More

    ಆಸ್ಪತ್ರೆಯಲ್ಲಿ ಮೃತ ಮಹಿಳೆ ಆಭರಣ ಕಳವು

    ಮೂಡಿಗೆರೆ: ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಹಿಳೆಯ ಕೈಗಳಲ್ಲಿದ್ದ ಎರಡು ಚಿನ್ನದ ಬಳೆಗಳು ನಾಪತ್ತೆಯಾಗಿವೆ. ಆಸ್ಪತ್ರೆ ತುರ್ತು ಘಟಕ ಸಿಬ್ಬಂದಿ ಬಳೆಗಳನ್ನು ತೆಗೆದುಕೊಂಡಿರುವುದಾಗಿ ಮೃತಳ ಕುಟುಂಬಸ್ಥರು ಆರೋಪಿಸಿ ದೂರು ದಾಖಲಿಸಿದ್ದಾರೆ.

    ಅ.23ರಂದು ಬೆಂಗಳೂರಿನ ಲಕ್ಷ್ಮೀದೇವಿ, ಶೇಖರ್ ಮತ್ತು ಅನಿತಾ ಎಂಬುವವರು ಕುಟುಂಬ ಸಮೇತರಾಗಿ ತಳವಾರದ ಸ್ನೇಹಿತರೊಬ್ಬರ ಮನೆಯ ಶುಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿಯೇ ತಂಗಿದ್ದರು. ಮರುದಿನ ಬೆಳಗ್ಗೆ 6.30ಕ್ಕೆ ಲಕ್ಷ್ಮೀದೇವಿಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಸ್ನೇಹಿತರ ಮನೆಯ ಶಮಂತ್ ಮತ್ತು ಕೆಂಪರಾಜು ಅವರ ಸಹಾಯದಿಂದ ಕುಟುಂಬಸ್ಥರು ಕರೆತಂದು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದೊಯ್ದ ತಪಾಸಣೆ ನಡೆಸಿದ ವೈದ್ಯರು, ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮೃತದೇಹವನ್ನು ತುರ್ತು ಚಿಕಿತ್ಸಾ ವಿಭಾಗದ ಕೋಣೆಯಿಂದ ಹೊರಗೆ ತಂದಿದ್ದಾರೆ. ಆಗ ಅವರ ಕೈಗಳಲ್ಲಿದ್ದ ಎರಡು ಚಿನ್ನದ ಬಳೆಗಳು ನಾಪತ್ತೆಯಾಗಿರುವುದು ಕಂಡುಬಂದಿದೆ. ಈ ಬಗ್ಗೆ ಲಕ್ಷ್ಮೀದೇವಿ ಅವರ ಸೊಸೆ ಅನಿತಾ ಆಸ್ಪತ್ರೆ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ನಮಗೆ ಗೊತ್ತಿಲ್ಲವೆಂದು ಹೇಳಿದ್ದಾರೆ.
    ಲಕ್ಷ್ಮೀದೇವಿ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಎರಡೂ ಕೈಗಳಲ್ಲಿ ತಲಾ 2 ಚಿನ್ನದ ಬಳೆಗಳಂತೆ ಒಟ್ಟು ನಾಲ್ಕು ಬಳೆಗಳಿರುವುದನ್ನು ಗಮನಿಸಿದ್ದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದವರು ಹೇಳಿದ್ದಾರೆ. ಕೆಲವೇ ಗಂಟೆಗಳು ಆಸ್ಪತ್ರೆಯಲ್ಲಿದ್ದ ಲಕ್ಷ್ಮೀದೇವಿ ಅವರ ಚಿನ್ನದ ಬಳೆ ಎಲ್ಲಿ ಹೋಗಲು ಸಾಧ್ಯ? 2 ಚಿನ್ನದ ಬಳೆಗಳನ್ನು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಸಿಬ್ಬಂದಿ ತೆಗೆದುಕೊಂಡಿರುವುದಾಗಿ ಸೊಸೆ ಅನಿತಾ ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೂಡಿಗೆರೆ ಪೋಲಿಸ್ ಠಾಣೆಗೆ ಲಕ್ಷ್ಮೀದೇವಿ ಪುತ್ರ ಶೇಖರ್ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts