More

    ಜರ್ಮನಿಯಿಂದ ಮಾದಕವಸ್ತು ತರಿಸಿ ಮಾರಾಟ ಮಾಡುತ್ತಿದ್ದ ಮಹಿಳೆ; ಆಫ್ರಿಕನ್​ ಪೆಡ್ಲರ್ಸ್​ ಜತೆಗೂ ಹೊಂದಿದ್ದಳು ನಂಟು

    ಬೆಂಗಳೂರು: ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಜಾಲದ ನಂಟು ಹೊಂದಿದ್ದ ಮಹಿಳೆಯೊಬ್ಬಳು ರಾಜಧಾನಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಾದಕವಸ್ತು ಮಾರಾಟ ಜಾಲದಲ್ಲಿದ್ದ ಯೋಗಿತಾ ಎಂಬಾಕೆಯನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದಕವಸ್ತು ಜಾಲದ ಸಂಪರ್ಕ ಹೊಂದಿದ್ದ ಯೋಗಿತಾ, ಕಳೆದ ಮೂರು ವರ್ಷಗಳಿಂದ ಮಾದಕ ವಸ್ತು ಸರಬರಾಜಿನಲ್ಲಿ ತೊಡಗಿಸಿಕೊಂಡಿದ್ದು, ರೇವ್ ಪಾರ್ಟಿಗಳಿಗೆ ಅದನ್ನು ಪೂರೈಕೆ ಮಾಡುತ್ತಿದ್ದಳು. ಅದಕ್ಕೆಂದು ಜರ್ಮನಿಯಿಂದ ಎಂಡಿಎಂಎ ಎಂಬ ಮಾದಕವಸ್ತುವನ್ನು ತರಿಸಿಕೊಂಡ ಈಕೆ ಕೊನೆಗೂ ಸಿಕ್ಕಿಹಾಕಿಕೊಂಡಿದ್ದಾಳೆ.

    ಇದನ್ನೂ ಓದಿ: ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

    ಜರ್ಮನಿಯಿಂದ ಮಾದಕವಸ್ತುವನ್ನು ತರಿಸಿಕೊಳ್ಳುತ್ತಿದ್ದ ಈಕೆ ಆಫ್ರಿಕನ್​ ಪೆಡ್ಲರ್ಸ್​ ಜತೆಗೂ ನಂಟು ಹೊಂದಿದ್ದಳು. ಜರ್ಮನಿಯಿಂದ ಒಂದು ಕಾರ್ಟನ್ ಬಾಕ್ಸ್​ನಲ್ಲಿ ಎಲೆಕ್ಟ್ರಾನಿಕ್​ ಸಿಟಿ ಪೋಸ್ಟ್​ ಆಫೀಸ್ ವ್ಯಾಪ್ತಿಯ ವಿಳಾಸಕ್ಕೆ ಕಳುಹಿಸಲಾಗಿತ್ತು. ಪಾರ್ಸೆಲ್​ನಲ್ಲಿ ಸ್ಯಾಂಡ್​ವಿಚ್​ ಗ್ರಿಲ್​, ಕಾಸ್ಮೆಟಿಕ್​ನಲ್ಲಿ ಇರಿಸಲಾಗಿದ್ದ ಎಂಡಿಎಂಎ ಇರುವುದು ಖಚಿತವಾಗುತ್ತಿದ್ದಂತೆ, ಪಾರ್ಸೆಲ್​ ಸ್ವೀಕರಿಸುತ್ತಿದ್ದ ಯೋಗಿತಾಳನ್ನು ಎನ್​ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ‘ರಾಣಿ’ಯನ್ನು ಕೊಂದು ಹೂತಿಟ್ಟ ಭೂಪ; ದೇವಸ್ಥಾನದಲ್ಲೂ ಕದ್ದು ಸಿಕ್ಕಿಬಿದ್ದ; ಇಂದು ಆಕೆಯ ಶವ ಹೊರತೆಗೆದ ಪೊಲೀಸರು..

    ಗೃಹಸಚಿವರ ಮೇಲೆ ಯಾರು ಅತ್ಯಾಚಾರ ನಡೆಸಿದ್ದಾರೆ?; ತನಿಖೆ ನಡೆಸಿ ಬಹಿರಂಗಪಡಿಸಿ ಎಂದು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts