More

    ಜಾಲತಾಣದಲ್ಲಿ ದುಷ್ಕೃತ್ಯದ ವಿಡಿಯೋ ವೈರಲ್; ಮುಂಬೈನಲ್ಲಿ ರೌಡಿ ಸೆರೆ

    ಬೆಂಗಳೂರು: ಸ್ಥಳೀಯವಾಗಿ ಹವಾ ಸೃಷ್ಟಿಸಲು ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ವಿಡಿಯೋ ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟು ಭೀತಿ ಸೃಷ್ಟಿಸುತ್ತಿದ್ದ ಕುಖ್ಯಾತ ರೌಡಿಯನ್ನು ಗೋವಿಂದಪುರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಹೆಗಡೆ ನಗರದ ನಸ್ರುವುಲ್ಲಾ ಅಲಿಯಾಸ್ ನಸ್ರು ಬಂಧಿತ.

    ಕಳೆದೊಂದು ವರ್ಷದಿಂದ ಹಳೇ ಪ್ರಕರಣಗಳ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗದೆ ನಸ್ರು ತಪ್ಪಿಸಿಕೊಂಡಿದ್ದ.ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿ ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿತು. ಪೂರ್ವ ವಿಭಾಗ ಡಿಸಿಪಿ ಡಿ. ದೇವರಾಜ ನೇತೃತ್ವದಲ್ಲಿ ಆರೋಪಿಯನ್ನು ಮುಂಬೈನಲ್ಲಿ ಪತ್ತೆ ಹಚ್ಚಿ ಬೆಂಗಳೂರಿಗೆ ಕರೆತರಲಾಗಿದೆ.

    ವೃತ್ತಿಪರ ಕ್ರಿಮಿನಲ್ ನಸ್ರು, 10 ವರ್ಷಗಳಿಂದ ಕಾನೂನುಬಾಹಿರ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ. ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಿಡಿಯೋ ಚಿತ್ರೀಕರಿಸಿಕೊಂಡು ಜನರಿಗೆ ಭಯಗೊಳಿಸುತ್ತಿದ್ದ. ಗೋವಿಂದಪುರ, ಮಾದನಾಯಕನಹಳ್ಳಿ, ಬಿಡದಿ, ಎಚ್‌ಎಸ್‌ಆರ್ ಲೇಔಟ್, ಹೆಬ್ಬಾಳ, ಕೆ.ಜಿ. ಹಳ್ಳಿ- ಡಿ.ಜೆ. ಹಳ್ಳಿ, ಸಂಪಿಗೆಹಳ್ಳಿ, ಹೆಣ್ಣೂರು, ಬೇಗೂರು, ಸದಾಶಿವನಗರ ಸೇರಿ ಇತರ ಠಾಣೆಗಳಲ್ಲಿ ಸುಲಿಗೆ ಮತ್ತು ದರೋಡೆ ಸೇರಿ 12ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಗೋವಿಂದಪುರ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.

    10 ಜಾಮೀನರಹಿತ ವಾರೆಂಟ್‌ಗಳು, 1 ಪ್ರಕರಣದಲ್ಲಿ ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯವು ಪ್ರಕಟಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts