More

    ಹಿಂದು ಧರ್ಮದ ತತ್ವಗಳು ಶಾಶ್ವತ, ಆತ್ಮ ಸ್ವರೂಪ, ಶ್ರೀಮದ್ಭಾಗವತಾ ಸಪ್ತಾಹದಲ್ಲಿ ಕುಡುಪು ಕೃಷ್ಣರಾಜ ತಂತ್ರಿ ಅನಿಸಿಕೆ

    ಮಂಗಳೂರು: ಪ್ರಪಂಚ ಮತ್ತು ಜೀವನ ದರ್ಪಣದೊಳಗಿನ ಚಿತ್ರವಿದ್ದಂತೆ. ಜೀವನದಲ್ಲಿ ದುಃಖ, ಸಂತೋಷ, ಆಸ್ತಿ-ಅಂತಸ್ತು ಯಾವುದೂ ಶಾಶ್ವತವಲ್ಲ. ಹಿಂದು ಧರ್ಮದ ತತ್ವಗಳು ಮಾತ್ರ ಶಾಶ್ವತ, ಆತ್ಮ ಸ್ವರೂಪವಾಗಿದೆ. ಭಾಗವತದಿಂದ ಅಧ್ಯಾತ್ಮದ, ಸತ್ಯದ ಅರಿವು ಸಾಧ್ಯವಾಗಿದೆ ಎಂದು ಕುಡುಪು ಕ್ಷೇತ್ರದ ಕೃಷ್ಣರಾಜ ತಂತ್ರಿ ಹೇಳಿದರು.

    ಶ್ರೀಮದ್ಭಾಗವತ ಸಪ್ತಾಹ ಸಮಿತಿ ನೀರುಮಾರ್ಗ ಮತ್ತು ರಾಧಾ ಸುರಭಿ ಗೋಮಂದಿರ ವತಿಯಿಂದ ನೀರುಮಾರ್ಗದ ನೆಕ್ಕರೆಪದವಿನಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವತಾ ಸಪ್ತಾಹದಲ್ಲಿ ಬುಧವಾರ ಉಪನ್ಯಾಸ ನೀಡಿದರು.

    ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಆಸ್ತಿ ಮಾಡಿಡುವುದು ಮುಖ್ಯವಲ್ಲ, ಅವರಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಆಸ್ತಿ-ಅಂತಸ್ತು ಅವರೇ ಸಂಪಾದನೆ ಮಾಡುತ್ತಾರೆ ಎಂದು ಹೇಳಿದರು.

    ಕೆಎಂಸಿ ಮಣಿಪಾಲದ ಎಸ್ಟೇಟ್ ಆಫೀಸರ್ ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಗೋಸೇವಾ ಪ್ರಾಂತ ಸಂಯೋಜಕ ಪ್ರವೀಣ್ ಸರಳಾಯ ಧ್ವಜಾರೋಹಣ ಮಾಡಿದರು. ಮಾಜಿ ಕಾರ್ಪೊರೇಟರ್ ಜಯಪ್ರಕಾಶ್, ಮಾಜಿ ಮೇಯರ್ ಭಾಸ್ಕರ್ ಕೆ., ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಜ್ಯೋತಿಷಿ ಅನಿಲ್ ಪಂಡಿತ್, ಉದ್ಯಮಿಗಳಾದ ಶಂಕರ್ ಪದ್ಮಶಾಲಿ, ಯಶವಂತ್ ಎಸ್.ನಾಯಕ್, ಧೀರಜ್ ಬಿ.ಉದ್ಯಾವರ, ಸಿದ್ಧಿವಿನಾಯಕ, ಸಪ್ತಾಹ ಸಮಿತಿ ಪ್ರಧಾನ ಸಂಚಾಲಕ ಚಂದ್ರಮುಖಿದಾಸ್ ಪ್ರಭು ಮತ್ತು ಮಾತಾಜಿ ಶಾಂತರಸ ದೇವಿದಾಸಿ ನಂದಗೋಕುಲ, ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಎಸ್., ಕಾರ್ಯಾಧ್ಯಕ್ಷ ಭಾಸ್ಕರ್ ಕೆ., ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ನೆಕ್ಕರೆಪದವು ಉಪಸ್ಥಿತರಿದ್ದರು.

    ಸಪ್ತಾಹ ಸಮಿತಿ ಉಪಾಧ್ಯಕ್ಷ ವಿಜಯ್ ಕೋಟ್ಯಾನ್ ಪ್ರಾಸ್ತಾವಿಕ ಮಾತನಾಡಿದರು. ಸುಬ್ರಹ್ಮಣ್ಯ ಪ್ರಸಾದ್ ವಂದಿಸಿದರು. ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು.

    ಉತ್ತರ ಭಾರತದಲ್ಲಿ ಭಾಗವತ ಪ್ರವಚನಕ್ಕೆ ವಿಶೇಷ ಆದ್ಯತೆಯಿದೆ. ಮನುಷ್ಯ ಜೀವನದ ಸಮಸ್ಯೆಗೆ ಉತ್ತರ ಕೊಡುವ ಶಕ್ತಿಯಿರುವುದು ಭಾಗವತ ಪ್ರವಚನಕ್ಕೆ. ಭಾಗವತ ಆಲಿಸುವ ಅವಕಾಶ ಸಿಗುವುದು ಒಂದು ಸುಯೋಗ. ಆತ್ಮಸಾಕ್ಷರದತ್ತ ಮನುಷ್ಯ ಮುಖ ಮಾಡಿದರೆ ಪ್ರಾಪಂಚಿಕ ಏರುಪೇರುಗಳಿಂದ ಮುಕ್ತಿ ಕಾಣಲು ಸಾಧ್ಯ. ಪ್ರಾಪಂಚಿಕವಾಗಿ ಇಂದ್ರಿಯಗಳು ನಿಯಂತ್ರಣದಲ್ಲಿದ್ದಾಗ ಆತ್ಮ ಸಾಕ್ಷಾತ್ಕಾರ ಸಾಧ್ಯ.

    ಕೃಷ್ಣರಾಜ ತಂತ್ರಿ, ಕುಡುಪು ಕ್ಷೇತ್ರದ ತಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts