More

    ನಾಮಫಲಕ ವಿವಾದ ಉರ್ದು, ಹಿಂದಿ ಆಡಿಯೋ ತುಣುಕು ವೈರಲ್

    ಭಟ್ಕಳ: ಇಲ್ಲಿಯ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಮಫಲಕದಲ್ಲಿ ಹೊಸದಾಗಿ ಬರೆಯುವ ವಿಷಯದಲ್ಲಿ ಹುಟ್ಟಿಕೊಂಡ ವಿವಾದ ಮೇಲ್ನೋಟಕ್ಕೆ ಪೊಲೀಸರ ಮಧ್ಯಪ್ರವೇಶದಿಂದ ತಣ್ಣಗಾಗಿದ್ದರೂ, ಸಂಘರ್ಷ ಏರ್ಪಡುವಂಥ ಕೆಲವು ಬೆಳವಣಿಗೆಗಳು ಆಗಿವೆ.

    ಅದಕ್ಕೆ ಪುಷ್ಟಿ ಎಂಬಂತೆ ಮಂಗಳವಾರ ಜಾಲಿ ಮಸೀದಿಯ ಬಳಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮವರು ಸೇರಬೇಕು ಎಂದು ಕೆರೆ ನೀಡುವ ಉರ್ದು ಮತ್ತು ಹಿಂದಿ ಭಾಷೆಯ ಆಡಿಯೋ ತುಣುಕುಗಳು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಒಂದೆಡೆ ಹಿಂದು ಸಂಘಟನೆಯ ಕಾರ್ಯಕರ್ತರು ಮಂಗಳವಾರ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉರ್ದು ಭಾಷೆಯ ಆಡಿಯೋ ತುಣುಕುಗಳು ವೈರಲ್ ಆಗುತ್ತಿವೆ. ಜಾಲಿಯಲ್ಲಿ ನಮ್ಮ ಬಾವುಟವಿದ್ದು ಅಲ್ಲಿ ಅವರು ತಮ್ಮ ಕೆಂಪು ಬಾವುಟ ಹಾಕಲು ಯತ್ನಿಸುತ್ತಿದ್ದಾರೆ. ಅದೆಲ್ಲಾ ಸರಿಯಾಗುವಷ್ಟರಲ್ಲಿ ನಮ್ಮವರು ಹಾಗೂ ಅವರ ಜನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದರು. ಆದರೆ, ಅಲ್ಲಿ ನಮ್ಮವರು ಹೆಚ್ಚು ಜನ ಇರಲಿಲ್ಲ. ಮದಿನಾ ಕಾಲನಿ ಸೇರಿ ಊರಿನಲ್ಲಿರುವ ಹೆಚ್ಚಿನ ಸಂಖ್ಯೆಯ ನಮ್ಮ ಹುಡುಗರು ಮಂಗಳವಾರ ಸೇರಬೇಕು ಎನ್ನುವ ಒಂದು ಆಡಿಯೋ ವೈರಲ್ ಆಗುತ್ತಿದೆ. ಅಲ್ಲಿ ಸಾಕಷ್ಟು ಜನ ಪೊಲೀಸರು ಇದ್ದಾರೆ. ಅವರು ಹಾಕಿದ ಕಂಬವನ್ನು ಪೊಲೀಸರು ಕಿತ್ತೊಗೆದಿದ್ದಾರೆ. ಹಾಗಾಗಿ ಯಾರೂ ಬರುವ ಅಗತ್ಯವಿಲ್ಲ ಎನ್ನುವ ಸಂದೇಶದ ಇನ್ನೊಂದು ಆಡಿಯೋ ಸಹ ವೈರಲ್ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts