More

    ಡ್ರಗ್​ ದಂಧೆಯ ಪಾತಕಿ ಅಮೃತ್​ಪಾಲ್​ ಸಿಂಗ್ ಪಂಜಾಬ್ ಪೊಲೀಸರ ಗುಂಡಿಗೆ ಬಲಿಯಾಗಿದ್ದು ಹೀಗೆ…

    ಚಂಡೀಗಢ: ಬುಧವಾರ ಬೆಳಗ್ಗೆ ಅಮೃತಸರ ಬಳಿಯ ಜಂಡಿಯಾಲ ಗುರು ಎಂಬಲ್ಲಿ ಪಂಜಾಬ್ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಪಾತಕಿ ಅಮೃತಪಾಲ್ ಸಿಂಗ್ (22) ಸಾವನ್ನಪ್ಪಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿದ್ದ ಈತನನ್ನು ಹೆರಾಯಿನ್ ಮತ್ತು ಈ ಹಿಂದೆ ಆತನ ಬಳಿಯಿದ್ದ ಆಯುಧವನ್ನು ವಶಪಡಿಸಿಕೊಳ್ಳಲು ಜಂಡಿಯಾಲ ಗುರು ಬಳಿಗೆ ಕರೆದೊಯ್ಯುವಾಗ ಈ ಘಟನೆ ಜರುಗಿದೆ.

    ಅಮೃತಪಾಲ್​ ಸಿಂಗ್​ನನ್ನು ಮಂಗಳವಾರ ಬಂಧಿಸಲಾಗಿತ್ತು. ಜಂಡಿಯಾಲ ಗುರು ಬಳಿ ತಲುಪಿದಾಗ ಈತ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದಾಗ ಈತ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಗಾಯಗಳಿಂದಾಗಿ ಈತ ಕೊನೆಯುಸಿರೆಳೆದ ಎಂದು ಅಮೃತಸರ ಗ್ರಾಮಾಂತರದ ಹಿರಿಯ ಪೊಲೀಸ್ ಅಧೀಕ್ಷಕ ಸತೀಂದರ್ ಸಿಂಗ್ ತಿಳಿಸಿದ್ದಾರೆ.

    ವಿಚಾರಣೆ ವೇಳೆ ಈತ 2 ಕೆ.ಜಿ ಹೆರಾಯಿನ್ ಬಚ್ಚಿಟ್ಟಿರುವುದಾಗಿ ಬಹಿರಂಗಪಡಿಸಿದ್ದ. ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲು ನಾವು ಅವನನ್ನು ಇಲ್ಲಿಗೆ ಕರೆತಂದಿದ್ದೇವು. ಮಾದಕ ದ್ರವ್ಯದ ಜತೆಗೆ ಪಿಸ್ತೂಲ್ ಅಡಗಿಸಿಟ್ಟುಕೊಂಡು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ. ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಆತ್ಮರಕ್ಷಣೆಗಾಗಿ ಪಾತಕಿಯನ್ನು ಕೊಂದಿದ್ದಾರೆ, ”ಎಂದು ಸತೀಂದರ್ ಸಿಂಗ್ ತಿಳಿಸಿದ್ದಾರೆ.

    ಅಮೃತಪಾಲ್ ಜಂಡಿಯಾಲ ಗುರು ಬಳಿಯ ಭಗ್ವಾ ಗ್ರಾಮದವನಾಗಿದ್ದು, ಮೂರು ಕೊಲೆ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದ.

    ಈತನ ಬಳಿಯಿದ್ದ 2 ಕೆಜಿ ಹೆರಾಯಿನ್ ಹಾಗೂ ಚೈನೀಸ್ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಈಗಾಗಲೇ ಆತನ ಮೂವರು ಸಹಚರರನ್ನು ಬಂಧಿಸಿದ್ದರು. ಮಂಗಳವಾರ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲಾಗಿದೆ.

    ದೊಡ್ಡ ಸಂಖ್ಯೆಯಲ್ಲಿ ಸಂಸದರ ಅಮಾನತು ಇದೇ ಮೊದಲೇನಲ್ಲ: ಹಿಂದೆಯೂ ಈ ರೀತಿ ಆಗಿದ್ದು ಯಾವಾಗ?

    ಜೆಎನ್​.1 ಪ್ರಕರಣಗಳ ಸಂಖ್ಯೆಯಲ್ಲಿ ಗೋವಾ ಈಗ ನಂಬರ್​ 1: ಕೇರಳದಲ್ಲಿ ಮೂವರ ಬಲಿ, ಭಾರತದಲ್ಲಿ ಕೋವಿಡ್​ ಹೊಸ ರೂಪಾಂತರದ ಭೀತಿ

    ಬುಧವಾರವೂ ಮುಂದುವರಿದ ಸಂಸದರ ಅಮಾನತು ಕ್ರಮ: ಸಸ್ಪೆಂಡ್​ ಆದ ಎಂಪಿಗಳ ಸಂಖ್ಯೆ ಎಷ್ಟು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts