More

    ಕೋಚ್ ರಾಹುಲ್ ದ್ರಾವಿಡ್ ಹೊಸ ಅಧಿಕಾರಾವಧಿಯ ಮಾಹಿತಿ ನೀಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ, ನೂತನ ಎನ್‌ಸಿಎ ಶೀಘ್ರ ಕಾರ್ಯಾರಂಭ

    ಮುಂಬೈ: ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವಧಿಯನ್ನು ವಿಸ್ತರಿಸಲಾಗಿದ್ದು, ಹೊಸ ಅವಧಿ ಎಷ್ಟು ಸಮಯದವರೆಗೆ ಇರಲಿದೆ ಎಂಬುದರ ಬಗ್ಗೆ ಒಪ್ಪಂದ ಅಂತಿಮಗೊಳಿಸಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ.
    ಏಕದಿನ ವಿಶ್ವಕಪ್ ಟೂರ್ನಿ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ನೂತನ ಕೋಚ್ ನೇಮಕಾತಿಗೆ ಸಮಯದ ಅಭಾವವಿದ್ದು, ದ್ರಾವಿಡ್ ಅವರೊಂದಿಗೆ ಸಭೆ ನಡೆಸಿ ಪರಸ್ಪರ ಒಪ್ಪಿಗೆ ಪಡೆದ ಬಳಿಕ ಕೋಚ್ ಹಾಗೂ ತರಬೇತಿ ಬಳಗದ ಅವಧಿಯನ್ನು ವಿಸ್ತರಿಸಲಾಗಿದೆ. ಆಫ್ರಿಕಾ ಪ್ರವಾಸದ ಬಳಿಕ ರಾಹುಲ್ ದ್ರಾವಿಡ್ ಹಾಗೂ ಇತರ ತರಬೇತಿ ಸಿಬ್ಬಂದಿಯ ಅಧಿಕಾರಾವಧಿಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
    ಮೂಲಗಳ ಪ್ರಕಾರ ದ್ರಾವಿಡ್ ಬಳಗದ ಹೊಸ ಅಧಿಕಾರಾವಧಿ ಕನಿಷ್ಠ 2024ರ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯವರೆಗೆ ಇರಲಿದೆ ಎನ್ನಲಾಗಿದೆ. ಅಥವಾ 2025ರ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯವರೆಗೆ ಅವರ ಅವಧಿ ವಿಸ್ತರಣೆಯಾಗಬಹುದು ಎನ್ನಲಾಗಿದೆ. ಲೋಧಾ ಸಮಿತಿ ಶಿಾರಸಿನ ಅನ್ವಯ ಭಾರತೀಯ ಕ್ರಿಕೆಟ್‌ನ ಯಾವುದೇ ಹುದ್ದೆಯ ಒಂದು ಅವಧಿ ಮುಕ್ತಾಯಗೊಂಡ ಬಳಿಕ ನೇರವಾಗಿ ಮರುನೇಮಕಕ್ಕೆ ಅವಕಾಶವಿಲ್ಲ.

    2024ರಲ್ಲಿ ನೂತನ ಎನ್‌ಸಿಎ ಕಾರ್ಯಾರಂಭ: ಬೆಂಗಳೂರಿನಲ್ಲಿ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಎನ್‌ಸಿಎ 2024ರ ಆಗಸ್ಟ್‌ನಲ್ಲಿ ಕಾರ್ಯನಿರ್ವಹಿಸಲು ಆರಂಭಿಸಲಿದೆ. ಈಶಾನ್ಯ ಮತ್ತು ಜಮ್ಮು -ಕಾಶ್ಮೀರದಲ್ಲಿ ಅದೇ ಸಮಯದಲ್ಲಿ ಹೊಸ ಅಕಾಡೆಮಿಗಳನ್ನು ಆಗಸ್ಟ್ ಮಧ್ಯದಲ್ಲಿ ಪ್ರಾರಂಭಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರ ಅಕಾಡೆಮಿಯ ಕೆಲಸ ಪ್ರಾರಂಭವಾಗಿದೆ ಎಂದು ಜಯ್ ಷಾ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎನ್‌ಸಿಎ ಕಾರ್ಯನಿರ್ವಹಿಸಿತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts