More

    ಷೇರು ಮಾರುಕಟ್ಟೆಯಲ್ಲೂ ವೈರಸ್​ ಹಾವಳಿ: ದಾಖಲೆ ಮಟ್ಟ ಮುಟ್ಟಿದ್ದ ಸೂಚ್ಯಂಕ ಏಕಾಏಕಿ ಕುಸಿದದ್ದೇಕೆ?

    ಮುಂಬೈ: ಬುಧವಾರದ ವಹಿವಾಟಿನಲ್ಲಿ ಎಸ್ & ಪಿ ಬಿಎಸ್‌ಇ ಸೂಚ್ಯಂಕ 930.88 ಅಂಕಗಳು ಅಥವಾ ಶೇಕಡಾ 1.30 ರಷ್ಟು ಕುಸಿದು 70,506.31 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 302.95 ಅಂಕ ಅಥವಾ ಶೇಕಡಾ 1.41 ರಷ್ಟು ಕಡಿಮೆಯಾಗಿ 21,150.15 ಕ್ಕೆ ಸ್ಥಿರವಾಯಿತು. ಕಳೆದ ಒಂಬತ್ತು ತಿಂಗಳಲ್ಲಿಯೇ ಇದು ನಿಫ್ಟಿ 50 ಸೂಚ್ಯಂಕದ ಅತ್ಯಂತ ಕೆಟ್ಟ ದಿನವಾಗಿ ಗುರುತಿಸಲ್ಪಟ್ಟಿತ್ತು.

    ಬಿಎಸ್​ಇ ಹಾಗೂ ನಿಫ್ಟಿ ಸೂಚ್ಯಂಕಗಳು ತನ್ನ ಗರಿಷ್ಠ ಮಟ್ಟದ ದಾಖಲೆಯನ್ನು ಮುರಿಯುತ್ತಲೇ ಹೊಸ ದಾಖಲೆಗಳನ್ನು ಕಳೆದ ಕೆಲ ದಿನಗಳಿಂದ ಸೃಷ್ಟಿಸುತ್ತಿರುವ ಈ ಸಂದರ್ಭದಲ್ಲಿಯೇ ಸೂಚ್ಯಂಕ ದೊಡ್ಡ ಪ್ರಮಾಣದಲ್ಲಿ ಬುಧವಾರ ಕುಸಿದದ್ದೇಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.

    ಐಟಿ ಮತ್ತು ಗ್ರಾಹಕ ಸರಕುಗಳ ಷೇರುಗಳಲ್ಲಿನ ದೃಢವಾದ ಲಾಭಗಳಿಂದಾಗಿ ಎರಡೂ ಸೂಚ್ಯಂಕಗಳು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಬುಧವಾರ ಆರಂಭಿಕ ವಹಿವಾಟಿನಲ್ಲಿ ತಲುಪಿದ್ದವು. ಆದರೆ, ಎಲ್ಲಾ ಪ್ರಮುಖ ವಲಯದ ಷೇರುಗಳಲ್ಲಿನ ಗಮನಾರ್ಹ ಕುಸಿತವು ವಹಿವಾಟಿನ ಅವಧಿಯ ಮುಕ್ತಾಯದ ವೇಳೆಗೆ ಮಾರುಕಟ್ಟೆಯನ್ನು ಇಳಿಮುಖದತ್ತ ಸಾಗಿಸಿತು.

    ಬುಧವಾರ ಭಾರತೀಯ ಷೇರು ಮಾರುಕಟ್ಟೆ ಹಿನ್ನಡೆ ಅನುಭವಿಸಲು ಎರಡು ಸಂಗತಿಗಳು ಪ್ರಮುಖ ಕಾರಣವಾದವು. ಒಂದು ಕೋವಿಡ್ ಭೀತಿ; ಇನ್ನೊಂದು ಲಾಭ ಪಡೆಯಲು ಹೂಡಿಕೆದಾರರು ದೊಡ್ಡ ಸಂಖ್ಯೆಯಲ್ಲಿ ಷೇರುಗಳನ್ನು ಮಾರಾಟ ಮಾಡಿದ್ದು.

    ಭಾರತ, ಅಮೆರಿಕ, ಬ್ರಿಟನ್​ ಮತ್ತು ಏಷ್ಯಾದ ಇತರ ಸ್ಥಳಗಳಲ್ಲಿ ಕೋವಿಡ್ -19 ಪ್ರಕರಣಗಳು ಮತ್ತೆ ಕಾಣಿಸಿಕೊಂಡಿದ್ದು ಬುಧವಾರ ದಲಾಲ್ ಸ್ಟ್ರೀಟ್‌ನಲ್ಲಿ ರಕ್ತಪಾತಕ್ಕೆ (ಷೇರು ಬೆಲೆ ಕುಸಿತಕ್ಕೆ) ಪ್ರಮುಖ ಕಾರಣವಾಗಿದೆ.

    ಇದಲ್ಲದೆ, ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಷೇರು ಮಾರಾಟ ಮಾಡಿದ್ದು ಕೂಡ ಕುಸಿತಕ್ಕೆ ಪ್ರಮುಖ ಕಾರಣವಾಯಿತು.

    ಡ್ರಗ್​ ದಂಧೆಯ ಪಾತಕಿ ಅಮೃತ್​ಪಾಲ್​ ಸಿಂಗ್ ಪಂಜಾಬ್ ಪೊಲೀಸರ ಗುಂಡಿಗೆ ಬಲಿಯಾಗಿದ್ದು ಹೀಗೆ…

    ದೊಡ್ಡ ಸಂಖ್ಯೆಯಲ್ಲಿ ಸಂಸದರ ಅಮಾನತು ಇದೇ ಮೊದಲೇನಲ್ಲ: ಹಿಂದೆಯೂ ಈ ರೀತಿ ಆಗಿದ್ದು ಯಾವಾಗ?

    ಜೆಎನ್​.1 ಪ್ರಕರಣಗಳ ಸಂಖ್ಯೆಯಲ್ಲಿ ಗೋವಾ ಈಗ ನಂಬರ್​ 1: ಕೇರಳದಲ್ಲಿ ಮೂವರ ಬಲಿ, ಭಾರತದಲ್ಲಿ ಕೋವಿಡ್​ ಹೊಸ ರೂಪಾಂತರದ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts