More

    ಶತಮಾನದ ಶಾಲೆಗೆ ಗತವೈಭವ: ಯುವ ಬ್ರಿಗೇಡ್ ಪರಿಸರ ಕಾಳಜಿಗೆ ಮೆಚ್ಚುಗೆ 

    ರಾಮನಗರ: ಬುದ್ದಿವಂತರು ಎನಿಸಿಕೊಂಡವರಿಂದಲೇ ಪರಿಸರ ನಾಶ ಆಗುತ್ತಿದೆ. ಕಣ್ಣ ಮುಂದೆ ಪರಿಸರ ನಾಶವಾಗಿದ್ದರೂ ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ, ಜಿಲ್ಲೆಯಲ್ಲಿ ಯುವ ಬ್ರಿಗೇಡ್ ಪರಿಸರ ಕಾಳಜಿಯ ಜತೆಗೆ, ಶಾಲೆ, ಪ್ರಮುಖ ಸ್ಥಳಗಳ ನೈರ್ಮಲ್ಯ ಕಾಡುವ ನಿಟ್ಟಿನಲ್ಲಿ ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

    75ನೇ ಸ್ವಾತಂತ್ರ್ಯ ದಿನದ ಸವಿ ನೆನಪಿಗಾಗಿ ಈ ವರ್ಷ 75 ವಿವಿಧ ಕಾರ್ಯಕ್ರಮಗಳನ್ನು ಯುವ ಬ್ರಿಗೇಡ್ ಹಮ್ಮಿಕೊಂಡಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ವಣವಾಗಿರುವ ದೇವಾಲಯಗಳಿಂದ ಹಿಡಿದು, ಶಾಲಾ ಆವರಣವನ್ನು ಯುವ ಬ್ರಿಗೇಡ್ ತಂಡದ ಸದಸ್ಯರು ಸ್ವಚ್ಛಗೊಳಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಹಲವು ಐತಿಹಾಸಿಕ ದೇವಾಲಯಗಳನ್ನು ಸ್ವಚ್ಛಗೊಳಿಸಿದ್ದು, ಕೆಲವಡೆ ಗಿಡ-ಗಂಟಿಗಳಿಂದ ಮುಚ್ಚಿದ್ದ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ಸಾರ್ವಜನಿಕರು ಮರು ಬಳಕೆ ಮಾಡಲು ಪ್ರೇರೇಪಿಸುತ್ತಿದ್ದಾರೆ. ವಾರಪೂರ್ತಿ ಉದ್ಯೋಗದಲ್ಲಿ ಮೈ ಮರೆಯುತ್ತಿದ್ದ ಯುವ ಸಮೂಹ ತಮಗೆ ಲಭ್ಯವಿರುವ ವಾರದ ಒಂದು ದಿನ ರಜೆಯನ್ನು, ಸ್ವಚ್ಛತೆಗೆ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಭಾರತಾಂಬೆಯ ಸೇವೆ ಮಾಡುತ್ತಿದ್ದಾರೆ.

    ದೇಶಾಭಿಮಾನ: ಯುವ ಬ್ರಿಗೇಡ್​ನ ಕಾರ್ಯವ್ಯಾಪ್ತಿ ದೇವಾಲಯ ಮತ್ತು ಶಾಲಾ ಆವರಣ ಸ್ವಚ್ಛಗೊಳಿಸುವುದಕ್ಕೆ ಸೀಮಿತವಾಗಿಲ್ಲ. ಯುವ ಸಮೂಹದಲ್ಲಿ ದೇಶಾಭಿಮಾನ ಬಿತ್ತುವ ಸಲುವಾಗಿ, ಡಿಜಿಟಲ್ ಸಮೂಹವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಮೇರಾ ಭಾರತ್ ಮಹಾನ್ ಎಂಬ ಕಾರ್ಯಕ್ರಮದ ಅಡಿಯಲ್ಲಿ ವಿಜ್ಞಾನ, ಶಿಕ್ಷಣ, ಪ್ರಾಯೋಗಿಕ ಶಾಸ್ತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಚೀನರು ನೀಡಿದ ಕೊಡುಗೆಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದ್ದು ಇದಕ್ಕೆ ಜನತೆಯಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದೆ ಎಂಬುದು ಸದಸ್ಯರ ಅಭಿಪ್ರಾಯ. ಇದೇ ತಂಡ ಭಾರತಾಂಬೆಯ ಹೆಮ್ಮೆಯ ಪುತ್ರ ಹಾಗೂ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಪ್ರಚಾರ ಮಾಡುತ್ತಿದೆ. ಅಮೆರಿಕದ ಚಿಕಾಗೊ ಸಮ್ಮೇಳನದಲ್ಲಿ ನಡೆದ ಭಾಷಣವನ್ನು ಪುಸ್ತಕ ರೂಪದಲ್ಲಿ ಹಂಚಿಕೆ ಮಾಡುತ್ತಿದೆ. ಈ ತನಕ 700ಕ್ಕೂ ಅಧಿಕ ಪುಸ್ತಕವನ್ನು ಹಂಚಿಕೆ ಮಾಡಲಾಗಿದೆ.

    ಸ್ಪಾರ್ಕ್ ಕಾರ್ಯಕ್ರಮ

    ಮುಂದಿನ ವಾರದಿಂದ ಯುವ ಬ್ರಿಗೇಡ್ ತಂಡದಿಂದ ಜಿಲ್ಲೆಯಲ್ಲಿ ಸ್ಪಾರ್ಕ್ ವಿಜ್ಞಾನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ತಂಡದ ಸದಸ್ಯರು ಗ್ರಾಮಾಂತರ ಪ್ರದೇಶಕ್ಕೆ ತೆರಳಿ ವಿಜ್ಞಾನ ಕುರಿತು ಆಸಕ್ತಿದಾಯಕ ವಿಷಯಗಳನ್ನು ಜನತೆಗೆ ಹೇಳಲಿದ್ದಾರೆ. ಜಿಲ್ಲೆಯ ಎಲ್ಲೆಡೆ ಈ ಕಾರ್ಯಕ್ರಮ ನಡೆಯಲಿದೆ.ಶತಮಾನದ ಶಾಲೆ ಸ್ವಚ್ಛ

    ಶತಮಾನದ ಶಾಲೆ ಎಂದೇ ಕರೆಯಲ್ಪಡುವ ರಾಮನಗರ ಮೇಯಿನ್ ಶಾಲೆಯನ್ನು ಸ್ವಚ್ಛಗೊಳಿಸುವ ಮೂಲಕ ಯುವ ಬ್ರಿಗೇಡ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶಾಲೆ ಆವರಣದಲ್ಲಿ ಗಿಡಗಳು ಬೆಳೆದು, ಎಲ್ಲೆಲ್ಲೂ ಕಸದ ರಾಶಿ ತುಂಬಿಕೊಂಡಿತ್ತು. ಇದರ ಜತೆಗೆ, ಮಾನವನ ಅಸ್ತಿತ್ವವೇ ಇಲ್ಲ ಎನ್ನುವಂತಹ ವಾತಾವರಣ ಇಲ್ಲಿ ನಿರ್ವಣವಾಗಿತ್ತು. ಶಾಲೆಯಿಂದ ಹಿಡಿದು ಬ್ರಿಟಿಷ್ ಭಾರತದಲ್ಲಿ ನಿರ್ವಣವಾಗಿದ್ದ ದೇವಾಲಯದ ಸುತ್ತಮುತ್ತ ಇದೇ ಪರಿಸ್ಥಿತಿ. ಅದರಲ್ಲೂ ಶಾಲಾ ಆವರಣಗಳಂತು, ಲಾಕ್​ಡೌನ್​ನಿಂದಾಗಿ ಮುಚ್ಚಿದ್ದು ಈತನಕ ತೆರೆದೇ ಇರಲಿಲ್ಲ. ಆದರೆ, ಈ ಇದನ್ನು ಭಾನುವಾರ ಸ್ವಚ್ಛಗೊಳಿಸುವ ಮೂಲಕ ಶಾಲೆಗೆ ಗತವೈಭವ ಕೊಡುವ ಕೆಲಸವನ್ನು ಯುವ ಬ್ರಿಗೇಡ್ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts