾರದಲ್ಲಿ ಲವ್​ ಜಿಹಾದ್​ ಬಗ್ಗೆ ಮಸೂದೆ ಸಿದ್ಧವಾಗುತ್ತಿಲ್ಲ; ಹಾಗಾದರೆ ಇಷ್ಟು ದಿನ ಹೇಳಿದ್ದು ಸುಳ್ಳಾ?

    ಲಖನೌ: ಉತ್ತರ ಪ್ರದೇಶದಲ್ಲಿ ಲವ್​ ಜಿಹಾದ್​ ವಿರುದ್ಧ ಹೊಸದೊಂದು ಕಾನೂನು ಬರಲಿದೆ. ಅದಕ್ಕೆಂದು ಮಸೂದೆ ಸಿದ್ಧಪಡಿಸಲಾಗುತ್ತಿದ್ದು, ಕೆಲ ದಿನಗಳಲ್ಲಿ ನೂತನ ಕಾಯ್ದೆ ಹೊರಬರಲಿದೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ ಇದೀಗ ಆ ಸುದ್ದಿಗೆ ಸಣ್ಣದೊಂದು ಟ್ವಿಸ್ಟ್​ ಸಿಕ್ಕಿದೆ.

    ಇದನ್ನೂ ಓದಿ: ಪ್ರವಾಸಿ ಕ್ಷೇತ್ರಗಳ ಪುನಶ್ಚೇತನಕ್ಕೆ ಆದ್ಯತೆ ; ಉಮಾಮಹದೇವನ್ ಹೇಳಿಕೆ

    ಮಸೂದೆ ಸಿದ್ಧವಾಗುತ್ತಿರುವುದು ಸತ್ಯ. ಆದರೆ ಅದು ಲವ್​ ಜಿಹಾದ್​ ವಿರುದ್ಧವಲ್ಲ. ಮಸೂದೆಯಲ್ಲಿ ಎಲ್ಲಿಯೂ ಕೂಡ ಲವ್​ ಜಿಹಾದ್​ ಪದದ ಬಳಕೆಯೇ ಆಗಿಲ್ಲ. ಬದಲಾಗಿ ‘ನೂನುಬಾಹಿರ ಮತಾಂತರ ನಿಷೇಧ ಮಸೂದೆ’ ಎಂದು ಕರೆಯಲಾಗಿದೆ. ಇದು ಕೇವಲ ಹಿಂದೂ ಮುಸ್ಲಿಂ ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಕ್ಕೂ ಅನ್ವಯವಾಗುತ್ತದೆ ಎಂದು ಉತ್ತರ ಪ್ರದೇಶ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆದಿತ್ಯಾ ಮಿತ್ತಲ್​ ತಿಳಿಸಿದ್ದಾರೆ.

    ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದು ತಪ್ಪಲ್ಲ. ಆದರೆ ಅದು ಕಾನೂನಿನ ಚೌಕಟ್ಟಿನಲ್ಲಿರಬೇಕು. ಕೇವಲ ಮದುವೆಯ ಕಾರಣಕ್ಕೆ ಮತಾಂತರವಾಗುವುದು ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಲಯ ಈಗಾಗಲೇ ಹೇಳಿದೆ. ಹಾಗೆಯೇ ಅನ್ಯ ಉದ್ದೇಶದಿಂದ ಬೇರೆ ಧರ್ಮೀಯರನ್ನು ಮದುವೆಯಾಗುವುದನ್ನೂ ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ದಲಿತ ಯುವತಿಯರನ್ನು ಬೇರೆ ಧರ್ಮಕ್ಕೆ ಕಾನೂನುಬಾಹಿರವಾಗಿ ಮತಾಂತರ ಮಾಡಿಕೊಳ್ಳುವವರಿಗೆ 10 ವರ್ಷ ಜೈಲು ಮತ್ತು ಇತರ ವರ್ಗದವರನ್ನು ಕಾನೂನು ಬಾಹಿರವಾಗಿ ಮತಾಂತರ ಮಾಡಿದರೆ 5 ವರ್ಷದವರೆಗಿನ ಜೈಲು ಶಿಕ್ಷೆ ವಿಧಿಸುವುದಾಗಿ ಮಸೂದೆಯಲ್ಲಿ ಮಂಡಿಸಲಾಗುವುದು. ಸದ್ಯದಲ್ಲೇ ಮಸೂದೆ ಮಂಡನೆ ಮಾಡುವುದಾಗಿ ತಿಳಿಸಲಾಗಿದೆ.

    ಇದನ್ನೂ ಓದಿ: ಡಿಸೆಂಬರ್ ಮೊದಲ ವಾರದಲ್ಲಿ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು

    ಈ ರೀತಿ ಪ್ರಕರಣಗಳಲ್ಲಿ ಕೇವಲ ಕುಟುಂಬ ಮಾತ್ರವೇ ನ್ಯಾಯಾಲಯದ ಮೆಟ್ಟಿಲೇರಬಹುದು. ಯಾವುದೇ ಸಂಘ ಸಂಘಟನೆಗಳು ಇಂತಹ ಪ್ರಕರಣದ ವಿರುದ್ಧ ದೂರು ಸಲ್ಲಿಸುವಂತಿಲ್ಲ ಎಂದು ಆದಿತ್ಯಾ ಅವರು ಹೇಳಿದ್ದಾರೆ. (ಏಜೆನ್ಸೀಸ್​)

    ಡ್ರಗ್ಸ್​ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್​ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts