More

    ಶಿರಸಂಗಿ ಲಿಂಗರಾಜರ ತ್ಯಾಗ ಸ್ಮರಣೀಯ

    ನರಗುಂದ: ದಾನವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರ ತ್ಯಾಗ ಮತ್ತು ಉದಾರ ಮನೋಭಾವ ಸ್ಮರಣೀಯವಾದುದು ಎಂದು ಪತ್ರಿವನಮಠದ ಶ್ರೀ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.

    ಶ್ರೀ ಶಿವಯ್ಯಜ್ಜನವರ 72ನೇ, ಶಂಭುಲಿಂಗ ಶಿವಯೋಗಿಗಳ 14ನೇ ಪುಣ್ಯ ಸ್ಮರಣೋತ್ಸವದ ಪ್ರಯುಕ್ತ ಪಟ್ಟಣದ ಪುಣ್ಯಾರಣ್ಯ ಪತ್ರಿವನಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ತ್ಯಾಗವೀರ ಶಿರಸಂಗಿ ಲಿಂಗರಾಜರ 162ನೇ ಜಯಂತ್ಯುತ್ಸವ, ಶ್ರೀಮಠದ ಬಿಲ್ವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಶಿರಸಂಗಿ ಲಿಂಗರಾಜರು ಕೈಗೊಂಡಿರುವ ಯೋಜನೆಗಳು ಇಂದಿಗೂ ಪ್ರಚಲಿತವಿವೆ. ಕೃಷಿ ಮತ್ತು ನೀರಾವರಿ ಬಗೆಗಿನ ಕಾಳಜಿ, ರೈತರ ಪರವಾದ ನಿಲುವು, ಶಿಕ್ಷಣ ಮತ್ತು ಸಮಾಜದ ಒಲವುಗಳು ಶ್ರೇಷ್ಠತೆಯ ಸ್ಥಾನಮಾನ ಹೊಂದಿದ್ದವು. ಸಮಾಜ ಸಂಘಟನೆಗೆ ಹಲವು ದತ್ತಿ ದಾನಗಳನ್ನು ನೀಡಿದ್ದಲ್ಲದೇ ಇಡೀ ಸರ್ವಸ್ವವನ್ನು ಸಮಾಜಕ್ಕೋಸ್ಕರ ಮುಡುಪಾಗಿಟ್ಟ ಧೀರೋದಾತ್ತರಾಗಿದ್ದರು ಎಂದರು.

    ಧಾರವಾಡ ಜಿಲ್ಲೆ ಧಡೇನಾಗರಕೊಪ್ಪದ ನಿವೃತ್ತ ಮುಖ್ಯೋಪಾಧ್ಯಾಯ ಬಿ.ಕೆ. ಹೊಂಗಲ, ಹೊಳೆಆಲೂರಿನ ರಥಶಿಲ್ಪಿ ಪಾಂಡುರಂಗ ಶಂಕ್ರಪ್ಪ ಬಡಿಗೇರ ಅವರಿಗೆ ಬಿಲ್ವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಜತ್ತ ತಾಲೂಕಿನ ಅಫ್ಜಲ್​ಖಾನ್ ಪ್ರಥಮ (10,001 ರೂ.), ಮುನವಳ್ಳಿಯ ಸಮೀರ್ ದ್ವೀತಿಯ (7001ರೂ.), ಶಬ್ಬೀರ ಬಂಡ್ರೊಳ್ಳಿ ತೃತೀಯ (5001ರೂ.), ಬೀಳಗಿಯ ರಿಯಾಜ್ ಬಿಸನಳ್ಳಿ ಚತುರ್ಥ (3001ರೂ.)ನರಗುಂದದ ಕಾಶೀನಾಥ ಸವದತ್ತಿ 5ನೇ ಸ್ಥಾನ (1001ರೂ.) ಪಡೆದರು. ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

    ಮಲ್ಲಾಪೂರದ ಬಸಯ್ಯಸ್ವಾಮಿ ಭಿಕ್ಷಾವತಿಮಠ, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ ತಿರಕನಗೌಡ್ರ, ಶಂಕರ ಕಳಿಗೊಣ್ಣವರ, ಶಂಕ್ರಣ್ಣ ಫೈಲ್ವಾನ್, ವಿರೂಪಾಕ್ಷಪ್ಪ ಹಡಪದ, ಈಶ್ವರಯ್ಯ ಮಠಪತಿ, ಲಕ್ಷ್ಮೀಬಾಯಿ ಪವಾರ, ಬಿ.ಎಂ. ಬೀರನೂರ, ಶಂಕ್ರಪ್ಪ ಹೂಗಾರ, ವಿಠ್ಠಲ ಶಿಂಧೆ, ಪ್ರಕಾಶ ಪಟ್ಟಣಶೆಟ್ಟಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts