More

    ನಾಡು, ನುಡಿ ವಿಚಾರದಲ್ಲಿ ರಾಜೀಯಿಲ್ಲ

    ಕೋಲಾರ: ಕನ್ನಡ ನಾಡು, ನುಡಿ, ಜಲ ವಿಚಾರದಲ್ಲಿ ಯಾವುದೇ ಸಂದರ್ಭದಲ್ಲಿ ರಾಜೀಯಾಗುವ ಪ್ರಶ್ನೆಯಿಲ್ಲ, ವೇದಿಕೆಯ ಕಾರ್ಯಕರ್ತರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದರು.

    ನಗರದ ಸ್ಕೌಟ್ಸ್​ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ಆಯೋಜಿಸಿದ್ದ ವಿವಿಧ ಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನನಗೇನು ಜೈಲು, ಕೇಸು ಹೊಸದಲ್ಲ, ಡಿ.27ರಂದು ಬೆಂಗಳೂರಿನಲ್ಲಿ ನಡೆಸಿದ ಬಹುದೊಡ್ಡ ಇತಿಹಾಸ ಹೋರಾಟ ನಡೆಸಿದ್ದೇವೆ ಎಂದರು.

    ಸರ್ಕಾರವು ಹುನ್ನಾರ ನಡೆಸಿ ನನ್ನನ್ನು ಸೇರಿದಂತೆ ಕಾರ್ಯಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿತು. ಇದರಿಂದ ನಮಗೇನು ನಷ್ಟವಾಗಿಲ್ಲ. ಪೊಲೀಸರು ಭಯದಿಂದ ಶೂನ್ಯ ಟ್ರಾಫಿಕ್​ನಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ, ಕರಕೊಂಡು ಬರುತ್ತಿದ್ದರು ಎಂದು ಹೇಳಿದರು.

    ಅಜ್ಞೆ ಮಾಡುವವರೆಲ್ಲ ಬೇಕಾದರೆ ವಿಧಾನಸೌಧದಲ್ಲಿ ಕುಳಿತುಕೊಳ್ಳಲಿ, ಕನ್ನಡ ಮಾನದ ತಂಟೆಗೆ ಬಿಟ್ಟರೆ ಸುಮ್ಮನಿರಲ್ಲ. ಕನ್ನಡ ನಾಮಫಲಕ ಹೋರಾಟ ಕೇವಲ ಬೆಂಗಳೂರಿಗೆ ಸಿಮೀತವಾಗಿರಲ್ಲ. ಮೂವತ್ತು ಜಿಲ್ಲೆಯಲ್ಲೂ ನಡೆಯುತ್ತದೆ. ಕರವೇ ಕಾರ್ಯಕರ್ತರು ನಿಜವಾದ ಹೋರಾಟಗಾರರು, ಸಿನಿಮಾಗಳಲ್ಲಿ ನಟಿಸಿಕೊಂಡು, ಹೊಟ್ಟೆಪಾಡಿಗಾಗಿ ಹೋರಾಟ ನಡೆಸುವವರಲ್ಲ ಎಂದರು.

    ಹೋರಾಟದ ಲವಾಗಿ ರಾಜಧಾನಿಯಲ್ಲಿ ಕನ್ನಡ ರಾರಾಜಿಸಲು 25 ವರ್ಷ ಬೇಕಾಯಿತು. ಬಿಬಿಎಂಪಿ ಆಯುಕ್ತರು ಕರೆ ಮಾಡಿ 90 ಭಾಗ ಕನ್ನಡಿಕರಣ ಆಗಿದೆ. ವಾರದಲ್ಲಿ ಶೇ.100 ಸಾಧನೆಯಾಗಲಿದೆ ಎಂದು ತಿಳಿಸಿದರು. ನಮ್ಮ ಹೋರಾಟದ ಪ್ರತಿಲ ಹೇಗಿರುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎಂದು ತಿಳಿಸಿದರು.

    ಹೋರಾಟದ ಸಮಯದಲ್ಲಿ ಬಂಧಿಸಿ ಕರವೇ ಹೋರಾಟವನ್ನು ಇಡೀ ದೇಶ, ವಿದೇಶಕ್ಕೆ ಪರಿಚಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರನ್ನು ಅಭಿನಂಧಿಸುತ್ತೇನೆ. ಕರವೇಯ ತಾಕತ್​ ತೋರಿಸಿಕೊಟ್ಟಿದ್ದಾರೆ. ಸರ್ಕಾರಕ್ಕೆ ಹೆದರಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಸಂಟನೆ ಬಲಿಷ್ಟವಾಗಬೇಕು. ಕೇವಲ ಪದಾಧಿಕಾರಿಯಾಗಿ ನೇಮಕ ಪಡೆದು ಕೂರಬೇಡಿ. ಪ್ರತಿಯೊಬ್ಬರಲ್ಲೂ ಹೋರಾಟದ ಕಿಚ್ಚು ಹೊತ್ತಬೇಕು ಎಂದರು.

    ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ ಮಾತನಾಡಿ, ಕೆಜಿಎ್​ನ ಪ್ರತಿಷ್ಠಿತ ಬೆಮೆಲ್​ ಸಂಸ್ಥೆಯಲ್ಲಿ ಕನ್ನಡಿಗರನ್ನು ವಂಚಿಸಿ ಬೇರೆ ರಾಜ್ಯದವರಿಗೆ ಕೆಲಸ ನೀಡಲಾಗುತ್ತಿದೆ. ಹೊರತ್ತಿಗೆ ಆಧಾರದ ಮೇಲೂ ಕನ್ನಡಿಗೆ ಆದ್ಯತೆ ನೀಡುತ್ತಿಲ್ಲ. ಇದರ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.

    ಜಿಲ್ಲಾ ಪ್ರಧಾನಕಾರ್ಯದರ್ಶಿ ಮುನಿರಾಜು, ಬಂಗಾರಪೇಟೆ ತಾಲೂಕು ಅಧ್ಯಕ್ಷ ರಾಮಪ್ರಸಾದ್​, ಮಾಲೂರು ತಾಲೂಕು ಅಧ್ಯಕ್ಷ ಶ್ರೀನಿವಾಸ್​, ಮುಳಬಾಗಿಲು ತಾಲೂಕು ಅಧ್ಯಕ್ಷ ಹುಸೇನ್​ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts