ಕರಿಬೇವಿನ ಎಲೆಗಳಿಂದ ಹಲವಾರು ಪ್ರಯೋಜನಗಳಿವೆ. ಪ್ರತಿನಿತ್ಯ ಕರಿಬೇವಿನ ಎಲೆಗಳನ್ನು ನೀರಿನಲ್ಲಿ ನೆನೆಸಿ ಆ ನೀರನ್ನು ಕುಡಿದರೆ ದೇಹದಲ್ಲಿ ಅದ್ಭುತಗಳು ನಡೆಯುತ್ತವೆ. ಅಂದರೆ ಆರೋಗ್ಯ ವಿಚಾರದಲ್ಲಿ ಚಮತ್ಕಾರವೇ ಜರುಗಲಿದೆ.
ಕರಿಬೇವಿನ ಎಲೆಗಳನ್ನು ದಕ್ಷಿಣ ಭಾರತದ ಪಾಕಪದ್ಧತಿಯಲ್ಲಿ ಎಥೇಚ್ಛವಾಗಿ ಬಳಸಲಾಗುತ್ತದೆ. ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕರಿಬೇವಿನ ಎಲೆಗಳು ಅನೇಕ ಆರೋಗ್ಯಕರ ಲಾಭಗಳನ್ನು ಒಳಗೊಂಡಿದೆ. ಅನೇಕ ಆರೋಗ್ಯ ಸಮಸ್ಯೆಗಳ ವಿರುದ್ಧ ಕರಿಬೇವು ಉತ್ತಮವಾಗಿ ಕೆಲಸ ಮಾಡುತ್ತದೆ. ಕರಿಬೇವು ಎಲೆಗಳನ್ನು ನೆನೆಸಿದ ನೀರನ್ನು ನಿಯಮಿತವಾಗಿ ಸೇವನೆ ಮಾಡಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಧಾರಣೆ ಮಾಡಬಹುದು. ಅಲ್ಲದೆ, ದೇಹವು ಸದಾ ಆರೋಗ್ಯವಾಗಿರುತ್ತದೆ. ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ಆಗುವ ಪ್ರಯೋಜನಗಳನ್ನು ನೋಡೋಣ.
ಕೊಲೆಸ್ಟ್ರಾಲ್ ನಿಯಂತ್ರಣ
ಇಂದಿನ ಆಧುನಿಕ ಜಗತ್ತಿನಲ್ಲಿ ಕೊಲೆಸ್ಟ್ರಾಲ್ ಸಮಸ್ಯೆಯು ಅನೇಕರಲ್ಲಿ ಹೆಚ್ಚಾಗಿದೆ. ಕೊಲೆಸ್ಟ್ರಾಲ್ ಅನ್ನು ಅನೇಕ ಔಷಧಿಗಳಿಂದ ನಿಯಂತ್ರಿಸಲಾಗುವುದಿಲ್ಲ. ಈ ಸಂದರ್ಭದಲ್ಲಿ ನೀವು ಕರಿಬೇವಿನ ಎಲೆಗಳನ್ನು ಅವಲಂಬಿಸಬಹುದು. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
ಕಣ್ಣಿನ ಸಮಸ್ಯೆ ನಿವಾರಣೆ
ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಎ ಹೇರಳವಾಗಿದೆ. ಕಣ್ಣುಗಳನ್ನು ಆರೋಗ್ಯವಾಗಿ ಇಡಲು ಈ ವಿಟಮಿನ್ ತುಂಬಾ ಉಪಯುಕ್ತವಾಗಿದೆ. ಕರಿಬೇವಿನ ಎಲೆಗಳನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಕಣ್ಣುಗಳು ಆರೋಗ್ಯವಾಗಿರುತ್ತವೆ. ದೃಷ್ಟಿ ಸುಧಾರಿಸುತ್ತದೆ. ವಿವಿಧ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ.
ಕೂದಲು ಸಮಸ್ಯೆಗಳು ದೂರ
ಕರಿಬೇವಿನ ಎಲೆಗಳು ಕೂದಲಿಗೆ ತುಂಬಾ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಕೂದಲು ಉದುರುವ ಸಮಸ್ಯೆಯನ್ನು ತಕ್ಷಣವೇ ಕಡಿಮೆ ಮಾಡುತ್ತದೆ. ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ. ನೀರಿನಲ್ಲಿ ನೆನೆಸಿದ ಕರಿಬೇವಿನ ಎಲೆಗಳನ್ನು ನಿತ್ಯವೂ ಸೇವಿಸಿದರೆ, ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಕೂದಲು ದಪ್ಪ ಮತ್ತು ಕಪ್ಪುಗಾಗಲು ಸಹಕಾರಿಯಾಗಿದೆ.
ಲಿವರ್ ಆರೋಗ್ಯ
ಆರೋಗ್ಯಕರ ಜೀವನ ನಡೆಸಲು ಆರೋಗ್ಯಕರ ಯಕೃತ್ತು ಬಹಳ ಮುಖ್ಯ. ಆದರೆ ಹೊರಗಿನ ಆಹಾರ, ಜೀವನಶೈಲಿ ಬದಲಾವಣೆ ಮತ್ತು ಇತರ ಹಲವು ಕಾರಣಗಳು ಯಕೃತ್ತನ್ನು ಹಾನಿಗೊಳಿಸುತ್ತವೆ. ಲಿವರ್ ಅನ್ನು ಸುಸ್ಥಿತಿಯಲ್ಲಿಡಲು ಕರಿಬೇವಿನ ಎಲೆಗಳನ್ನು ಸೇರಿಸಬೇಕು. ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಉತ್ಕರ್ಷಣ ನಿರೋಧಕಗಳು ಯಕೃತ್ತಿನ ಹಾನಿಯನ್ನು ತಡೆಯುತ್ತದೆ. ಇದಲ್ಲದೆ, ಕರಿಬೇವು ಯಕೃತ್ತನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.
ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವ ಕರಿಬೇವು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಪರಿಣಾಮವಾಗಿ, ದೇಹವು ವಿವಿಧ ರೋಗಗಳಿಂದ ರಕ್ಷಿಸಲ್ಪಡುತ್ತದೆ. ಪ್ರತಿದಿನ ಕರಿಬೇವಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. (ಏಜೆನ್ಸೀಸ್)
ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಜಿಮ್ ತರಬೇತುದಾರ ಬಾಲಿವುಡ್ ನಟ ಹೃತಿಕ್ ರೋಷನ್ ಟ್ರೈನರ್!
ಸಿಡಿ ಕೇಸ್ನಲ್ಲಿ ಡಿಕೆಶಿ ಕೈವಾಡ ಇಲ್ಲ ಎಂಬುದು ಸಾಬೀತಾದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ರಮೇಶ್ ಜಾರಕಿಹೊಳಿ