More

    ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ರೂ. ಬಹುಮಾನ!

    ಮಂಡ್ಯ: ಹಿಜಾಬ್​ ವಿವಾದದ ಹಿನ್ನೆಲೆಯಲ್ಲಿ ನಿನ್ನೆ ಮಂಡ್ಯದ ಪಿಇಎಸ್​ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ಮುಂದೆ ಬುರ್ಕಾ ಧರಿಸಿದ್ದ ವಿದ್ಯಾರ್ಥಿನಿಯೊಬ್ಬಳು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಳು. ಆ ಮೂಲಕ ಕೇಸರಿಧಾರಿ ವಿದ್ಯಾರ್ಥಿಗಳಿಗೆ ತನ್ನ ಪ್ರತಿರೋಧ ತೋರಿದ್ದಳು.

    ಮುಸ್ಕಾನಾ ಎಂಬ ಆ ವಿದ್ಯಾರ್ಥಿನಿಯ ಮನೆಗೆ ಇಂದು ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಭೇಟಿ ನೀಡಿದ್ದಾರೆ. ಈಕೆ ಹಿಂದು ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಳು.

    ಘಟನೆ ಸಂಬಂಧ ಮುಸ್ಕಾನಾ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದ ಇಮ್ರಾನ್ ಪಾಷಾ, ಮುಸ್ಕಾನಾ ಕುಟುಂಬಕ್ಕೆ ಧೈರ್ಯ ಹೇಳಿ 1 ಲಕ್ಷ ರೂ. ಮೊತ್ತದ ಚೆಕ್ ವಿತರಣೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಕಾನೂನಾತ್ಮಕವಾಗಿ ಯಾವುದೇ ಕ್ರಮ ತೆಗೆದುಕೊಂಡರೂ ನಿಮ್ಮ ಜೊತೆ ಇರುತ್ತೇನೆ. ಯಾರಾದರೂ ತೊಂದರೆ ಕೊಟ್ಟರೆ ಪೊಲೀಸರಿಗೆ ದೂರು ನೀಡಲು ಹೇಳಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಶಾಲಾ ಸಮವಸ್ತ್ರದ ಬಗ್ಗೆ ಶಿಕ್ಷಣ ಸಚಿವರಿಂದ ಸ್ಪಷ್ಟನೆ!; ಇಲ್ಲಿದೆ ವಿವರ….

    ಜೈ ಶ್ರೀರಾಮ್ ಅಂತ ಕೂಗುವುದರಲ್ಲಿ ತಪ್ಪೇನಿಲ್ಲ. ಆದರೆ ಆ ವಿದ್ಯಾರ್ಥಿಗಳನ್ನು ಯಾರೋ ಪ್ರಚೋದನೆ ಮಾಡಿದ್ದಾರೆ ಎಂದಿರುವ ಇಮ್ರಾನ್, ಮುಸ್ಕಾನಾಗೆ ಯೂತ್ ಐಕಾನ್ ಬಿರುದು, ನಗದು ಬಹುಮಾನ ಘೋಷಣೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಒಳ್ಳೆಯ ಭಾವನೆ ಇಟ್ಟುಕೊಂಡು ಕೊಟ್ಟರೆ ಸರಿ, ಕೆಟ್ಟ ಉದ್ದೇಶದಿಂದ ಆ ರೀತಿ ಹಣ ನೀಡುವುದು ತಪ್ಪು. ಯಾರೋ ಬಂದು ಏನೋ ಕೊಟ್ಟರೆ ಅದನ್ನು ನೆಗೆಟಿವ್ ಆಗಿ ತಗೋಬಾರದು, ಬಂದ ದುಡ್ಡನ್ನು ಬಡವರಿಗೆ ಕೊಡುವುದಾಗಿ ಮುಸ್ಕಾನಾ ಕುಟುಂಬ ಹೇಳಿದೆ ಎಂದು ಇಮ್ರಾನ್​ ತಿಳಿಸಿದ್ದಾರೆ.

    ಹಿಜಾಬ್​ ಕಿಚ್ಚು ಹೊತ್ತಿಸಿದವರ ಶಕ್ತಿಪ್ರದರ್ಶನ: ಅದೇ ಆರು ವಿದ್ಯಾರ್ಥಿನಿಯರಿಂದ ಮತ್ತೆ ತಕರಾರು

    ಹಿಜಾಬ್​-ಕೇಸರಿ ಸಂಘರ್ಷದ ನಡುವೆ ಇದೇನಿದು ಮತ್ತೊಂದು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts