More

    ತುಳುನಾಡಲ್ಲಿ ಜ್ಞಾನ ಶಾಖೆಯ ಬೇರು

    ಉಡುಪಿ: ತುಳುನಾಡಿನ ಉದ್ದಗಲಕ್ಕೂ ಜ್ಞಾನ ಶಾಖೆಯ ಬೇರುಗಳಿವೆ. ಹಿರಿಯರ ಗಾದೆ, ಒಗಟು, ಪ್ರತಿ ಮಾತಿನಲ್ಲೂ ಜ್ಞಾನ ಸ್ಫುರಿಸುತ್ತದೆ. ಕರಾವಳಿಯ ಶ್ರೀಮಂತ ಕಲಾ ಪರಂಪರೆ ಹಾಗೂ ಅಭಿರುಚಿಗೆ ಇದುವೇ ಮೂಲ ಕಾರಣ ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಸ್ಥಾಪಕ ತುಕಾರಾಮ ಪೂಜಾರಿ ಹೇಳಿದರು.

    ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆಶ್ರಯದಲ್ಲಿ ಬುಧವಾರ ಎಂಜಿಎಂ ಕಾಲೇಜು ರವೀಂದ್ರ ಮಂಟಪದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್.ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

    ಮಣಿಪಾಲ ವಿಶ್ವವಿದ್ಯಾಲಯ ಕುಲಸಚಿವ ಡಾ.ನಾರಾಯಣ ಸಭಾಹಿತ್ ಮಾತನಾಡಿ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳು ಕಲೆ, ಸಂಸ್ಕೃತಿ ಮತ್ತು ಭಾಷಾ ವೈವಿಧ್ಯ ಹೊಂದಿದೆ. ಇದರ ಕುರಿತ ಸಂಶೋಧನೆಗೆ ವಿಸ್ತಾರ ಅವಕಾಶ ಇದೆ.ಮಾಹೆ ಉತ್ತಮ ಸಂಶೋಧಕರನ್ನು ಗುರುತಿಸಿ ತುಳುನಾಡು ಸಂಸ್ಕೃತಿ ಕುರಿತು ಸಂಶೋಧನೆಯನ್ನು ಪ್ರೋತ್ಸಾಹಿಸಲಿದೆ. ಬೇರೆ ಭಾಷೆಗಳ ಸಾಹಿತ್ಯದ ಅನುವಾದ ಮತ್ತು ಪ್ರಕಟಣೆಯನ್ನು ಮಾಹೆ ಕೈಗೆತ್ತಿಕೊಂಡಿದೆ ಎಂದು ಹೇಳಿದರು.

    ಡಾ.ಟಿ.ಕೆ.ರವೀಂದ್ರನ್ ಅಭಿನಂದನಾ ಭಾಷಣ ಮಾಡಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ.ದೇವಿದಾಸ್ ಎಸ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವಿಕಾಸಗೊಳ್ಳುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಕಥನ ಕುರಿತು ಮಂಗಳೂರು ವಿವಿ ಇತಿಹಾಸ ವಿಭಾಗದ ಡಾ.ಕೆ.ಎಂ.ಲೋಕೇಶ್ ಮಾತನಾಡಿದರು. ಪ್ರಶಸ್ತಿ ಸಮಿತಿ ಸದಸ್ಯೆ ಡಾ.ಇಂದಿರಾ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಗೋವಿಂದ ಪೈ ಸಂಶೋಧನಾ ಕೇಂದ್ರ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಸ್ವಾಗತಿಸಿದರು. ಶ್ರಾವ್ಯ ಪ್ರಾರ್ಥಿಸಿದರು, ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ವಂದಿಸಿ, ಶಿವಕುಮಾರ್ ಅಳಗೋಡು ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts