More

    ಭಾರತ ತಂಡದ ಆಯ್ಕೆ ಸಭೆಯಲ್ಲಿ ಹಸ್ತಕ್ಷೇಪದ ಆರೋಪ; ಇಲ್ಲಿದೆ ಗಂಗೂಲಿ ಉತ್ತರ…

    ಕೋಲ್ಕತ: ಭಾರತ ತಂಡದ ಆಯ್ಕೆ ಸಭೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವ ಮತ್ತು ಆಯ್ಕೆಗಾರರ ಮೇಲೆ ಒತ್ತಡ ಹೇರುತ್ತಿರುವ ಬಗೆಗಿನ ಆರೋಪಗಳನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಳ್ಳಿಹಾಕಿದ್ದಾರೆ.

    ‘ಇವೆಲ್ಲವೂ ಆಧಾರರಹಿತ ಆರೋಪಗಳಾಗಿವೆ. ನಾನು ಬಿಸಿಸಿಐ ಅಧ್ಯಕ್ಷ ಮತ್ತು ಬಿಸಿಸಿಐ ಅಧ್ಯಕ್ಷನಾಗಿ ಮಾಡಬೇಕಾದ ಕೆಲಸಗಳನ್ನು ನಿರ್ವಹಿಸುತ್ತೇನೆ. ನಾನು ಆಯ್ಕೆ ಸಮಿತಿ ಸಭೆಯಲ್ಲಿ ಪಾಲ್ಗೊಂಡಿರುವೆ ಎಂದು ಹೇಳಲಾದ ಚಿತ್ರವೊಂದು (ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ಆಗಿನ ನಾಯಕ ವಿರಾಟ್ ಕೊಹ್ಲಿ, ಆಗಿನ ಉಪನಾಯಕ ರೋಹಿತ್ ಶರ್ಮ, ಆಗಿನ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಕೂಡ ಇದ್ದಾರೆ) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಮನಿಸಿರುವೆ. ಆದರೆ ಅದು ಆಯ್ಕೆ ಸಮಿತಿ ಸಭೆಯ ಚಿತ್ರವೇ ಅಲ್ಲ’ ಎಂದು ಟೀಮ್ ಇಂಡಿಯಾ ಮಾಜಿ ನಾಯಕರೂ ಆಗಿರುವ ಗಂಗೂಲಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಭಾರತ ಟೆಸ್ಟ್ ತಂಡಕ್ಕೆ ಶೀಘ್ರವೇ ಹೊಸ ನಾಯಕನನ್ನು ಆರಿಸಲಾಗುವುದು. ಆಯ್ಕೆಗಾರರು ಈಗಾಗಲೆ ಈ ಬಗ್ಗೆ ಚರ್ಚಿಸಿರಬಹುದು. ಅವರೊಂದಿಗೆ ಚರ್ಚಿಸಿ ಶೀಘ್ರವೇ ಘೋಷಣೆ ಹೊರಡಿಸಲಾಗುವುದು ಎಂದು ಗಂಗೂಲಿ ತಿಳಿಸಿದ್ದಾರೆ. ಮುಂದಿನ ವರ್ಷ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಟೂರ್ನಿ ಆರಂಭಿಸುವ ಸುಳಿವನ್ನೂ ಗಂಗೂಲಿ ನೀಡಿದ್ದಾರೆ. ಕರೊನಾ ಕಾಲದ ಸುರಕ್ಷಿತ ಬಯೋಬಬಲ್ ಹಿನ್ನೆಲೆಯಲ್ಲಿ ಭಾರತ ತಂಡದ 1000ನೇ ಏಕದಿನ ಪಂದ್ಯದ ವೇಳೆ ಯಾವುದೇ ವಿಶೇಷ ಸಂಭ್ರಮಾಚರಣೆ ಇರುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

    ವಿಂಡೀಸ್ ವಿರುದ್ಧ ಮೊದಲ ಏಕದಿನಕ್ಕೆ ಮಾತ್ರ ಕೆಎಲ್ ರಾಹುಲ್ ಅಲಭ್ಯ, ಹೀಗಿದೆ ಕಾರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts