More

    ಚಿತ್ರದುರ್ಗ, ದಾವಣಗೆರೆಯ ಖತರ್​ನಾಕ್ ಕಳ್ಳರ ಬಂಧನ

    ಚಿತ್ರದುರ್ಗ : ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಾಗಿದ್ದ ಸುಲಿಗೆ ಹಾಗೂ ಕಳ್ಳತನದ 21ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಪೊಲೀ ಸರು ಅಂತರ್‌ರಾಜ್ಯ, ಜಿಲ್ಲೆ ಸೇರಿದಂತೆ 8 ಆರೋಪಿಗಳನ್ನು ಬಂಧಿಸಿ ಅವರಿಂದ12.72 ಲಕ್ಷ ರೂ.ಮೌಲ್ಯದ ನಗ,ನಗದು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಜಿ.ರಾಧಿಕಾ ಹೇಳಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮನೆ ಕಳ್ಳತನ ಪ್ರಕರಣದಡಿ ನಗರದ ಆಶ್ರಯ ಬಡಾವಣೆ ನಿವಾಸಿ ಸೈಯದ್‌ಅಕ್ಬರ್(52)ನನ್ನು ಬಂಧಿಸಿ,ಅಂದಾಜು 7.20 ಲಕ್ಷ ರೂ.ಮೌಲ್ಯದ 160 ಗ್ರಾಂ.ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ. ಬೀಗ ಹಾಕಿದ ಮನೆಗಳೇ ಈತನ ಟಾರ್ಗೆಟ್ ಆಗಿದ್ದು, ಕದ್ದ ಬಂಗಾರವನ್ನು ಹಣಕಾಸು ಸಂಸ್ಥೆಯಲ್ಲಿ ಅಡವಿಡುತ್ತಿದ್ದ ಎಂದರು.

    ಇದನ್ನೂ ಓದಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪಾಸ್​: 5 ಲಕ್ಷ ದಂಡ, 7 ವರ್ಷ ಜೈಲು

    ಸುಲಿಗೆ ಪ್ರಕರಣದಡಿ ಚಳ್ಳಕೆರೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಚಿತ್ರದುರ್ಗದ ಅಂಜಿನಪ್ಪ ಎಂಬುವರು ಚಳ್ಳಕೆರೆ ಕೆಇಬಿ ಕ್ರಾಸ್ ಬಳಿ ತಮ್ಮ ಲಾರಿಯನ್ನು ನಿಲ್ಲಿಸಿಕೊಂಡು ಮಲಗಿದ್ದ ವೇಳೆ, ಅವರಿಗೆ ಚಾಕು ತೋರಿಸಿ 7000 ಸಾವಿರ ರೂ.ನಗದು ಕಸಿದು ಪರಾರಿಯಾ ಗಿದ್ದ ಚಿತ್ರದುರ್ಗದ ಮಹಮ್ಮದ್ ನೂರುಲ್ಲಾ(26)ಹಾಗೂ ಇಮ್ರಾನ್(23)ರನ್ನು ಬಂಧಿಸಿ,ಅವರಿಂದ 16,650 ರೂ.ನಗದು,2ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕದ್ದಿದ್ದ ಬೈಕೊಂದನ್ನು ವಶಕ್ಕೆ ಪಡೆಯಲಾಗಿದೆ. ಸಿಬ್ಬಂದಿ ಮಂಜಪ್ಪ,ರಾಜು ಅವರ ಸಮಯ ಪ್ರಜ್ಞೆಯಿಂದಾಗಿ ಕೃತ್ಯ ನಡೆದ ಕೆಲವೇ ತಾಸುಗಳನ್ನು ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದರು.

    ಇದನ್ನೂ ಓದಿ: ‘ಹೆಂಡ್ತಿ ಹೆದರಿಸ್ತಿದಾಳೆ, ರಜೆ ಕೊಡಿ’ ವಿಚಿತ್ರವಾಗಿ ಈ ಪೇದೆಯ ಲೀವ್​ ಲೆಟರ್​

    ನಗರದ ಕೋಟೆ ಹಾಗೂ ಬಡಾವಣೆ ಪೊಲೀಸರು ಇಬ್ಬರು ಬೈಕ್ ಕಳ್ಳರನ್ನು ಬಂಧಿಸಿ ಅವರಿಂದ 13 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಹರಿಹರದ ಕಿರಣ್(24)ನನ್ನು ಬಂಧಿಸಿ ಆತನಿಂದ ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳಲ್ಲಿ ಕದ್ದಿದ್ದ 10 ಬೈಕ್‌ಗಳನ್ನು ಹಾಗೂ ಅನಂತಪುರದ ಆರೋಪಿ ಶ್ರೀಧರನನ್ನು(31)ಬಂಧಿಸಿ,ಆತನಿಂದ ನಗರದಲ್ಲಿ ಕಳವಾಗಿದ್ದ 3 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

    ಇದನ್ನೂ ಓದಿ: ಪ್ರಿಯತಮೆಯನ್ನೇ ಕೊಚ್ಚಿ ಕೊಂದಿದ್ದವನಿಗೆ ಜೀವಾವಧಿ ಶಿಕ್ಷೆ; ಏಳು ವರ್ಷ ಹಿಂದಿನ ಪ್ರಕರಣ ಅಂತ್ಯ

    ಜಾನುವಾರು ಕದ್ದು ಮಾರುತ್ತಿದ್ದ ಮೂವರನ್ನು ಹಿರಿಯೂರು ತಾಲೂಕು ಅಬ್ಬಿನಹೊಳೆ ಪೊಲೀಸರು ಬಂಧಿಸಿದ್ದಾರೆ. ಅರಸೀಕೆರೆಯ ಅಭಿಷೇಕ್(24),ಚಿಕ್ಕಮಗಳೂರಿನ ಮಹಮ್ಮದ್ ಶಾಕೀರ್(22)ರನ್ನು ಬಂಧಿಸಿ ಅವರಿಂದ 1.50 ಲಕ್ಷ ರೂ.ನಗದು ವಶಕ್ಕೆ ಪಡೆಯಲಾಗಿ ದೆ ಎಂದರು. ನಕಲಿ ಕ್ರಿಮಿನಾಶಕ ಮಾರಾಟ ಆರೋಪದಡಿ ನಾಯಕನಹಟ್ಟಿಯ ಬಿ.ಟಿ.ಶಿವಾರೆಡ್ಡಿ(45)ಎಂಬುವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು. ಡಿವೈಎಸ್ಪಿಗಳಾದ ಕೆ.ವಿ.ಶ್ರೀಧರ್,ಪಾಂಡುರಂಗ,ನಗರ ಠಾಣೆ ಪಿಐ ಟಿ.ಆರ್.ನಯೀಂ ಅಹಮ್ಮದ್ ಮತ್ತಿತರ ಅಧಿಕಾರಿ,ಸಿಬ್ಬಂದಿ ಇದ್ದರು.

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಲಾಕ್​ಡೌನ್ ಪರಿಣಾಮ ದುಪ್ಪಟ್ಟಾಯಿತು ಯುವಜನರ ವ್ಯಾಕುಲತೆ ಎನ್ನುತ್ತಿದೆ ಅಧ್ಯಯನ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts