More

    ಹಿಂದಿ ಹಾರ್ಟ್​ಲ್ಯಾಂಡ್​ನಲ್ಲಿ ಅಚ್ಚರಿಯ ಆಯ್ಕೆಗಳ ಹಿಂದಿದೆ 2024ರ ಚುನಾವಣೆಯ ಬಿಜೆಪಿ ಗೇಮ್​ ಪ್ಲಾನ್​

    ನವದೆಹಲಿ: ವಿಷ್ಣು ದೇವ ಸಾಯಿ, ಮೋಹನ್ ಯಾದವ್ ಮತ್ತು ಭಜನ್‌ಲಾಲ್ ಶರ್ಮಾ ಇವರು ಕ್ರಮವಾಗಿ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ನೂತನ ಮುಖ್ಯಮಂತ್ರಿಗಳು. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯ ಸಾಧಿಸಿದ ನಂತರ ಕೇಳಿಬಂದ ಸಿಎಂ ರೇಸ್​ನಲ್ಲಿ ಈ ಹೆಸರುಗಳೇ ಇರಲಿಲ್ಲ. ಮುಂದಿನ ವರ್ಷ 2024ರ ಲೋಕಸಭೆ ಚುನಾವಣೆಯ ಗೆಲುವಿಗಾಗಿ ಗೇಮ್​ ಪ್ಲಾನ್​ ಮಾಡಿಕೊಂಡೇ ಬಿಜೆಪಿ ವರಿಷ್ಠರು ಈ ಅಚ್ಚರಿಯ ಅಯ್ಕೆಗಳನ್ನು ಮಾಡಿದ್ದಾರೆ. ಹಿಂದಿ ಹಾರ್ಟ್​ಲ್ಯಾಂಡ್​ ರಾಜ್ಯಗಳಲ್ಲಿ ಜಾತಿ/ವರ್ಗಗಳ ನಡುವೆ ಸಮತೋಲನ ಕಾಯ್ದುಕೊಂಡು ಚುನಾವಣೆ ಗೆಲ್ಲುವ ಬಿಜೆಪಿಯ ಮಾಸ್ಟರ್‌ಪ್ಲಾನ್‌ ಇದಾಗಿದೆ.

    ಉದಾಹರಣೆಗೆ, ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯಗಳ ಜನಸಂಖ್ಯೆಯು ಶೇಕಡಾ 32 ರಷ್ಟಿದೆ. ಇಲ್ಲಿ ಬಿಜೆಪಿಯು ಬುಡಕಟ್ಟು ನಾಯಕನನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ಮಧ್ಯಪ್ರದೇಶದಲ್ಲಿ, ಬಿಜೆಪಿಯು ಬಿಗಿ ಕಸರತ್ತು ನಡೆಸಿದೆ. ವಿವಿಧ ಸಮುದಾಯಗಳು ಮತ್ತು ಅದರ ರಾಜಕೀಯ ಪ್ರತಿನಿಧಿಗಳನ್ನು ಸಮಾಧಾನಗೊಳಿಸಲು ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಿದೆ. ಇಲ್ಲಿ ಈಗ ಯಾದವ ಸಮುದಾಯದ (ಒಬಿಸಿ) ವ್ಯಕ್ತಿ ಸಿಎಂ ಆಗಿ ಆಯ್ಕೆಯಾದರೆ, ದಲಿತ (ಜಗದೀಶ್ ದೇವದಾ) ಮತ್ತು ಬ್ರಾಹ್ಮಣ (ರಾಜೇಂದ್ರ ಶುಕ್ಲಾ) ಅವರು ಉಪಮುಖ್ಯಮಂತ್ರಿಗಳಾಗಿದ್ದಾರೆ. ಇದೇ ವೇಳೆ ಠಾಕೂರ್ (ಮಾಜಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್) ಸಮುದಾಯದವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ.

    ರಾಜಸ್ಥಾನದಲ್ಲಿ ಬ್ರಾಹ್ಮಣ ಸಮುದಾಯವು ಜನಸಂಖ್ಯೆಯ ಶೇಕಡಾ ಏಳು ಪ್ರತಿಶತದಷ್ಟಿದ್ದು, ಇದೇ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ದಿಯಾ ಕುಮಾರಿ (ರಜಪೂತ) ಮತ್ತು ಪ್ರೇಮ್ ಚಂದ್ ಬೈರ್ವಾ (ದಲಿತ) ಉಪಮುಖ್ಯಮಂತ್ರಿಗಳಾಗಿದ್ದಾರೆ.

    ಬಿಜೆಪಿ ಅಥವಾ ಯಾವುದೇ ಪಕ್ಷವು ಚುನಾವಣೆ ದೃಷ್ಟಿಯಿಂದ ಪ್ರಮುಖ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಅಥವಾ ಸಚಿವರನ್ನು ಆಯ್ಕೆ ಮಾಡುವುದು ಹೊಸದೇನಲ್ಲ. ಆದರೆ, ಇದರಲ್ಲಿ ಗಮನಾರ್ಹವಾದುದು ವಿಷ್ಣು ದೇವ್ ಸಾಯಿ, ಮೋಹನ್ ಯಾದವ್ ಮತ್ತು ಭಜನ್‌ಲಾಲ್ ಶರ್ಮಾ ಹಾಗೂ ಅವರ ಉಪಮುಖ್ಯಮಂತ್ರಿಗಳ ಹೆಸರುಗಳನ್ನು ಆಯ್ಕೆ ಮಾಡುವ ಯೋಜನೆ. ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಯ ಆಯ್ಕೆಗಳು ಸುತ್ತಮುತ್ತಲ ರಾಜ್ಯಗಳಲ್ಲಿನ ಸಮುದಾಯಗಳು ಮತ್ತು ಜಾತಿಗಳ ಲೆಕ್ಕಾಚಾರವನ್ನು ಆಧರಿಸಿರುವುದು ಮಹತ್ವದ ಸಂಗತಿಯಾಗಿದೆ.

    ಛತ್ತೀಸ್​ಗಢದಲ್ಲಿ ಬುಡಕಟ್ಟು ಬಾಣ:

    ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿಯು ರಾಜ್ಯದ ಬುಡಕಟ್ಟು ಪ್ರದೇಶವಾದ ಸುರ್ಗುಜಾ ಮತ್ತು ಬಸ್ತಾರ್‌ನಲ್ಲಿ 26 ಸ್ಥಾನಗಳ ಪೈಕಿ 22 ಸ್ಥಾನಗಳನ್ನು ಗೆದ್ದುಕೊಂಡಿತು, ಹೀಗಾಗಿ, ಆ ಸಮುದಾಯದ ಸದಸ್ಯರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದನ್ನು ಬಿಟ್ಟು ಪಕ್ಷಕ್ಕೆ ಸ್ವಲ್ಪ ಆಯ್ಕೆ ಇರಲಿಲ್ಲ. ಈ ಕಾರಣಕ್ಕಾಗಿ ಸಾಯಿ ಅವರು ಸಿಎಂ ಆದರು.

    ಛತ್ತೀಸ್‌ಗಢದ ಗಡಿಯಲ್ಲಿರುವ ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳು ಗಣನೀಯ ಪ್ರಮಾಣದ ಬುಡಕಟ್ಟು ಸಮುದಾಯಗಳನ್ನು ಹೊಂದಿವೆ. ಇಲ್ಲಿ ಕ್ರಮವಾಗಿ ಅಂದಾಜು 22 ಮತ್ತು 26 ಪ್ರತಿಶತಕ್ಕಿಂತ ಹೆಚ್ಚು ಈ ಸಮುದಾಯದ ಮತಗಳಿವೆ. ಮತ್ತೊಂದು ಗಡಿ ರಾಜ್ಯ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ತವರು ರಾಜ್ಯ ಒಡಿಶಾದಲ್ಲಿ ಕೂಡ ಬುಡಕಟ್ಟು ಸಮುದಾಯಗಳ ಜನಸಂಖ್ಯೆಯ ಶೇಕಡಾ 23 ಕ್ಕಿಂತ ಹೆಚ್ಚು ಇದೆ.

    ಛತ್ತೀಸ್‌ಗಢದಲ್ಲಿ ಶ್ರೀ ಸಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವುದರಿಂದ 2024ರ ಚುನಾವಣೆಯಲ್ಲಿ ಈ ರಾಜ್ಯಗಳಲ್ಲಿ ಬುಡಕಟ್ಟು ಸ್ನೇಹಿ ಮುಖವೆಂದು ಬಿಜೆಪಿಯನ್ನು ಬಿಂಬಿಸಲು ಸಾಧ್ಯವಾಗಲಿದೆ. ಈ ನಾಲ್ಕು ರಾಜ್ಯಗಳು ಸೇರಿ 75 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಇದರಲ್ಲಿ 20 ಬುಡಕಟ್ಟು ಸಮುದಾಯಗಳಿಗೆ ಮೀಸಲಾಗಿವೆ. ಇದಲ್ಲದೆ, ಹತ್ತಾರು ಕ್ಷೇತ್ರಗಳಲ್ಲಿ ಈ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.

    ಮಧ್ಯಪ್ರದೇಶ ಲೆಕ್ಕದಲ್ಲಿ ಯುಪಿ, ಬಿಹಾರದ ಗಣಿತ:

    ಮಧ್ಯಪ್ರದೇಶದ ಗಡಿ ಭಾಗದಲ್ಲಿ ಬಿಜೆಪಿಯು ಬುಡಕಟ್ಟು ಮತಗಳನ್ನು ಶ್ರದ್ಧೆಯಿಂದ ಟ್ರ್ಯಾಕ್ ಮಾಡುತ್ತಿದೆ; ಈ ಚುನಾವಣೆಯಲ್ಲಿ ಪಕ್ಷವು 47 ವಿಧಾನಸಭೇ ಸ್ಥಾನಗಳಲ್ಲಿ 24 ಸ್ಥಾನಗಳನ್ನು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಿಡುವುದರೊಂದಿಗೆ ಲಾಭ ಪಡೆದುಕೊಂಡಿದೆ. ಈ ರಾಜ್ಯದ ಜನಸಂಖ್ಯೆ ಲೆಕ್ಕದಲ್ಲಿ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿರುವ ಸಮುದಾಯದ ಜಗದೀಶ್ ದೇವದಾ ಅವರು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಮೇಲ್ವರ್ಗದ ಮತದಾರರನ್ನು ಸಂತೋಷವಾಗಿರಿಸಿಕೊಳ್ಳುವ ಕ್ರಮ ಇದಾಗಿದೆ.

    ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಯಾದವ್ ಅವರನ್ನು ಆಯ್ಕೆ ಮಾಡಿರುವುದು ಬಿಜೆಪಿಯು ರಾಜಕೀಯವಾಗಿ ನಿರ್ಣಾಯಕ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರಗಳ ಮೇಲೆ ತನ್ನ ದೃಷ್ಟಿಯನ್ನು ನೆಟ್ಟಿರುವುದನ್ನು ಸೂಚಿಸುತ್ತದೆ, ಈ ರಾಜ್ಯಗಳು 120 ಸಂಸದರನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸುತ್ತವೆ.
    ಬಿಜೆಪಿಯು ಈ ಎರಡು ರಾಜ್ಯಗಳು ಸೇರಿ ಹಿಂದಿಯ ಹೃದಯಭಾಗದಲ್ಲಿ ಪ್ರಾಬಲ್ಯ ಮುಂದುವರಿಸಿದೆ ಮೋದಿ ಅವರು ಮೂರನೇ ಅವಧಿ ಪ್ರಧಾನಿಯಾಗಿ ಆಯ್ಕೆಯಾಗುವದುನ್ನು ತಡೆಯಲು ಪ್ರತಿಪಕ್ಷಗಳು ಬಹುತೇಕ ಅಸಾಧ್ಯವಾಗಲಿದೆ.

    ಮಧ್ಯಪ್ರದೇಶದಲ್ಲಿ ಯಾದವರು ಒಟ್ಟಾರೆ ಜನಸಂಖ್ಯೆಯ ಕೇವಲ ಆರು ಪ್ರತಿಶತದಷ್ಟಿದ್ದಾರೆ. ಆದರೂ, ಅವರು ಬಿಹಾರದಲ್ಲಿ ಅತಿ ದೊಡ್ಡ ಒಬಿಸಿ ಗುಂಪು (ಶೇ. 14 ಕ್ಕಿಂತ ಹೆಚ್ಚು) ಮತ್ತು ಉತ್ತರಪ್ರದೇಶದಲ್ಲಿ 10 ಪ್ರತಿಶತದಷ್ಟಿದ್ದಾರೆ.
    ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಯಾದವ್ ಅವರ ಆಯ್ಕೆಯು ಮೂರು ರಾಜ್ಯಗಳಲ್ಲಿ ಹರಡಿರುವ ಈ ಸಮುದಾಯಕ್ಕೆ ಸಬಲೀಕರಣದ ಸಂದೇಶವಾಗಿದೆ. ಈ ಮೂರು ರಾಜ್ಯಗಳು ಒಟ್ಟು 149 ಸಂಸದರನ್ನು ಸಂಸತ್ತಿಗೆ ಕಳುಹಿಸುತ್ತವೆ ಎಂಬುದು ಗಮನಾರ್ಹ.

    ಲಾಭ ಗಳಿಸಲು ಮಾರಾಟಕ್ಕೆ ಮುಂದಾದ ಹೂಡಿಕೆದಾರರು: ಷೇರು ಮಾರುಕಟ್ಟೆಯ ಸೂಚ್ಯಂಕ ಅಲ್ಪ ಕುಸಿತ

    ಸಂಸತ್ತಿನಲ್ಲಿಯೇ ಡಿಕೆಶಿ ವಿರುದ್ಧ ಹರಿಹಾಯ್ದ ಖರ್ಗೆ: ಕರ್ನಾಟಕ ಜಾತಿ ಗಣತಿ ಕುರಿತ ಕಾಂಗ್ರೆಸ್​ ನಾಯಕರ ಅಪಸ್ವರ ದೇಶಾದ್ಯಂತ ಬಹಿರಂಗ

    ರಾಜಸ್ಥಾನ ನೂತನ ಉಪಮುಖ್ಯಮಂತ್ರಿ ದಿಯಾ ಕುಮಾರಿ: ಯಾರೀ ರಾಜಕುಮಾರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts