More

    ಡಿಕೆಸು ಕನ್ನಡ ಶಾಲಿನ ಗುಟ್ಟು ರಟ್ಟು!

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇತ್ತೀಚೆಗೆ ಕೆಂಪು, ಹಳದಿ ಬಣ್ಣದ ಕನ್ನಡ ಶಾಲನ್ನು ಹೆಚ್ಚು ಧರಿಸುತ್ತಿರುವುದು, ನಾಮ ಪತ್ರ ಸಲ್ಲಿಸುವಾಗಲೂ ಪಕ್ಷದ ಶಾಲು ಬಿಟ್ಟು ಕನ್ನಡ ಶಾಲು ಹಾಕಿದ್ದರು.
    ಚುನಾವಣೆ ಸಮಯದಲ್ಲಿ ಡಿ.ಕೆ ಸುರೇಶ್ ಅವರ ನಿಲುವು ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಕನ್ನಡ ಶಾಲಿನ ಮೇಲಿನ ಪ್ರೇಮದ ಬಗ್ಗೆ ಅವರ ಸಹೋದರ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
    ಡಿ.ಕೆ ಸುರೇಶ್ ಪಕ್ಷದ ಬಾವುಟ ಬಿಟ್ಟು ಕನ್ನಡ ಬಾವುಟ ಹಾಕಿಕೊಳ್ಳುತ್ತಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ನಮಗೆ ರಾಷ್ಟ್ರಧ್ವಜ, ಪಕ್ಷದ ಧ್ವಜ, ನಾಡ ಧ್ವಜದ ಮೇಲೆ ಗೌರವವಿದೆ. ನಮ್ಮ ನಾಡು, ಭೂಮಿ, ನಮಗೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ರಾಜ್ಯದ ಹಿತ ಕಾಯಲು ನಾವು ಕನ್ನಡಿಗರಿಗೆ ಕರೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
    ಕೇಂದ್ರ ಬಜೆಟ್ ಮಂಡನೆ ಬಳಿಕ ಪ್ರತಿಕ್ರಿಯಿಸಿದ್ದ ಡಿ.ಕೆ ಸುರೇಶ್, ಕೇಂದ್ರದ ಬಿಜೆಪಿ ಸರ್ಕಾರ ದಕ್ಷಿಣ ಭಾರತದ ತೆರಿಗೆ ಹಣವನ್ನು ಉತ್ತರ ಭಾರತಕ್ಕೆ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ಅನ್ಯಾಯವಾಗುತ್ತಿದೆ. ನಮ್ಮ ರಾಜ್ಯಗಳ ಹಣ ನಮಗೇ ಹಂಚಿಕೆಯಾಗಬೇಕಾದರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯವಾಗಿದೆ ಎಂದಿದ್ದರು.
    ಹೀಗಾಗಿ ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾಗುತ್ತದೆ ಮತ್ತು ಮುಂದೆ ದಕ್ಷಿಣ ಭಾರತದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಲಿವೆ ಎಂದು ಅವರು ಹೇಳಿದ್ದರು. ಬಳಿಕ ಬಿಜೆಪಿ ನಾಯಕರು ಈ ವಿಷಯ ಇಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು. ಖುದ್ದು ಪ್ರಧಾನಿ, ಕೇಂದ್ರ ಗೃಹ ಸಚಿವರೇ ಈ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್‌ಗೆ ಕುಟುಕಿದ್ದರು.
    ಇದರ ಮುಂದುವರಿದ ಭಾಗವಾಗಿ ಡಿ.ಕೆ ಸುರೇಶ್ ತಮ್ಮ ಮತದಾರರಿಗೆ ಕನ್ನಡ ಅಸ್ಮಿತೆಯನ್ನು ತೋರಿಸಲು ಕನ್ನಡ ಶಾಲು ಬಳಸುತ್ತಿದ್ದಾರೆಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts