More

    ಮೇಲುಕೋಟೆ ಅಷ್ಟತೀರ್ಥೋತ್ಸವಕ್ಕೂ ಕರೊನಾ ಅಡ್ಡಿ; 10 ಕಿ.ಮೀ. ಉದ್ದದ ಯಾತ್ರೆ ರದ್ದು..

    ಮಂಡ್ಯ: ಸಾಂಕ್ರಾಮಿಕ ಪಿಡುಗು ಕರೊನಾ ಇಟ್ಟಿರುವ ಹಾವಳಿ ಅಂತಿಂಥದ್ದಲ್ಲ. ಶಾಲೆ-ದೇವಸ್ಥಾನ ಎನ್ನದೆ ಎಲ್ಲವನ್ನೂ ಮುಚ್ಚಿಸಿದ್ದ ಕರೊನಾ ಇದೀಗ ಮೇಲುಕೋಟೆಯ ಅಷ್ಟತೀರ್ಥೋತ್ಸವಕ್ಕೂ ಅಡ್ಡಿಯಾಗಿದೆ. ತೊಟ್ಟಿಲ ಮಡು ಉತ್ಸವ ಎಂದೇ ಖ್ಯಾತಿ ಪಡೆದಿರುವ ಇದನ್ನು ರದ್ದುಗೊಳಿಸಲಾಗಿದ್ದು, ಈ ವರ್ಷ ಇದು ನೆರವೇರುವುದಿಲ್ಲ.

    ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಶ್ರೀಚೆಲುವ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ರಾಜಮುಡಿ ಕಿರೀಟಧಾರಣಾ ಉತ್ಸವ ಹಾಗೂ ಅಷ್ಟತೀರ್ಥೋತ್ಸವ ನಡೆಯುತ್ತದೆ. ಈ ವರ್ಷ ನ. 17ರಿಂದಲೇ ಈ ಉತ್ಸವ ಪ್ರಕ್ರಿಯೆಗಳು ಆರಂಭವಾಗಿದ್ದು, ನ. 26ರ ವರೆಗೆ ನಡೆಯಲಿವೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ.

    ಕೋವಿಡ್​-19 ಹಿನ್ನೆಲೆಯಲ್ಲಿ ನ. 22ರಂದು ನಡೆಯುವ ರಾಜಮುಡಿ ಕಿರೀಟಧಾರಣಾ ಉತ್ಸವವನ್ನು ದೇವಾಲಯದ ಒಳಪ್ರಾಕಾರದಲ್ಲಷ್ಟೇ ನಡೆಸಬೇಕು. ಹಾಗೆಯೇ ನ. 24ರಂದು ನಡೆಯುವ ಅಷ್ಟ ತೀರ್ಥೋತ್ಸವ ಸುಮಾರು 10 ಕಿ.ಮೀ. ದೂರದ ಯಾತ್ರೆ ಒಳಗೊಂಡಿರುವುದರಿಂದ ಅದನ್ನು ನಿರ್ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts